ವಾಹನ ಸವಾರರಿಗೆ ಪೊಲೀಸ್ ಪೇದೆಗಳು ದಂಡ ಹಾಕುವಂತಿಲ್ಲ; ಬೈಕ್ ಸವಾರರನ್ನು ಬಲವಂತವಾಗಿ ನಿಲ್ಲಿಸುವಂತಿಲ್ಲ! ಹೈಕೋರ್ಟ್ ಮಹತ್ವದ ಆದೇಶ.!

0
11716

ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆಯ ನಿಯಮ ಬಂದ ನಂತರ ಸಾರ್ವಜನಿಕರು ವಾಹನ ಚಾಲನೆ ಮಾಡಲು ಹೆದರುತ್ತಿದ್ದಾರೆ. ಏಕೆಂದರೆ ಸಿಕ್ಕಿದೆ ಚಾನ್ಸ್ ಎಂದು ಪೊಲೀಸ್ರು ಹಣ ಸುಲಿಯಲು ನಿಂತಿದ್ದಾರೆ. ಅದರಲ್ಲಿ ಪೇದೆಗಳು ಕೂಡ ವಾಹನ ಸವಾರರಿಗೆ ಬೇದರಿಕೆ ಹಾಕಿ ಹಣ ವಸೂಲಿ ಮಾಡುತ್ತಿರುವುದು ಎಲ್ಲ ಕಡೆಯಲ್ಲಿ ನಡೆಯುತ್ತಿದೆ. ಈ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಸೌಮ್ಯಲತಾ ಮಾಹಿತಿ ನೀಡಿದ್ದು, ಭಾರತೀಯ ಮೋಟಾರು ವಾಹನ ಕಾಯ್ದೆಯ 122 ನೇ ಕಲಂ ಪ್ರಕಾರ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಹಾಗೂ ಒಂದು ಎರಡು-ಮೂರು ಸ್ಟಾರ್ ಇರುವ ಅಧಿಕಾರಿಗಳಿಗೆ ಮಾತ್ರ ದಂಡ ವಸೂಲಿ ಮಾಡುವ ಅಧಿಕಾರವಿದೆ.

ಆದರೆ ಆದರೆ ಹೆಡ್ ಕಾನ್ಸ್‌ಟೇಬಲ್ ಮತ್ತು ಕಾನ್ಸ್‌ಟೇಬಲ್-ಗಳು ದಂಡ ವಸೂಲಿ ಮಾಡಲು ಅರ್ಹರಲ್ಲ, ಒಂದು ವೇಳೆ ‘ಸ್ಟಾರ್’ ಇಲ್ಲದ ಪೊಲೀಸರು ದಾಖಲೆ ನೀಡುವಂತೆ
ಒತ್ತಾಯ ಮಾಡಿದರೆ ಅದನ್ನು ನೀದಡಿದ್ದ ಕಾರಣಕ್ಕೆ ದಂಡ ವಿಧಿಸಿದರೆ ಅವರ ವಿರುದ್ಧ ಆಯಾ ವ್ಯಾಪ್ತಿಯ ಎಸಿಪಿ ಅಥವಾ ಡಿಸಿಪಿಗಳಿಗೆ ಲಿಖಿತ ದೂರು ನೀಡಬಹುದು. ಅದಕ್ಕಾಗಿ ಈ ರೀತಿ ದೂರು ದಾಖಲು ಮಾಡುವಾಗ ನಿಮ್ಮನ್ನು ಚೆಕ್ ಮಾಡಿರುವ ಜಾಗ, ವೇಳೆ ಹಾಗೂ ಆ ಪೊಲೀಸ್ ಹೆಸರು ತಿಳಿದುಕೊಳ್ಳುವುದು ಮುಖ್ಯ ದೂರಿನಲ್ಲಿ ಸತ್ಯಾಂಶ ಇದ್ದರೆ ಅಂಥವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುಲಾಗುವುದು ಎಂದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸೌಮ್ಯಲತಾ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಬೈಕ್ ಸವಾರರನ್ನು ತಡೆದು ನಿಲ್ಲಿಸುವಂತಿಲ್ಲ?

