ದಾಳಿಂಬೆ ಬಳಸಿ, ಸೌಂದರ್ಯ ವೃದ್ಧಿಸಿ!!!

0
2128

ಇತ್ತೀಚಿನ ದಿನಗಳಲ್ಲಿ ಸೌಂದರ್ಯಪ್ರಜ್ಞೆ ಎಷ್ಟು ಹೆಚ್ಚಾಗಿದೆ ಎಂದರೆ ಸ್ಟೈಲಿಶ್ ಕಾಣಲು ಪ್ರತಿಯೊಬ್ಬರೂ ಮಾರುಕಟ್ಟೆಯಲ್ಲಿ ದೊರೆ ಯುವ ದುಬಾರಿ ಸೌಂದರ್ಯ ಪ್ರಸಾಧನಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ ಹಲವಾರು ಅಡ್ಡಪರಿಣಾಮಗಳನ್ನು ಎದುರಿಸುತ್ತಾರೆ. ಇದರಿಂದ ಸುಂದರವಾಗಿ ಕಾಣಬೇಕಾದ ಚರ್ಮ ಇನ್ನಷ್ಟು ಸಮಸ್ಯೆಗಳ ಆಗರ ವಾಗುತ್ತದೆ. ಇದರ ಬದಲು ಮನೆಯಲ್ಲೇ ದೊರೆಯುವ ಹಲವಾರು ವಸ್ತುಗಳ ಮೂಲಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.

Image result for pomegranate

ಈ ಪೈಕಿ ದಾಳಿಂಬೆ ಆರೋಗ್ಯವರ್ಧಕ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಇದೇ ದಾಳಿಂಬೆ ಸೌಂದರ್ಯವರ್ಧನೆ ಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ ಎಂದರೆ ಅಚ್ಚರಿಯಾದೀತು. ಆದರೆ ಇದು ನಿಜ. ದಾಳಿಂಬೆಯಿಂದ ಹೇಗೆ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ನೋಡೋಣ ಬನ್ನಿ.ದಾಳಿಂಬೆಯಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಜೊತೆಗೆ ಆ್ಯಂಟಿ ಆಕ್ಸಿಡೆಂಟ್ ಅಂಶವೂ ಹೇರಳವಾಗಿರುತ್ತದೆ. ಇದರ ರಸ ಕುಡಿಯುವುದ ರಿಂದ ಹೊಟ್ಟೆ, ಕರುಳು ಮತ್ತು ಚರ್ಮ ಸಂಬಂಧಿ ನಾನಾ ಕಾಯಿಲೆಗಳು ವಾಸಿಯಾಗುತ್ತವೆ. ಜೊತೆಗೆ ಇದರ ರಸವನ್ನು ತ್ವಚೆಗೆ ಹಚ್ಚುವುದರಿಂದ ಸೌಂದರ್ಯವೂ ವೃದ್ಧಿಯಾಗುತ್ತದೆ.

ನೈಸರ್ಗಿಕ ಬ್ಲೀಚ್: ತ್ವಚೆಯ ಮೇಲುಂಟಾಗುವ ಕಪ್ಪು ಕಲೆ ಮತ್ತು ಪಿಗ್ಮಂಟೇಷನ್ ಸಮಸ್ಯೆ ದೂರ ಮಾಡಲು ದಾಳಿಂಬೆ ರಸವನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ಮುಖ ತೊಳೆಯುತ್ತಾ ಬಂದಲ್ಲಿ ನೈಸರ್ಗಿಕ ಬ್ಲೀಚ್‍ನಂತೆ ಕಾರ್ಯನಿರ್ವಹಿಸಿ ಮುಖದ ಕಳೆ ಹೆಚ್ಚಿಸುತ್ತದೆ.

ಹೊಳೆಯುವ ತ್ವಚೆ: ಆರೋಗ್ಯಪೂರ್ಣ ಮತ್ತು ಗ್ಲೋಯಿಂಗ್ ಸ್ಕಿನ್ ಬಯಸುವವರು ದಾಳಿಂಬೆ ರಸದಲ್ಲಿ ದ್ರಾಕ್ಷಿ ರಸ, ದ್ರಾಕ್ಷಿ ಬೀಜ ಮತ್ತು ಪಪ್ಪಾಯಿ ಹಣ್ಣಿನ ತಿರುಳು ಸೇರಿಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖಕ್ಕೆ ದಪ್ಪವಾಗಿ ಪ್ಯಾಕ್ ತರಹ ಲೇಪಿಸಿ. ಒಂದು ಗಂಟೆಯ ನಂತರ ಮುಖ ತೊಳೆಯುತ್ತಾ ಬನ್ನಿ. ಕೆಲವೇ ದಿನಗಳಲ್ಲಿ ಪರಿಣಾಮ ಕಂಡು ಬರಲಾರಂಭಿಸುತ್ತದೆ.ಗಾಯದ ಕಲೆ ಮಾಯದಾಳಿಂಬೆಯಲ್ಲಿ ಆ್ಯಂಟಿ ಆಕ್ಸಿ ಡೆಂಡ್ ಮತ್ತು ಆ್ಯಂಟಿ ಇನ್ ಫ್ಲಮೆಟರಿ ಅಂಶ ಹೇರಳವಾಗಿ ರುವ ಕಾರಣ ಗಾಯ ಒಣಗಿಸುವ ಮತ್ತು ಕಲೆಯನ್ನು ಹೋಗಲಾಡಿ ಸುವ ಅದ್ಭುತ ಗುಣ ಹೊಂದಿದೆ.

