ಬಾರಿ ರೈಲು ದುರಂತ ತಪ್ಪಿಸಿದ ಪೂಜಾರಿ ಕೃಷ್ಣ; ಇವರ ಸಾಹಸ ನೂರಾರು ಜನರ ಪ್ರಾಣವನ್ನು ಉಳಿಸಿದೆ..

0
550

ಕೆಲವೇ ದಿನಗಳ ಹಿಂದೆ ಸಂಭವಿಸಿದ ಪಂಜಾಬ್ ಟ್ರೈನ್ ದುರಂತ ಮರೆಯಿವ ಮುನ್ನ ಉಡುಪಿಯಲ್ಲಿ ದುರಂತ ಕಾದಿತ್ತು ಇನ್ನೇನು ಕೆಲವೇ ನಿಮಿಷದಲ್ಲಿ ನೂರಾರು ಜನರು ಪ್ರಾಣವನ್ನೇ ಕಳೆದುಕೊಳ್ಳುತ್ತಿದರು. ವ್ಯಕ್ತಿಯೊಬ್ಬರ ಸಾಹಸದಿಂದ ಅದೃಷ್ಟವಶಾತ್ ದುರಂತ ತಪ್ಪಿದೆ. ಹೌದು ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣ ಬಳಿಯ ಕೊರಂಗ್ರಪಾಡಿ ಬ್ರಹ್ಮಸ್ಥಾನ ನಾಗಬನದ ಎದುರು ರೈಲು ಹಳಿ ಬಿರಿಕು ಬಿಟ್ಟಿದೆ.


Also read: ವರ್ಷಕೊಮ್ಮೆ ದರ್ಶನಕ್ಕೆ ತೆರೆಯುವ ಹಾಸನಾಂಬ ದೇವಾಲಯವು ಈ ವರ್ಷ 7 ದಿನವೂ 24 ಘಂಟೆ ದರ್ಶನಕ್ಕೆ ತೆರೆದಿರುತ್ತದೆ!!

ಕೆಲವೇ ನಿಮಿಷದಲ್ಲಿ ನೂರಾರು ಜನರ ಪ್ರಾಣ ಬಲಿಗಾಗಿ ಕಾದಿದ್ದೆ ಇದನ್ನು ವಾಯುವಿಹಾರಕ್ಕೆ ಬಂದ ಕೃಷ್ಣ ಪೂಜಾರಿ ಎಂಬುವರ ಕಣ್ಣಿಗೆ  ಬಿದ್ದಿದೆ, ಬಿರಿಕು ನೋಡುತ್ತಿದತೆಯೇ ದೊಡ್ಡದಾಗಿದೆ ಇದನ್ನು ಗಮನಿಸಿದ ಪೂಜಾರಿ ಕೃಷರವರು ಉಡುಪಿಯ ರೈಲ್ವೆ ಸ್ಟೇಷನ್ ವರೆಗೂ ಸುಮಾರು 6 km ವರೆಗೆ ಓಡಿಹೋಗಿ ಮಾಹಿತಿ ತಿಳಿಸಿದ್ದಾರೆ. ರೈಲ್ವೆ ಅಧಿಕಾರಿಗಳು ಕೂಡಲೇ ಪೂಜಾರಿಯವರ ಮಾಹಿತಿ ಆಧರಿಸಿ ಅದೇ ಮಾರ್ಗವಾಗಿ ಹೋಗಬೇಕಿದ್ದ ಎರಡು ರೈಲು ಸಂಚಾರವನ್ನು ಸ್ಥಗತಗೊಳಿಸಿ ರೈಲು ದುರಂತವನ್ನು ತಪ್ಪಿಸಿದ್ದಾರೆ.


Also read: ಪ್ರತಿನಿತ್ಯ ಮದ್ಯಪಾನ ಮಾಡುವುದರಿಂದ ದೇಹಕ್ಕೆ ಎಂಥ ಹಾನಿ ಮಾಡುತ್ತೆ ಅಂತ ತಿಳಿದುಕೊಂಡರೆ, ಖಂಡಿತ ಕುಡಿತ ಕಡಿಮೆ ಮಾಡ್ತೀರ!!

ಕಾಲು ನೋವುನಲ್ಲೆ ಕೃಷ್ಣ ಪೂಜಾರಿಯವರ ಸಾಹಸ:

