ದೇಶದ ಅರ್ಥವ್ಯವಸ್ಥೆಗೆ ಹೊಸ ವ್ಯಾಖ್ಯಾನ ನೀಡಿದ ಮಾಜಿ ಪ್ರಧಾನಿ

0
761

ನವದೆಹಲಿ: ದೇಶದ ಅರ್ಥವ್ಯವಸ್ಥೆಗೆ ಹೊಸ ವ್ಯಾಖ್ಯಾನ ನೀಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ೫೦೦ ಮತ್ತು ೧೦೦೦ ನೋಟು ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ತೀರ್ಮಾನವನ್ನು ಆಡಳಿತಾತ್ಮಕ ಪ್ರಮಾದ ಎಂದು ಬಣ್ಣಿಸಿದರು.

ಪ್ರತಿಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದ ನರೇಂದ್ರ ಮೋದಿ ಕಲಾಪದಲ್ಲಿ ಭಾಗವಹಿಸಿದರು. ಬೆಳಗ್ಗೆ ರಾಜ್ಯಸಭೆಗೆ ಆಗಮಿಸಿದ ನಂತರ ಚರ್ಚೆಗೆ ಅವಕಾಶ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮನಮೋಹನ್ ಸಿಂಗ್, ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ನೋಟು ರದ್ದು ಮಾಡಿದ್ದರಿಂದ ದೇಶದಲ್ಲಿರುವ ಶೇ.೫೫ ರೈತರು, ಸಣ್ಣ ಕೈಗಾರಿಕೆಗಳು, ಮಧ್ಯಮ ವರ್ಗ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.

ನೋಟು ರದ್ದು ಕಾನೂನುಬದ್ದ ಹಾಗೂ ಸಂಘಟಿತ ಲೂಟಿಯಾಗಿದೆ. ಇದೊಂದು ಆಡಳಿತಾತ್ಮಕ ಪ್ರಮಾದ ಆಗಿದ್ದು, ಸಾಮಾನ್ಯ ಜನರು ಕಷ್ಟಕ್ಕೆ ಸಿಲುಕುವಂತಾಗಿದೆ. ಪದೇಪದೆ ಕಾನೂನು ಬದಲಾಯಿಸುವುದರಿಂದ ಸಾಮಾನ್ಯ ಜನಜೀವನ ಹಾಗೂ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟರು.

ನೋಟು ರದ್ದು ದೇಶದ ಅರ್ಥ ವ್ಯವಸ್ಥೆ ಮೇಲೆ ಕಟ್ಟ ಪರಿಣಾಮ ಬೀರಲಿದ್ದು, ಜಿಡಿಪಿ ಶೇ.೨ಕ್ಕೆ ಕುಸಿಯುವ ಸಾಧ್ಯತೆ ಇದೆ. ೫೦ ದಿನ ಕೊಡಿ ಎಂದು ಪ್ರಧಾನಿಗಳು ಕೋರಿದ್ಧಾರೆ. ಈಗಾಗಲೇ ೬೦-೬೫ ಜನ ನಾಗರೀಕರು ಮೃತಪಟ್ಟಿದ್ದಾರೆ. ೫೦ ದಿನ ಕಾಯುವ ಸ್ಥಿತಿಯಲ್ಲಿ ಜನರು ಇಲ್ಲ ಎಂದರು.

ಆಡಳಿತದಲ್ಲಿನ ದೊಡ್ಡ ಪ್ರಮಾದ ಇದು. ಈ ವಿಷಯದಲ್ಲಿ ಆರ್ ಬಿಐ ಎಳೆಯಬೇಕಾಗಿದ್ದಕ್ಕೆ ವಿಪರ್ಯಾಸವಿದೆ. ಆದರೆ ಲೋಪದ ಹಿಂದೆ ಅದು ಕೂಡ ಭಾಗಿ ಎಂದು ವಿಷಾದಿಸಿದರು.

ನಂತರ ಮಾತನಾಡಿದ ತೃಣಮೂಲ ಕಾಂಗ್ರೆಸ್ ನ ಡೆರೆಕ್ ಓಬ್ರಿಯಾನ್, ಹಣ ವಿರುದ್ಧ ಯಾರಿದ್ದಾರೆ. ನೋಟು ನಿಷೇಧ ವಿರುದ್ಧ ಯಾರು ಮಾತನಾಡಿದ್ದಾರೆ? ನಾವು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದೇವೆ. ಆದರೆ ನಾವು ವಿರೋಧವಿದ್ದೇವೆ ಎಂದು ಯಾಕೆ ಪ್ರಧಾನಮಂತ್ರಿ ಗಳು ಆರೋಪಿಸುತ್ತಿದ್ದೀರಿ? ನೋಟು ರದ್ದಾದ ನಂತರ ದೇಶದ ಅರ್ಥ ವ್ಯವಸ್ಥೆ ೩ ಲಕ್ಷ ಕೋಟಿ ನಷ್ಟ ಅನುಭವಿಸಿದೆ. ಇದಕ್ಕೆ ಯಾರು ಹೊಣೆ? ಎಂದು ಪ್ರಸ್ನಿಸಿದರು.