Image result for pomegranate skin care
Source: StyleCraze

ದಾಳಿಂಬೆ ಹಣ್ಣನ್ನು ಸೇವಿಸುವುದರ ಜೊತೆಗೆ ಇದರ ಬೀಜವನ್ನು ಮುಖಕ್ಕೆ ಉಜ್ಜುವುದರಿಂದ ಕೆಲವೇ ದಿನಗಳಲ್ಲಿ ಮುಖದ ಮೇಲಿನ ಕಪ್ಪು ಕಲೆ, ಗಾಯದ ಕಲೆ ಎಲ್ಲ ಮಾಯ ವಾಗುತ್ತದೆ.ಸ್ನಿಗ್ಧ ಮತ್ತು ಹೊಳೆಯುವ ತ್ವಚೆಗಾಗಿ: ಚರ್ಮ ಮೃದು, ಕೋಮಲ ಮತ್ತು ಹೊಳಪು ಪಡೆಯಲು ಮುಲ್ತಾನಿ ಮಿಟ್ಟಿ ಪ್ಯಾಕ್ ಹಚ್ಚುವುದು ಸಾಮಾನ್ಯ. ದಾಳಿಂಬೆ ರಸವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ನಂತರ ಮಿಲ್ತಾನಿ ಮಿಟ್ಟಿಯಲ್ಲಿ ದಾಳಿಂಬೆ ರಸ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಪ್ಯಾಕ್ ಹಾಕಿ ಒಣ ಗಿದ ನಂತರ ಮುಖ ತೊಳೆಯಿರಿ ಮತ್ತೆ ನೋಡಿ.

ಕ್ಲೆಂಜರ್: ಧೂಳು, ಮಾಲಿನ್ಯ, ಡೆಡ್ ಸ್ಕಿನ್ ಇತ್ಯಾದಿ ಸಮಸ್ಯೆಗಳಿಂದ ಮಂಕಾದ ಮುಖಕ್ಕೆ ದಾಳಿಂಬೆ ರಸವನ್ನು ಕ್ಲೆಂಜರ್‍ನಂತೆ ಬಳಸಿ ಮುಕ್ತಿ ಪಡೆಯ ಬಹುದಾಗಿದೆ. ದಾಳಿಂಬೆ ರಸದಲ್ಲಿ ಹತ್ತಿ ಅದ್ದಿ ಮುಖ ಮತ್ತು ಕತ್ತಿಗೆ ಹಚ್ಚಿ ಒಣಗಿದ ನಂತರ ಮುಖ ತೊಳೆಯಿರಿ.

ಟೋನರ್ : ದಾಳಿಂಬೆ ರಸವನ್ನು ಮುಖಕ್ಕೆ ಹಚ್ಚುತ್ತಾ ಬಂದಲ್ಲಿ ಇದು ಟೋನರ್‍ನಂತೆ ಕೆಲಸ ಮಾಡಿ ಮುಖದ ಕಪ್ಪು ಕಲೆ ಜೊತೆಗೆ ರೋಮ ಕೂಪ, ರಂಧ್ರ ಇತ್ಯಾದಿ ಸಮಸ್ಯೆಗಳಿಗೂ ಪರಿಹಾರ ಒದಗಿ ಸುತ್ತದೆ.ಸನ್ ಟ್ಯಾನ್‍ಗೂದಾಳಿಂಬೆ ರಸವನ್ನು ಸ್ನಾನಕ್ಕೆ ಮುನ್ನ ನಿಯಮಿತವಾಗಿ ಮುಖ ಮತ್ತು ಕೈಕಾಲುಗಳಿಗೆ ಹಚ್ಚಿ ಒಣಗಿದ ನಂತರ ಸ್ನಾನ ಮಾಡುವುದರಿಂದ ಕೆಲವೇ ದಿನಗಳಲ್ಲಿ ಸನ್ ಟ್ಯಾನ್ ಮಾಯವಾಗಿ ಕೆಲವೇ ದಿನಗಳಲ್ಲಿ ತ್ವಚೆಯ ಕೊಳೆ ಹೋಗಿ ಕಳೆ ಬರುತ್ತದೆ.ಸನ್‍ಸ್ಕ್ರೀನ್‍ಬಿಸಿಲಿಗೆ ಹೊರಗೆ ಹೋಗುವಾಗ ಸಾಮಾನ್ಯವಾಗಿ ಸನ್‍ಸ್ಕ್ರೀನ್ ಲೋಷನ್ ಬಳಸುತ್ತೇವೆ. ಸನ್‍ಸ್ಕ್ರೀನ್ ಲೋಷನ್ ಆಯ್ಕೆ ಮಾಡುವಾಗ ಅದರಲಿ ್ಲ ಬಳಸಲಾದ ಸಾಮಗ್ರಿಗಳಲ್ಲಿ ದಾಳಿಂಬೆ ಅಂಶವಿರುವುದನ್ನೇ ಆಯ್ಕೆ ಮಾಡಿ ಬಳಸಿ. ಇದರ ಬಳಕೆಯಿಂದ ಬಹುಬೇಗ ಚರ್ಮ ಕಪ್ಪಾಗುವಿಕೆಯನ್ನು ತಡೆಗಟ್ಟಬಹುದು.