ರಾಜಕೀಯ ಪಕ್ಷಗಳಿಗೆ ಸುಪ್ರೀಂ ಆದೇಶ; ಮೇ 30 ರ ಒಳಗೆ ಎಲ್ಲಾ ದೇಣಿಗೆ ಹಣದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಸೂಚನೆ..

0
289

ದೇಶದಲ್ಲಿ ಲೋಕಸಭಾ ಚುನಾವಣೆ ಜೋರಾಗಿದ್ದು ಎಲ್ಲ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ಈ ನಡುವೆ ಸುಪ್ರಿಂ ಕೋರ್ಟ್ ಆದೇಶ ಹೊರಡಿಸಿದ್ದು, ಎಲ್ಲಾ ರಾಜಕೀಯ ಪಕ್ಷಗಳೂ ಮುಚ್ಚಿದ ಲಕೋಟೆಯಲ್ಲಿ ದಾನಿಗಳ ಗುರುತಿನ ವಿವರ ಹಾಗೂ ಚುನಾವಣಾ ಬಾಡ್ ಗಳ ರಸೀದಿಗಳನ್ನು ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಶುಕ್ರವಾರ ಸುಪ್ರೀಂ ಕೋರ್ಟ್ಆದೇಶ ನೀಡಿದ್ದು, ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವು ಮೇ 30ಕ್ಕೆ ಮುನ್ನ ಚುನಾವಣಾ ಆಯೊಗಕ್ಕೆ ದಾನಿಗಳ ಮೊತ್ತದ ವಿವರ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸಲು ಹೇಳಿದೆ.

Also read: ಚುನಾವಣೆಯಲ್ಲಿ ಮತದಾನ ಮಾಡದೆ ಸಿಕ್ಕ ರಜೆಯಲ್ಲಿ ಮೋಜು ಮಸ್ತಿಗೆ ತೆರಳುವ ಟೆಕ್ಕಿಗಳಿಗೆ ಚುನಾವಣಾ ಆಯೋಗದಿಂದ ಬಿಗ್ ಶಾಕ್..

ಹೌದು ರಾಜಕೀಯ ಪಕ್ಷಗಳು ಚುನಾವಣೆಯ ವೇಳೆ ಕರಾರುಪತ್ರಗಳ (ಬಾಂಡ್) ಮೂಲಕ ಸಿಕ್ಕಂತಹ ದಾನಗಳ ಬಗ್ಗೆ ಮಾಹಿತಿಯನ್ನು ನೀಡಬೇಕು. ಯಾರು ದಾನ ನೀಡಿದ್ದಾರೆ ಹಾಗೂ ಎಷ್ಟು ಹಣವನ್ನು ದಾನವಾಗಿ ಪಡಯಲಾಗಿದೆ ಎನ್ನುವ ಸಂಪೂರ್ಣ ದಾಖಲೆಗಳನ್ನು ಮೇ 15ರ ಒಳಗಾಗಿ ಮುಚ್ಚಿದ ಲಕೋಟಿಯಲ್ಲಿ ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯನಾಯಮೂರ್ತಿ ರಂಜನ್ ಗೊಗೋಯ್ ಆದೇಶ ನೀಡಿದ್ದಾರೆ.

ಎಲೆಕ್ಟೋರಲ್​ ಬಾಂಡ್​ ಮೂಲಕ ಜನರು ರಾಜಕೀಯ ಪಕ್ಷಗಳಿಗೆ ದೇಣಿಗೆ ಸಲ್ಲಿಸಬಹುದಾಗಿದೆ. ಈ ಯೋಜನೆಯನ್ನು ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಚುನಾವಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಚುನಾವಣಾ ಬಾಂಡ್​ ಅನ್ನು ನಿಷೇಧಿಸಬೇಕು ಅಥವಾ ದೇಣಿಗೆ ನೀಡಿದವರ ವಿವರ ಬಹಿರಂಗಪಡಿಸಬೇಕು ಎಂದು ಎನ್​ಜಿಒ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಈ ಸಂಬಂಧ ಗುರುವಾರ ವಿಚಾರಣೆ ನಡೆದಿದ್ದ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್ ಖರೀದಿಸುವವರ ಗುರುತು ಬಹಿರಂಗ ಆಗುವುದಿಲ್ಲ ಎಂದಾದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಕೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದ ಈ ವ್ಯವಸ್ಥೆಯೇ ವ್ಯರ್ಥ. ಚುನಾವಣೆಯಲ್ಲಿ ಕಪ್ಪು ಹಣ ಬಳಕೆಯನ್ನು ತಡೆಯುವುದಕ್ಕಾಗಿ ಜಾರಿಗೆ ತಂದಿರುವ ವ್ಯವಸ್ಥೆ ಉದ್ದೇಶವೇ ಈಡೇರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಅಷ್ಟೇ ಅಲ್ಲದೆ ಆದೇಶವನ್ನು ಕಾಯ್ದಿರಿಸಿತ್ತು.

