ಈ ಸಾರನ್ನ ವಾರಕ್ಕೊಮ್ಮೆಯಾದ್ರೂ ಮಾಡ್ಕೊಂಡು ತಿಂದ್ರೆ ಹೃದ್ರೋಗ ಬಾರದಂತೆ ತಡೆಗಟ್ಟಬಹುದು..ಹೃದ್ರೋಗಿಗಳ ಪಾಲಿನ ಅಮೃತ ದಾಳಿಂಬೆ ಸಾರು ಮಾಡುವ ವಿಧಾನ.

0
2607

Kannada News | Recipe tips in Kannada

ಬೇಕಾಗುವ ಸಾಮಗ್ರಿಗಳು:

 • ಹೆಸರು ಬೇಳೆ: 100 ಗ್ರಾಂ
 • ನೀರು: 800 ml
 • ದಾಳಿಂಬೆ ಹಣ್ಣಿನ ರಸ: 50 ml
 • ಹಸಿ ಶುಂಠಿ: 6 ಗ್ರಾಂ
 • ಧನಿಯಾ: 6 ಗ್ರಾಂ
 • ಉಪ್ಪು: ರುಚಿಗೆ ತಕ್ಕಸ್ಟು
 • ಪುಡಿ ಮಾಡಿದ ಹಿಪ್ಪಲಿ : 1 ಚಿಟಿಕೆ
 • ಜೀರಿಗೆ : 6 ಗ್ರಾಂ

ತಯಾರಿಸುವ ವಿಧಾನ:

 • ಮೊದಲು ಧನಿಯಾ, ಹಿಪ್ಪಲಿ,ಮತ್ತು ಜೀರಿಗೆಯನ್ನು ಪ್ರತ್ಯೇಕವಾಗಿ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು.
 • ಹಸಿಶುಂಠಿಯನ್ನು ಸಣ್ಣದಾಗಿ ಚೂರು ಮಾಡಿ ಇಟ್ಟುಕೊಳ್ಳಬೇಕು.
 • ಉತ್ತಮವಾದ ಹೆಸರುಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಬೇಳೆಯ ಎಂಟು ಪಾಲಿನಷ್ಟು ನೀರನ್ನು ಹಾಕಿ ಒಲೆಯ ಮೇಲಿಟ್ಟು ಬೇಯಿಸಿಕೊಳ್ಳಬೇಕು.
 • ಬೇಳೆ ಬೆಂದ ನಂತರ ಕಟ್ಟನ್ನೂ ಬೇಳೆಯನ್ನೂ ಬೇರ್ಪಡಿಸಿಟ್ಟುಕೊಳ್ಳಬೇಕು.
 • ಬೆಂದ ಮೃದುವಾದ ಬೇಳೆಗೆ ಹಸಿಶುಂಠಿ ಚೂರುಗಳನ್ನೂ, ಉಪ್ಪು ಹಾಗು ಪುಡಿಮಾಡಿದ ಧನಿಯಾವನ್ನು ಸೇರಿಸಿ ದಾಳಿಂಬೆ ಹಣ್ಣಿನ ರಸದೊಂದಿಗೆ ಚೆನ್ನಾಗಿ ರುಬ್ಬಿಟ್ಟುಕೊಳ್ಳಬೇಕು.
 • ನಂತರ ಇದಕ್ಕೆ ತೆಗೆದಿಟ್ಟುಕೊಂಡ ಬಿಸಿಯಾದ ಕಟ್ಟನ್ನುಸೇರಿಸಿ ಕುದಿಸಿ, ಪುಡಿಮಾಡಿದ ಹಿಪ್ಪಲಿ ಮತ್ತು ಜೀರಿಗೆಯನ್ನು ಉದುರಿಸಿ ಕಲಸಿ ಮುಚ್ಚಿಡಿ.
 • 2-3 ನಿಮಿಷಗಳ ನಂತರ ದಾಳಿಂಬೆಸಾರು ಊಟಕ್ಕೆ ತಯಾರು.

ಉಪಯೋಗ:

 • ಹೀಗೆ ತಯಾರಿಸಿದ ಸಾರು ಅತ್ಯಂತ ರುಚಿಕರ.
 • ಜ್ವರ ಮುಂತಾದ ರೋಗಗಳಿಂದ ಬಾಯಿ ರುಚಿ ಇಲ್ಲದಿರುವವರಿಗೂ ಸಹ ಬಾಯಿರುಚಿಯನ್ನು ಉಂಟು ಮಾಡುವುದರಲ್ಲಿ ಸಂದೇಹವಿಲ್ಲ.
 • ಅತಿಯಾಗಿ ಭೇದಿಯಾಗುತ್ತಿರುವವರು ಇದನ್ನು ಔಷಧವಾಗಿ ಬಳಸಬಹುದು.
 • ಚಳಿಗಾಲದಲ್ಲಿ ಇದನ್ನು ಹೆಚ್ಚು ಉಪಯೋಗಿಸುವುದರಿಂದ ಕಫ ಸಂಚಯದಿಂದ ಉಂಟಾಗುವ ಕೆಮ್ಮು, ನೆಗಡಿ ಇತ್ಯಾದಿ ಕಾಯಿಲೆಯಿಂದ ದೂರವಿರಬಹುದು.
 • ರುಚಿಕರವೂ,ಹೃದಯಕ್ಕೆ ತುಷ್ಟಿಯನ್ನೂ,ಪುಷ್ಟಿಯನ್ನೂ ನೀಡುವ ಈ ಪೇಯ ಸ್ವಸ್ಥರಿಗಷ್ಟೇ ಅಲ್ಲದೆ ಹೃದ್ರೋಗಿಗಳಿಗೂ ಅತ್ಯತ್ತಮ ಆಹಾರವಾಗಿದೆ.
 • ಈ ಪೇಯವನ್ನು ವಾರಕೊಮ್ಮೆಯಾದ್ರೂ ಉಪಯೋಗಿಸಿದ್ರೆ ಯಾವುದೇ ರೀತಿಯ ಕಫ, ಪಿತ್ತ ಸಂಬಂಧವಾದ ರೋಗಗಳಿಂದ ದೂರವಿರಬಹುದು.

Also Read: ರುಚಿಕರವಾದ ಹಾಗು ಬಾಯಲ್ಲಿ ನೀರೂರಿಸುವ ಈರುಳ್ಳಿ ದೋಸೆ ಮಾಡುವ ಸಿಂಪಲ್ ವಿಧಾನ..!!