ಹೋಟೆಲ್ ಬಿಲ್ ಪಾವತಿಸದೇ ಎಸ್ಕೇಪ್ ಆದ ಮುಂಗಾರುಮಳೆ ಪೂಜಾ ಗಾಂಧಿಯ ವಿರುದ್ದ ಪೊಲೀಸ್ ಕೇಸ್..

0
420

ಒಂದು ಕಾಲದಲ್ಲಿ ಮುಂಗಾರುಮಳೆ ಸಿನಿಮಾದ ಮೂಲಕ ದೇಶ ವಿದೇಶದಲ್ಲಿ ಸದ್ದು ಮಾಡಿದ ಪೂಜಾ ಗಾಂಧಿ ಹೋಟೆಲ್ ನಲ್ಲಿ ವರ್ಷದ ವರಗೆ ರಾಜಕೀಯ ಮುಖಂಡನ ಜೊತೆ ಉಳಿದು ಬಿಲ್ ಪಾವತಿಸದೇ ಎಸ್ಕೇಪ್ ಆಗಿದ್ದಾರೆ. ಎನ್ನುವ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್-ರು ನಟಿಯನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಒಪ್ಪಿಕೊಂಡ ಪೂಜಾ ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷ ರೂಂ ಬುಕ್ ಮಾಡಿದ್ದರು. ಎಂದು ತಿಳಿದು ಬಂದಿದೆ.

Also read: ಲಕ್ಷಾಂತರ ಹಣ ಕರ್ಚು ಮಾಡಿ ಮದುವೆ ಮಾಡೋ ಕಾಲದಲ್ಲಿ ಬಿಜೆಪಿ ಶಾಸಕರೊಬ್ಬರು ಸಾಮೂಹಿಕ ಲಗ್ನದಲ್ಲಿ ಮಗನ ಮದುವೆ ಮಾಡಿ ಮಾದರಿಯಾದರ??

ಏನಿದು ಪ್ರಕರಣ?

ದಂಡು ಪಾಳ್ಯ ನಟಿ ಪೂಜಾ ಗಾಂಧಿ ವಿರುದ್ದ ಹೋಟೆಲ್ ಬಿಲ್ ಕಟ್ಟದ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂಲಗಳ ಪ್ರಕಾರ ಮಾರ್ಚ್​ 11ರಂದೇ ಪೂಜಾ ಗಾಂಧಿ ವಿರುದ್ದ ದೂರು ದಾಖಲಾಗಿದ್ದು, ಖಾಸಗಿ ಹೊಟೆಲ್ ನಲ್ಲಿ ವಾಸ್ತವ್ಯವಿದ್ದ ನಟಿ ಪೂಜಾ ಗಾಂಧಿ ಬಿಲ್ ಕಟ್ಟದೇ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ ಬೇರೊಬ್ಬರ ಹೆಸರಲ್ಲಿ ನಟಿ ಪೂಜಾ ಗಾಂಧಿ ನೀಡಿದ್ದ ಚೆಕ್ ಕೂಡ ಬೌನ್ಸ್ ಆಗಿದೆ ಎಂದು ಹೊಟೆಲ್ ಸಿಬ್ಬಂದಿ ಆರೋಪಿಸಿದ್ದಾರೆ.

ಬಿಜೆಪಿ ಮುಖಂಡನ ಜೊತೆ ವಾಸವಿದ್ರ?

ಹೌದು. ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ನಟಿ ಪೂಜಾ ಗಾಂಧಿ ಹಾಗೂ ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ 1 ವರ್ಷ ರೂಂ ಬುಕ್ ಮಾಡಿದ್ದರು. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷ ರೂಂ ಬುಕ್ ಮಾಡಿದ್ದರು. ಬಿಜೆಪಿ ಮುಖಂಡನ ಜೊತೆ ರೂಂ ಬುಕ್ ಮಾಡಿ ಆತಿಥ್ಯ ಸ್ವೀಕರಿಸಿದ್ದ ನಟಿ, 26 ಲಕ್ಷ ರೂಪಾಯಿ ಬಿಲ್ ಕಟ್ಟದೆ ಹೋಟೆಲಿಗೆ ಸತಾಯಿಸುತ್ತಿದ್ದರು. ಅಲ್ಲದೆ ಇದರಲ್ಲಿ 22 ಲಕ್ಷ ರೂಪಾಯಿ ಪಾವತಿಸಿ 3.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ಬೆಂಗಳೂರಿನ ಹೈ ಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದಾರೆ.

ಒಂದೇ ಹೋಟೆಲ್-ನಲ್ಲಿ ಒಂದು ವರ್ಷವಾಸ?

ಪೂಜಾ ಗಾಂಧಿ ಹಾಗೂ ಬಿಜೆಪಿ ಮುಖಂಡ ಅನಿಲ್​ ಪಿ. ಮೆಣಸಿನಕಾಯಿ ಒಂದು ವರ್ಷ ದಿ ಲಲಿತ್ ಅಶೋಕದಲ್ಲೇ ವಾಸ್ತವ್ಯ ಹೂಡಿದ್ದು, ಅಲ್ಲಿಂದ ಸೇವೆಯನ್ನು ಪಡೆದುಕೊಂಡಿದ್ದಾರೆ. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷ ರೂಂ ಬುಕ್ ಮಾಡಿದ್ದರು. ಇದಕ್ಕಾಗಿ ಇವರು ಹೋಟೆಲ್​ಗೆ 26.22 ಲಕ್ಷ ಹಣ ಪಾವತಿಸಬೇಕಿತ್ತು. ಅದರಲ್ಲಿ ಕೇವಲ 22.83 ಲಕ್ಷ ಪಾವತಿಸಲಾಗಿದ್ದು, 3.53 ಬಾಕಿ ಇತ್ತು. ಈ ಸಂಬಂಧ ಹೋಟೆಲ್ ನವರು ಪೂಜಾ ಹಾಗೂ ಅನಿಲ್​ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರೂ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮಾರ್ಚ್​ 11ರಂದು ಹೋಟೆಲ್ ನವರು ಹೈಗೌಂಡ್ಸ್​ ಪೊಲೀಸ್​ ಠಾಣೆಯಲ್ಲಿ ಅನಿಲ್​ ಹಾಗೂ ಪೂಜಾ ವಿರುದ್ಧ ದೂರು ದಾಖಲಿಸಿದ್ದಾರೆ. ಅನಿಲ್​ ಪಿ. ಮೆಣಸಿನಕಾಯಿ ಹೋಟೆಲ್​ನವರಿಗೆ ನೀಡಿದ್ದ ಚೆಕ್​ ಸಹ ಬೌನ್ಸ್​ ಆಗಿದ್ದು, ಅಲ್ಲಿ ಪೂಜಾ ಅವರು ನೀಡಿದ್ದ ವಿಳಾಸ ಸಹ ಸುಳ್ಳು ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ.

Also read: ಮಂಡ್ಯದ ಜನರಿಗಾಗಿ ಎರಡನೇ ಜನ್ಮ ಎತ್ತಿ ಬಂದಿದ್ದೇನೆ : ಎಚ್.ಡಿ.ಕೆ.; ಇಂತಹ ಸಿನಿಮೀಯ ಮಾತುಗಳಿಂದ ಮಂಡ್ಯದಲ್ಲಿ ಎಚ್.ಡಿ.ಕೆ. ಮಗ ನಿಖಿಲ್ ಗೆಲ್ಲುವುದು ಸಾಧ್ಯಾನಾ??