ಹೊಸ ವರ್ಷಕ್ಕೆ ಮನೆಗೆ ಭೇಟಿ ನೀಡಿ ಸರ್ಪ್ರೈಸ್ ನೀಡಿದ ಬೆಂಗಳೂರು ಪೊಲೀಸರು, ಏನದು ಸರ್ಪ್ರೈಸ್ ಗೊತ್ತಾ…!!

0
506

ಸಾಮಾನ್ಯವಾಗಿ ಕಳ್ಳತನವಾದರೆ ನಿಮ್ಮ ಕಳೆದು ಹೋದ ವಸ್ತುಗಳನ್ನು ಪತ್ತೆ ಹಚ್ಚಿ ಕಳ್ಳನ್ನನ್ನು ಹಿಡಿದು ನಿಮ್ಮ ವಸ್ತುಗಳನ್ನು ನಿಮಗೆ ಹಿಂತಿರುಗಿಸಲು ಎಷ್ಟು ದಿನ ಬೇಕಾಗುತ್ತದೆ, ಅಯ್ಯೋ ದಿನ ಎಲ್ಲಿರಿ ತಿಂಗಳು, ವರ್ಷಗಳೆಯಾಗುತ್ತದೆ ಇನ್ನು ಕೆಲವೊಮ್ಮೆ ಕಳೆದ ವಸ್ತುಗಳನ್ನು ಮರೆತು ಬಿಡಬೇಕಾಗುತ್ತದೆ ಅಂತೀರ, ಆದರೆ ನಮ್ಮ ಬೆಂಗಳೂರು ಪೊಲೀಸರು ಹೊಸ ವರ್ಷದಂದು ಕಳೆದುಹೋದ ವಸ್ತುಗಳನ್ನು ಪತ್ತೆ ಹಚ್ಚಿ ಅದರ ಮಾಲೀಕರಿಗೆ ನೀಡುವ ಮೂಲಕ ಹೊಸ ವರ್ಷಕ್ಕೆ ಸರ್ಪ್ರೈಸ್ ನೀಡಿದ್ದಾರೆ.

ಜನರು ಹೊಸ ವರ್ಷಕ್ಕೆ ಎಲ್ಲಿಲ್ಲದ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ, ಕೇಕ್, ಜ್ಯೂಸ್ ಮತ್ತು ಇತರೆ, ಆದರೆ ಇದರಲ್ಲಿ ಪ್ರಮುಖವಾದದ್ದು ಸರ್ಪ್ರೈಸ್ ಗಿಫ್ಟ್, ನಿನ್ನೆ ಮಧ್ಯರಾತ್ರಿ ನಮ್ಮ ಪೊಲೀಸ್ ಇಲಾಖೆ ಜನರಿಗೆ ಹೊಸ ಕೊಡುಗೆ ನೀಡಿದ್ದು, ರಾತ್ರಿ 12 ಗಂಟೆಗೆ ಜನರ ಮನೆಗೆ ಭೇಟಿ ನೀಡಿ ಇನ್ಸ್ ಪೆಕ್ಟರ್ ಅವರಿಂದ ರಿಕವರಿ ಆದ ಕಳ್ಳತನವಾದ ಚಿನ್ನಾಭರಣವನ್ನು ಅವರವರ ಮನೆಗೆ ತಲುಪಿಸಿದ್ದಾರೆ.

ಪೊಲೀಸ್ ಇನ್ಸ್ಪೆಕ್ಟರ್ ಹುಣಸಮಾರನಹಳ್ಳಿ ಮನೆಗೆ ದಿಢೀರ್ ಭೇಟಿ ನೀಡಿದರು, ಮನೆಯ ಮುಂದೆ ಪೊಲೀಸರನ್ನು ಕಂಡು ಮನೆಯವರಿಗೆ ಕೆಲ ಕ್ಷಣ ಅಚ್ಚರಿಯಾಗಿದೆ, ನಂತರ ಯಲಹಂಕ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಂಜೇಗೌಡ, ವೆಂಕಟೇಶ್ವರಲು ದಂಪತಿಗೆ ತಾವು ಕಳೆದುಕೊಂಡಿದ್ದ 40 ಗ್ರಾಂ ಚಿನ್ನಾಭರಣವನ್ನು ಹಿಂತಿರುಗಿಸಿದ್ದಾರೆ.

ಹೀಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಕೋಟ್ಯಾನ್ ಅವರು ಕೂಡ ತಮ್ಮ ವ್ಯಪ್ತಿಯಲ್ಲಿ ಬರುವ ನಂದಕಿಶೋರ್ ಅವರ ಮನೆಗೆ ತೆರಳಿ ಅವರು ಕಳೆದುಕೊಂಡ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಾಪಸ್ ನೀಡಿದ್ದಾರೆ.

ಕೋರ್ಟ್ ಅನುಮತಿ ಪಡೆದು ನಂತರ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್ ಆದೇಶದ ಮೇರೆಗೆ ಕಳ್ಳರಿಂದ ರಿಕವರಿಯಾಗಿದ್ದ ವಸ್ತುಗಳನ್ನು ಪೊಲೀಸರು ಅದರ ಮಾಲೀಕರಿಗೆ ಹೊಸ ವರ್ಷದ ಉಡುಗೊರೆಯಾಗಿ ನೀಡಿದ್ದಾರೆ. ಪೊಲೀಸರು ಕೊಟ್ಟು ಹೊಸ ವರ್ಷದ ಗಿಫ್ಟಿಗೆ ಇವರು ತುಂಬ ಖುಷಿಯಾಗಿದ್ದಾರೆ.