ಪ್ರಧಾನಿ ಮೋದಿಗೆ ಸಿದ್ದರಾಮಯ್ಯನವರನ್ನು ಕಂಡರೆ ಭಯ ಅಂತೇ, ಇದನ್ನು ಸ್ವತಃ ಸಿದ್ದರಾಮಯ್ಯನವರೇ ಹೇಳ್ಕೊಂಡಿದ್ದಾರೆ!!

0
626

ಕರ್ನಾಟಕದ ರಾಜಕೀಯ ಪಕ್ಷಗಳು ಈಗ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯತ್ತ ಚಿತ್ತ ನೆಟ್ಟಿವೆ. ಹೀಗಾಗಿಯೇ ಎಲ್ಲ ಪಕ್ಷದ ಮುಖಂಡರು, ತಮ್ಮದೇ ಧಾಟಿಯಲ್ಲಿ ವಿರೋಧಿಗಳ ಕಾಲು ಎಳೆಯುತ್ತಿದ್ದಾರೆ. ಇದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಸಹ ಹೊರತಾಗಿಲ್ಲ. ಏನಪ್ಪ ಅಂದ್ರೆ ಮೊನ್ನೆ ಮೋದಿ ರಾಜ್ಯ ಪ್ರವಾಸ ಮಾಡಿದಾಗ, ಅವರು ಮಾಡಿದ ಭಾಷಣ ಕೇಳಿಲ್ಲ. ರಾಜ್ಯದಲ್ಲಿ ಬಿಜೆಪಿ ಪಕ್ಷ ಮುಳುಗುತ್ತಿರುವ ಹಡುಗು ಇದ್ದಂತೆ ಎಂದು ಹೇಳಿದ್ದಾರೆ.
ಇನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸರಿಯಾಗಿ ಸ್ಪಂಧಿಸುತ್ತಿಲ್ಲ. ಕೇಂದ್ರ ನೋಟ್​ ಬ್ಯಾನ್​​ ಮಾಡಿ ಬಡವರ ಮೇಲೆ ಹೊರೆ ಹಾಕಿದೆ. ಇದು ಬಡವರ ಮೇಲೆ ಭಾರವೇ ಹೊರತು ಯಾವುದೇ ಅಭಿವೃದ್ಧಿಯಲ್ಲ. ಇನ್ನು ರಾಜ್ಯದಲ್ಲಿ ಅಭಿವೃದ್ಧಿ ಎನ್ನೋದು ಆಗಿದ್ರೆ ಅದು, ನಮ್ಮ ಪಕ್ಷದಿಂದ ಮಾತ್ರ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿದ್ದರಾಮಯ್ಯ ಬಿಜೆಪಿಗೆ ದುಡಿನ ಮದವಿದೆ. ಗುಜರಾತ್​ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸ್ತಾರೆ. ಗುಜರಾತ್​​ನಲ್ಲಿ ಕಾಂಗ್ರೆಸ್​ ಪಕ್ಷ ಗೆಲುವಿನ ರಣಕಹಳೆ ಊದಲಿದೆ. ಇನ್ನು ಅಲ್ಲಿಯ ಜನ ಸಹ ಜಿಎಸ್​​ಟಿ (GST) ವಿರುದ್ಧ ಧ್ವನಿ ಎತ್ತಿದ್ದಾರೆ. ಅಧಿಕಾರ ವಿರೋಧಿ ಅಲೆ ಆ ರಾಜ್ಯದಲ್ಲಿ ತುಂಬಾ ಇದೆ. ಗುಜರಾತ್‍ನಲ್ಲಿ ಯಾವುದೇ ಕಾರಣಕ್ಕು ಬಿಜೆಪಿ ಗೆಲ್ಲುವುದಿಲ್ಲ ಎಂದು ಅಭಿಪ್ರಾಯಟ್ಟಿದ್ದಾರೆ.
ಸಚಿವ ಜಾರ್ಜ್ ರಾಜೀನಾಮೆ ನೀಡುವ ಅಗತ್ಯವೇ ಇಲ್ಲ. ಯಡಿಯೂರಪ್ಪ ಸುಪ್ರೀಂ ಕೋರ್ಟ್ ಆದೇಶವನ್ನ ಓದಿಲ್ಲ. ಸುಪ್ರೀಂ ಆದೇಶದಲ್ಲಿ ಜಾರ್ಜ್ ಹೆಸರು ಉಲ್ಲೇಖ ಮಾಡಿಲ್ಲ. ಬದಲಿಗೆ ಹಳೆ ಎಫ್‍ಐಆರ್ ಮೇಲೆ ತನಿಖೆ ನಡೆಸಿ ಅಂತ ಆದೇಶ ಮಾಡಿದೆ ಎಂದು ಜಾರ್ಜ್ ಪರ ನಿಂತರು.