ಹೊಸ ಕಾಯ್ದೆ ಬಂದಾಗಿನಿಂದ ಎಲ್ಲಂದರಲ್ಲಿ ಟ್ರಾಫಿಕ್ ಪೊಲೀಸರು ವಾಹನ ಚಾಲಕರನ್ನು ಅಡ್ಡಗಟ್ಟಿ ನಿಲ್ಲಿಸಿ ಹಲವು ವಿಚಾರಣೆಯ ನೆಪದಲ್ಲಿ ಬೈಕ್ ಸವಾರರನ್ನು ಹಿಂಸಿಸುತ್ತಿರುವುದು ಹಲವೆಡೆ ವರದಿಯಾಗಿದೆ. ಆದರೆ ಇನ್ನು ಮುಂದೆ ಬಲವಂತವಾಗಿ ಅಥವಾ ಒತ್ತಡವಾಗಿ ಬೈಕ್ ಸವಾರರನ್ನು ತಡೆದು ನಿಲ್ಲಿಸುವ ಅಧಿಕಾರ ಟ್ರಾಫಿಕ್ ಪೊಲೀಸರಿಗೆ ಇಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ನಿಲ್ಲಲು ಸಂಚಾರಿ ಪೊಲೀಸರು ಸೂಚಿಸಬಹುದೇ ವಿನಃ ಅವರನ್ನು ನಿಲ್ಲುವಂತೆ ಒತ್ತಡ ಹೇರುವಂತಿಲ್ಲ. ಬಲ ಪ್ರದರ್ಶನ ಮಾಡುವಂತಿಲ್ಲ ಹಾಗೂ ಅವರನ್ನು ಬೆನ್ನಟ್ಟಿ ಹೋಗುವಂತಿಲ್ಲ ಎಂದು ಹೈಕೋರ್ಟ್ ಆದೇಶ ಮಾಡಿದೆ.

ವಾಹನ ಚೇಸ್ ಮಾಡುವಂತಿಲ್ಲ?

ಕೇರಳ ಹೈಕೋರ್ಟ್‌ನ ಈ ಆದೇಶ ಡಿಸೆಂಬರ್ 1 ರಿಂದ ಜಾರಿ ಆಗಲಿದೆ. ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಪೊಲೀಸರು ತಂತ್ರಜ್ಞಾನ ಉಪಯೋಗಿಸಿ ಬೇರೆ ದಾರಿಗಳನ್ನು ಕಂಡುಕೊಳ್ಳಬೇಕೆ ವಿನಃ ಸವಾರರನ್ನು ಚೇಸ್ ಮಾಡಬಾರದು ಎಂದು ಹೈಕೋರ್ಟ್ ಹೇಳಿದ್ದು. ಸವಾರರನ್ನು ತಡೆಯಲು ಸಹ ಚಿಹ್ನೆಗಳು ಅಥವಾ ದೀಪಗಳನ್ನು ಬಳಸಿ ತಡೆಯಬೇಕೆ ವಿನಃ ದೈಹಿಕ ಸಂಜ್ಞೆಗಳನ್ನು ಉಪಯೋಗಿಸಿ ಅಥವಾ ರಸ್ತೆಗೆ ಅಡ್ಡಲಾಗಿ ಬಂದು ತಡೆಯಬಾರದು ಎಂದು ಹೈಕೋರ್ಟ್ ಹೇಳಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಂಚಾರ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಬೇಕೆ ಹೊರತು ಸವಾರರಿಗೆ ಹಿಂಸೆಯಾಗುವ ರೀತಿಯಲ್ಲಿ ನಿಯಮವನ್ನು ಹೇರಲು ಅಥವಾ ದಂಡವನ್ನು ಕಟ್ಟಿಸಿಕೊಳ್ಳಲು ಪೊಲೀಸರು ಪ್ರಯತ್ನ ಪಡಬಾರದು. ನಿಗದಿತ ಸ್ಥಳದಲ್ಲಿಯೇ ನಿಂತು ಸಂಚಾರಿ ನಿಯಮ ಉಲ್ಲಂಘನೆ ಮಾಡುವರನ್ನು ತಪಾಸಣೆ ಮಾಡಿ ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ.

Also read: ಇಸ್ರೇಲ್ ಮಾದರಿಯಂತೆ ಕೃಷಿಯಲ್ಲಿ ಕೋಳಿ ಮೊಟ್ಟೆ, ಅಡುಗೆ ಎಣ್ಣೆ ಬಳಸಿ ಲಕ್ಷಾಂತರ ರೂ. ಲಾಭ ಗಳಿಸುವಲ್ಲಿ ಯಶಸ್ವಿಯಾದ ರಾಯಚೂರಿನ ರೈತರು.!