ಕೃಷ್ಣ ಪೂಜಾರಿ ಅವರ ಬಲಗಾಲಿನಲ್ಲಿ ಒಂದು ವರ್ಷದಿಂದ ನರ ದೌರ್ಬಲ್ಯ ಕಾಣಿಸಿಕೊಂಡಿತ್ತು. ಅದಕ್ಕೆ ಅವರು ಇಂಜೆಕ್ಷನ್ ಮತ್ತು ಔಷಧಿಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದ್ದರು. ಕಾಲಿನ ಸ್ನಾಯುಗಳನ್ನು ಸಡಿಲಗೊಳಿಸುವ ಉದ್ದೇಶದಿಂದ ಜಲ್ಲಿಕಲ್ಲುಗಳ ಮೇಲೆ ನಡೆಯಬೇಕೆಂದು ವೈದ್ಯರು ಸೂಚಿಸಿದ್ದರು. ಕೊರಂಗ್ರಪಾಡಿಯ ರೈಲ್ವೆ ಹಳಿಯ ಬಳಿಯೇ ಅವರು ನೆಲೆಸುತ್ತಿದ್ದರಿಂದ, ಮತ್ತು ರೈಲಿನ ಹೊರತಾಗಿ ಅಲ್ಲಿ ಯಾರೂ ಅಡ್ಡಾಡದಿರುವುದರಿಂದ ಅಲ್ಲಿಯೇ ಬೆಳಗಿನ ವಾಯು ವಿಹಾರಕ್ಕೆ ಬರುತ್ತಿದ್ದರು.
ಆ ದಿನವು ಕೂಡ ವಾಯುವಿಹಾರಕ್ಕೆ ಬಂದ್ದಿದ ಅವರು ರೈಲಿನ ಹಳಿಯಲ್ಲಿ ಬಿರುಕುಬಿಟ್ಟಿದ್ದನ್ನು ನೋಡಿ ಗಾಭರಿಗೊಂಡಿದ್ದರು ಅಷ್ಟರಲ್ಲಿ ಒಂದು ರೈಲು ಅದೇ ಮಾರ್ಗದಲ್ಲಿ ಸಾಗಿದ್ದು, ಬಿರುಕು ಮತ್ತಷ್ಟು ದೊಡ್ಡದಾಗಿದ್ದು ಪೂಜಾರಿ ಗಮನಕ್ಕೆ ಬಂತು.


Also read: LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮ್ಯಾನೇಜ್‌ಮೆಂಟ್ ಟ್ರೈನೀ ಮತ್ತು ಅಸಿಸ್ಟೆಂಟ್ ಮ್ಯಾನೇಜರ್, ಹುದ್ದೆಗೆ ನೇಮಕಾತಿ ಪ್ರಕಟಣೆ..

ಮತ್ತೊಂದು ರೈಲು ಅದೇ ಮಾರ್ಗದಲ್ಲಿ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅರಿತ ಅವರು ತಮ್ಮ ಕಾಲು ನೋವನ್ನು ಲೆಕ್ಕಿಸದೇ ಉಡುಪಿ ರೈಲು ನಿಲ್ದಾಣದ ಕಡೆಗೆ ಓಡಲು ಆರಂಭಿಸಿದ್ದಾರೆ. ಸುಮಾರು 6 ಕಿ ಮೀ ಓಡಿದ ಅವರು ಹಳಿ ಬಿರುಕು ಬಿಟ್ಟಿರುವುದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಒಂದು ಪ್ರಯಾಣಿಕ ರೈಲನ್ನು ಇಂದ್ರಾಳಿ ನಿಲ್ದಾಣದಲ್ಲಿ, ಮತ್ತೂಂದು ರೈಲನ್ನು ಪಡುಬಿದ್ರಿ ನಿಲ್ದಾಣದಲ್ಲಿ ನಿಲ್ಲಿಸಿ. ಸುಮಾರು 40 ನಿಮಿಷಗಳ ಅಂತರದಲ್ಲಿ ಮೂವರು ಎಂಜಿನಿಯರ್‌ ತಂಡ ಇಲಾಖೆಯ ನಿರ್ವಹಣೆ ರೈಲು ಗಾಡಿಯ ಮೂಲಕ ಕೃಷ್ಣ ಅವರನ್ನು ಕುಳ್ಳಿರಿಸಿಕೊಂಡು ಬಿರುಕು ಬಿಟ್ಟ ಸ್ಥಳಕ್ಕೆ ತಲುಪಿ ತಾತ್ಕಾಲಿಕ ತುರ್ತು ದುರಸ್ತಿಮಾಡಿ ರೈಲು ಸಂಚಾರ ಪ್ರಾರಂಭಿಸಿದ್ದಾರೆ. ದಿನಗೂಲಿ ಕೆಲಸಗಾರನಾದ ಪೂಜಾರಿ ಕೃಷ್ಣರವರ ಸಾಹಸವನ್ನು ಇಡಿ ರೈಲ್ವೆ ಇಲಾಖೆಯೇ ಮತ್ತು ರಾಜ್ಯದ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಕೃಷ್ಣ ಅವರಿಗೆ ಮೊದಲೇ ಕಾಲು ನೋವು ಇದ್ದ ಕಾರಣ ಮತ್ತೆ ಜಲ್ಲಿಕಲ್ಲಿನ ಮೇಲೆ ಓಡಿದ್ದರಿಂದ ಕಾಲು ನೋವು ಹೆಚ್ಚಾಗಿದೆ ಅದೆಲ್ಲವನ್ನು ಲೆಕ್ಕಿಸದ ಪೂಜಾರಿಯವರು ಒಂದು ದೊಡ್ಡ ದುರಂತವನ್ನು ತಪ್ಪಿಸಿದ ಕುಷಿಯಲ್ಲಿದ್ದಾರೆ.