ಮಂಡ್ಯದಲ್ಲಿ ಜೋರಾದ ಪಲಿತಾಂಶದ ಕಾವು; ಸಮೀಕ್ಷೆಯ ನಂತರ ಬೆಟ್ಟಿಂಗ್-ನಲ್ಲಿ ಬದಲಾವಣೆ? ನಿಖಿಲ್ ಗೆಲುವಿಗೆ ಮೇಕೆ ಹರಕೆ ಬಿಟ್ಟ ಅಭಿಮಾನಿಗಳು..

0
236

ರಾಜ್ಯದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಮಂಡ್ಯ ಪಲಿತಾಂಶಕ್ಕೆ ಇನ್ನೆರಡು ದಿನಗಳು ಬಾಕಿ ಇದೆ. ಅದರಂತೆ ಈಗಾಗಲೇ ಸಮೀಕ್ಷೆಗಳು ಹೊರ ಬಿದಿದ್ದು, ಎರಡು ಅಭ್ಯರ್ಥಿಗಳ ಪಲಿತಾಂಶ ಒಂದೇ ಆಗಿದೆ ಈಗಾಗಿ ಪೂಜೆ, ಹೋಮ ಹರಕೆ ಕಾರ್ಯಗಳು ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದ್ದು. ಚುನಾವಣೆ ನಂತರ 3 ಸಾವಿರದಿಂದ 30 ಲಕ್ಷದವರೆಗೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಕೆಲವರು ತಮ್ಮ ಕೃಷಿ ಭೂಮಿ, ಪ್ಲಾಟ್, ಮನೆ, ದ್ವಿಚಕ್ರವಾಹನ, ಕಾರುಗಳ ಮೇಲೆಯೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಹೌದು ಭಾನುವಾರ ಪ್ರಕಟಗೊಂಡ ಎಕ್ಸಿಟ್ ಪೋಲ್ ಸಮೀಕ್ಷೆಗಳು ಮಂಡ್ಯದಲ್ಲಿ ಏಕಪಕ್ಷೀಯ ಫಲಿತಾಂಶ ಬರುವುದು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಇಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ನಿಕಟವಾದ ಪೈಪೋಟಿ ಇರಲಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ ಮಂಡ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಮತ್ತು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ನಡುವೆ ನೇರ ಹಣಾಹಣಿ ಇದೆ.

ನಿಖಿಲ್ ಪರವಾಗಿ ಸಮೀಕ್ಷೆಗಳು?

ಸಮೀಕ್ಷೆಗಳ ಪೈಕಿ ಆರು ಸಮೀಕ್ಷೆಗಳು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಸುಮಲತಾ ಅವರ ಪರವಾಗಿ ನಾಲ್ಕು ಸಮೀಕ್ಷೆಗಳಿವೆ. ಇಲ್ಲಿ ಲೆಕ್ಕಾಚಾರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರೇ ಮೇಲುಗೈ ಸಾಧಿಸಿದರೂ ಅವರ ಗೆಲುವು ಸುಲಭವಾಗಿಲ್ಲ. ಸುಮಲತಾ ಅವರು ಗೆದ್ದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ನಿಖಿಲ್ ಅವರಿಗೆ ಮೂಲ ಜೆಡಿಎಸ್ ಬೆಂಬಲಿಗರು ಇರುವಂತೆಯೇ, ಸುಮಲತಾ ಅವರು ಅಂಬರೀಷ್ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಜತೆಗೆ ಕಾಂಗ್ರೆಸ್‌ನ ಅತೃಪ್ತ ಮುಖಂಡರು ಸೇರಿಕೊಂಡಿದ್ದಾರೆ. ಬಿಜೆಪಿ ಬೆಂಬಲಿಗರೂ ಸಹ ಸುಮಲತಾ ಅವರಿಗೆ ಜೈ ಎಂದಿದ್ದಾರೆ. ಹೀಗಾಗಿ ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆಯ ಫಲಿತಾಂಶವನ್ನು ಅಷ್ಟು ಸುಲಭವಾಗಿ ಊಹಿಸಲು ಸಾಧ್ಯವಿಲ್ಲ.

ದೇವರಿಗೆ ಮೇಕೆ ಹರಕೆ;

ಸೋಮವಾರ ಸುಮಲತಾ ಅವರ ಅಭಿಮಾನಿಗಳು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯಲ್ಲಿಯ ಶಿವ ದೇವಾಲಯದಲದಲ್ಲಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದ್ದರು. ಹಾಗೆಯೇ ಇಂದು ನಿಖಿಲ್ ಅವರ ಅಭಿಮಾನಿಗಳಿಂದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಅಹಲ್ಯದೇವಿ ಪೂಜೆ ಸಲ್ಲಿಸಲಾಗಿದೆ. ಜೊತೆಗೆ ತನ್ನ ನೆಚ್ಚಿನ ನಾಯಕನ ಗೆಲುವಿಗೆ ದೇವರಿಗೆ ಮೇಕೆ ಬಿಟ್ಟು ಅಭಿಮಾನಿಗಳು ಹರಕೆ ಹೊತ್ತುಕೊಳ್ಳುತ್ತಿದ್ದಾರೆ. ಅಲ್ಲದೆ ದೇವರಿಗೆ ಉರುಳು ಸೇವೆಯನ್ನು ಕೂಡ ಸಲ್ಲಿಸಿದ್ದಾರೆ.

@publictv.in

ಹೇಗಿದೆ ಬೆಟ್ಟಿಂಗ್ ಹವಾ?

ಇದುವರೆಗೂ ಬೆಟ್ಟಿಂಗ್‌ನಲ್ಲಿ ನಿಖಿಲ್ ಪರ ಹೆಚ್ಚು ಹಣ ಹೂಡಿಕೆ ಆಗುತ್ತಿತ್ತು. ಆದರೆ, ಎಕ್ಸಿಟ್ ಪೋಲ್‌ಗಳಲ್ಲಿ ಸುಮಲತಾ ಅವರ ಗೆಲುವು ಸಾಧ್ಯವಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಸುಮಲತಾ ಅವರ ಪರ ಹಣ ಹೂಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ, ಹಣದ ಮೊತ್ತವೂ ಹೆಚ್ಚಾಗಿದೆ. ಈ ಮೊದಲು ಸುಮಲತಾ ಪರ 80 ಸಾವಿರ ರೂ.ವರೆಗೆ ಬೆಟ್ಟಿಂಗ್ ನಡೆಯುತ್ತಿತ್ತು. ನಿಖಿಲ್ ಪರ 1 ಲಕ್ಷ ರೂ.ವರೆಗೂ ಚಾಲ್ತಿಯಲ್ಲಿತ್ತು. ಈಗ ಸುಮಲತಾ ಅವರ ಪರವೂ ಒಂದು ಲಕ್ಷ ರೂ. ನಡೆಯುತ್ತಿದೆ. ಅಂದರೆ, ಬೆಟ್ಟಿಂಗ್‌ನಲ್ಲಿಯೂ ಸಮಬಲದ ಜಿದ್ದಾಜಿದ್ದಿ ನಡೆದಿದೆ.