ಜ್ಯೋತಿಷಿಗಳನ್ನು ಬ್ಯಾನ್ ಮಾಡಿದ ಚುನಾವಣಾ ಆಯೋಗ ಜೋತಿಷ್ಯ ಕಾರ್ಯಕ್ರಮ ಪ್ರಸಾರ ಮಾಡಿದ್ರೆ ಬೀಳುತ್ತೆ ಭಾರಿ ದಂಡ!!

0
757

ಚುನಾವಣೆ ಬಂತೆಂದರೆ ಸಾಕು ಸ್ಪರ್ದಿಸುತ್ತಿರುವ  ಜನ ಪ್ರತಿನಿಧಿಗಳ ಆಟೋ ಬಯಾಗ್ರಫಿ , ಅವರು ಮಾಡಿದ ಮತ್ತು ಮಾಡಿರದ ಕೆಲಸಗಳ ಬಗ್ಗೆ ಪೋಸ್ಟ್ಗಳು , ಆರ್ಟಿಕಲ್ಸ್ , ಬ್ಯಾನರ್ ಗಳು ಎಲ್ಲ ಕಡೆ ಕಾಣಸಿಗುತ್ತವೆ. ಇದರ ನಡುವೆ ಜನರಿಗೆ ಇಂಟರಸ್ಟಿಂಗ್ ಆಗಿ ಕಾಣೋದು ಅಂದ್ರೆ “ಜೋತಿಷ್ಯ”.

 

 

ಚುನಾವಣೆಯಲ್ಲಿ ಸ್ಪರ್ದಿಸುತ್ತಿರೋ ರಾಜಕಾರಣಿ ಇಂದ ಹಿಡಿದು ಅವರ ಮನೆ , ತಂದೆತಾಯಿ , ಹೆಂಡತಿ , ಮಕ್ಕಳು , ಊರು , ಪಕ್ಷ , ಪಕ್ಷದ ಚಿನ್ಹೆ , ಗೆಲ್ಲುತ್ತಾರೋ ಸೋಲುತ್ತಾರೋ , ಗೆಲ್ಲೋಕೆ ಯಾವ ಹೋಮ ಮಾಡಬೇಕು , ಯಾವ ದೇವಸ್ಥಾನಕ್ಕೆ ಹೋಗಬೇಕು ಹೀಗೆ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಎಲ್ಲ ಭವಿಷ್ಯ ಹೇಳೋ ಜ್ಯೋತಿಷಿಗಳಿಗೆ ಹಾಗು ಇದನ್ನು ಪ್ರಸಾರ ಅಥವಾ ಪ್ರಕಟ ಮಾಡುವವರಿಗೆ ಈಗ ಬ್ರೇಕ್ ಬಿದ್ದ ಹಾಗೆ , ಹೇಗೆ ಅಂತೀರಾ ಮುಂದೆ ಓದಿ..

 

 

ಭಾರತೀಯ ಚುನಾವಣಾ ಆಯೋಗ ನಿಮ್ಮೆಲ್ಲ ಪ್ರಶ್ನೆಗೆ ಉತ್ತರ. ಹೌದು ಭಾರತೀಯ ಚುನಾವಣೆ ಆಯೋಗ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಹಿಮಾಚಲಪ್ರದೇಶ ಮತ್ತು ಗುಜುರಾತ್ ರಾಜ್ಯಗಳ ಚುನಾವಣೆ ಗೋಸ್ಕರ ಈ ನಿಯಮ ಜಾರಿ ಮಾಡಿದೆ ಹಾಗು ಸುದ್ದಿ ಮಾಧ್ಯಮಗಳಿಗೆ ಈ ರೀತಿಯ ಪ್ರೋಗ್ರಾಮ್ ಗಳನ್ನೂ ಪ್ರಸಾರ ಮಾಡದಂತೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದೆ.

 

ಈ ಹೊಸ ನಿಯಮದ ಪ್ರಕಾರ ಮತಗಟ್ಟೆ ಸಮೀಕ್ಷೆಯ ವರದಿಗಳನ್ನು ಪ್ರಸಾರ ಮಾಡುವುದಕ್ಕೆ ನಿರ್ಬಂಧವಿರುವಾಗ ಚುನಾವಣೆಯ ಫ‌ಲಿತಾಂಶದ ಕುರಿತು ಜ್ಯೋತಿಷಿಗಳು , ಗಿಣಿಶಾಸ್ತ್ರ ಹೇಳುವವರು ಹಾಗೂ ಮಾಧ್ಯಮಗಳು ಕೂಡ ಭವಿಷ್ಯ ಹೇಳುವಂತಿಲ್ಲ. ನಿರ್ಬಂಧವಿರುವ ಅವಧಿಯಲ್ಲಿ ಇಂತಹ ಪ್ರೋಗ್ರಾಮ್ ಪ್ರಸಾರ ಮಾಡದೇ ಇರುವ ಮೂಲಕ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಸಹಕರಿಸಬೇಕು ಎಂದು ಆಯೋಗ ತಿಳಿಸಿದೆ.

 

ಚುನಾವಣೆ ನಡೆಯುತ್ತಿರುವ ರಾಜ್ಯಗಳಾದ ಗುಜರಾತ್‌ ಮತ್ತು ಹಿಮಾಚಲಪ್ರದೇಶಕ್ಕೆ ಕೇಂದ್ರದ ನರೇಗಾ(ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ ಮಾಡುವುದಕ್ಕೆ ಚುನಾವಣಾ ಆಯೋಗ ಕೇಂದ್ರಕ್ಕೆ ಸಮ್ಮತಿ ನೀಡಿದೆ. ಈ ಎರಡೂ ರಾಜ್ಯಗಳಿಗೆ ಹಣ ವಿತರಿಸಲು ಯಾವುದೇ ತಕರಾರು ಇಲ್ಲ. ಆದರೆ ಇದನ್ನೇ ಸದುಪಯೋಗ ಪಡಿಸಿಕೊಂಡು ಚುನಾವಣೆ ಪ್ರಚಾರ ಮಾಡುವಂತಿಲ್ಲ ಎಂಬ  ಷರತ್ತನ್ನು ಕೂಡ ವಿಧಿಸಿದೆ.