Also read: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ; ದೇಶದಲ್ಲೆ ಕರ್ನಾಟಕದಿಂದ ಚುನಾವಣಾ ಆಯೋಗಕ್ಕೆ ಹೆಚ್ಚು ದೂರು..

ಏನಿದು ಎಲೆಕ್ಟೋರಲ್ ಬಾಂಡ್?:

ರಾಜಕೀಯ ಪಕ್ಷಗಳಿಗೆ ಹರಿದು ಬರುವ ಚುನಾವಣಾ ದೇಣಿಗೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿತ್ತು. 2017ರ ಬಜೆಟ್ ಭಾಷಣದಲ್ಲಿ ಚುನಾವಣಾ ಬಾಂಡ್ ಪರಿಚಯಿಸಿತ್ತು. ನಂತರ ಕೇಂದ್ರ ಸರ್ಕಾರ 2018ರ ಜನವರಿ 02ರಂದು ಎಲೆಕ್ಟೋರಲ್​ ಬಾಂಡ್​ ಯೋಜನೆ 2018ನ್ನು ಜಾರಿಗೆ ತಂದಿತ್ತು. ಈ ಬಾಂಡ್​ ಮೂಲಕ ಜನರು ರಾಜಕೀಯ ಪಕ್ಷಗಳಿಗೆ ದೇಣಿಗೆ ಸಲ್ಲಿಸಬಹುದಾಗಿದೆ. ಅದರಂತೆ ಯಾವುದೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಇಚ್ಛಿಸುವವರು STATE BANK OF INDIA ದಲ್ಲಿ ನಿರ್ದಿಷ್ಟ ಮೊತ್ತದ ಎಲೆಕ್ಟೋರನ್ ಬಾಂಡ್ ಖರೀದಿಸಬೇಕು. ಬಳಿಕ ಅದನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದು. ಈ ಮೂಲಕ ದಾನಿಗಳು ನೀಡಿದ ಬಾಂಡ್ ಪಡೆದ ರಾಜಕೀಯ ಪಕ್ಷವು ಬ್ಯಾಂಕ್ ಖಾತೆಗೆ ಬಾಂಡ್ ಸಲ್ಲಿಸಿ, ಹಣವನ್ನು ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು.

ಎಲೆಕ್ಟೋರಲ್ ಬಾಂಡ್ ನಿಯಮ ಏನು?

Also read: ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ದುರುಪಯೋಗ; ಪಕ್ಷೇತರ ಅಭ್ಯರ್ಥಿ ಸುಮಲತಾ ಚುನಾವಣಾ ಆಯೋಗಕ್ಕೆ ದೂರು..

1 ಸಾವಿರ ರೂ., 10 ಸಾವಿರ ರೂ., 1 ಲಕ್ಷ ರೂ., 10 ಲಕ್ಷ ರೂ., 1 ಕೋಟಿ ರೂ. ಮೌಲ್ಯದ ಬಾಂಡ್‍ಗಳನ್ನು ಪರಿಚಯಿಸಲಾಗಿತ್ತು. ಈ ಎಲೆಕ್ಟೋರಲ್ ಬಾಂಡ್‍ಗೆ ಬ್ಯಾಂಕ್‍ನಿಂದ ಯಾವುದೇ ರೀತಿಯ ಬಡ್ಡಿ ದೊರೆಯುವುದಿಲ್ಲ. ರಾಜಕೀಯ ಪಕ್ಷಗಳು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವವರೆಗೂ ಆ ಹಣವು ದಾನ ಮಾಡಿದವರ ಖಾತೆಯಲ್ಲೇ ಇರುತ್ತದೆ. ಕೆವೈಸಿ ಪ್ರಕಾರ ಬ್ಯಾಂಕ್ ಗ್ರಾಹಕರ ಮಾಹಿತಿಯನ್ನು ಪಡೆದರೂ ಅದನ್ನು ಗೌಪ್ಯವಾಗಿ ಇಡಬೇಕು ಎನ್ನುವ ನಿಯಮವಿದೆ. ಆದರೆ ಈ ಬಾಂಡ್ ಅನ್ನು 15 ದಿನಗಳ ಒಳಗಾಗಿ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬೇಕು.