ನಿಮಗೆ ಗೊತ್ತೇ : ಪೊಂಗಲ್ ಎಂಬುದು ಕನ್ನಡ ಪದ

0
1736

ಸಂಕ್ರಾಂತಿ ಅಂದರೆ ಪೊಂಗಲು, ಪೊಂಗಲು ಅಂದ್ರೆ ಸಂಕ್ರಾಂತಿ. ಕಾರ ಪೊಂಗಲು ಮತ್ತು ಸಿಹಿ ಪೊಂಗಲು -ಎರಡೂ ನಾಲಿಗೆಗೆ ಅಚ್ಚುಮೆಚ್ಚು. ಹಾಗಾದರೆ ಪೊಂಗಲಿಗೆ ಹಾಗೆ ಹೇಳಲು ಕಾರಣವೇನು?

ಇದು ಕನ್ನಡದ್ದೇ ಆದ ಪದ. ಅದನ್ನು ಹೀಗೆ ಬಿಡಿಸಬಹುದು

b8782d063b1b6ccd035f5d508d3a2886

ಪೊಂಗು+ಇಲು = ಹಿಗ್ಗಿದ ವಸ್ತು(ಹಿಗ್ಗಿದ್ದು), ಕುದಿದ ವಸ್ತು(ಕುದಿದ್ದು), ಅರಳಿದ ವಸ್ತು(ಅರಳಿದ್ದು)
poṅgu to boil over, burst open, expand, open, blossom, swell, be elated, exult, be overjoyed

ಪೊಂಗಲು ಮಾಡುವುದಕ್ಕೆ ಬಳಸುವ ಬೇಳೆ ಮತ್ತು ಅಕ್ಕಿಯನ್ನು ನೀರಿನಲ್ಲಿ ಕುದಿಸಲಾಗುತ್ತದೆ. ಹೀಗೆ ಮಾಡುವುದರಿಂದ ಅಕ್ಕಿ ಮತ್ತು ಬೇಳೆ ಊದಿಕೊಳ್ಳುತ್ತವೆ(expand,swell). ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಅಕ್ಕಿ/ಬೇಳೆ ಅರಳುತ್ತದೆ. ಹಾಗಾಗಿಯೇ ಇದಕ್ಕೆ ಪೊಂಗಲು ಎಂಬ ತಕ್ಕ ಹುರುಳುಳ್ಳ ಪದವನ್ನ ಕೊಡಲಾಗಿದೆ.

ಆಡುಮಾತಿನಲ್ಲಿ ಅದು ಪೊಂಗಿಲು/ಪಂಗಲು/ಪಂಗ್ಲು/ಪೊಂಗ್ಲು ಎಂದೆಲ್ಲಾ ಮಾರ್ಪಾಗಿದೆ.

ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.