ಎಚ್ಚರ ಅಸಿಡಿಟಿ ಆಗುತ್ತಿದೆ ಅಂತ ನೀವೇನದರು ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ನಿಮಗೆ ಕ್ಯಾನ್ಸರ್ ಬರುತ್ತದೆ!!

0
440

ಜೀರ್ಣಕ್ರಿಯೆಯ ಆಮ್ಲದ ಅಸಮತೋಲನದಿಂದಾಗಿ ಅಸಿಡಿಟಿ ಕಂಡು ಬರುವುದು ಸಾಮಾನ್ಯವಾಗಿದ್ದು. ಜೀರ್ಣಕ್ರಿಯೆಯ ವ್ಯವಸ್ಥೆಯಲ್ಲಿ ಆಮ್ಲವು ಹಿಮ್ಮುಖ ಹರಿವನ್ನು ಉಂಟು ಮಾಡಿದರೆ ಹೊಟ್ಟೆ ಉರಿಯಂತಹ ಅಸಿಡಿಟಿ ಸಮಸ್ಯೆಗಳು ಕಾಣಿಸುತ್ತದೆ. ಇದರಿಂದ ಹಲವು ತೊಂದರೆಗಳು ಕಂಡು ಬರುತ್ತಿದ್ದು. ಇಂತಹ ಯಾತನೆಗಳ ನಿವಾರಣೆಗಾಗಿ ನೀವೂ ತೆಗೆದುಕೊಳ್ಳುವ ಔಷಧಿಯಿಂದ ಕ್ಯಾನ್ಸರ್ ಬರುತ್ತದೆ ಎಂದು USA ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಎಚ್ಚರಿಸಿದ್ದು ಯಾವ ಮಾತ್ರೆಗಳು ಅಪಾಯಕಾರಿ ಎನ್ನುವುದು ಇಲ್ಲಿದೆ ನೋಡಿ.

ಅಸಿಡಿಟಿ ಮಾತ್ರೆಗಳಿಂದ ಕ್ಯಾನ್ಸರ್?

ಹೌದು ಹೊಟ್ಟೆ ನೋವು ಎದೆಯುರಿ ಚಿಕಿತ್ಸೆಗಾಗಿ ಭಾರತದಲ್ಲಿ ಮಾರಾಟವಾಗುವ ಔಷಧದಲ್ಲಿ ಕಡಿಮೆ ಮಟ್ಟದ ಕ್ಯಾನ್ಸರ್ ಪದಾರ್ಥಗಳಿವೆ ಎನ್ನುವುದು ಬೆಳಕಿಗೆ ಬಂದಿದ್ದು. ರಾನಿಟಿಡಿನ್, ಮತ್ತು ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಗ್ಲಾಕ್ಸೊ ಸ್ಮಿತ್‌ಕ್ಲೈನ್ ​​ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ‘ಅಸಿಲೋಕ್ GlaxoSmithKline ಹೆಸರಿನಲ್ಲಿ ಲಭ್ಯವಿದ್ದು ಈ ಎರಡು ಕಂಪನಿಗಳು ಭಾರತದಲ್ಲಿ ಉನ್ನತ ಔಷಧ ಮಾರಾಟ ಕಂಪನಿಗಳಾಗಿವೆ. ಅದರಲ್ಲಿ “ಕೆಲವು ರಾನಿಟಿಡಿನ್ ಮೆಡಿಸೇನ್-ಗಳು ಜಂಟಾಕ್ ಎಂದು ಕರೆಯಲ್ಪಡುವ ಕೆಲವು ಉತ್ಪನ್ನಗಳನ್ನು ಒಳಗೊಂಡಂತೆ, ಕಡಿಮೆ ಮಟ್ಟದಲ್ಲಿ ಎನ್-ನೈಟ್ರೊಸೊಡಿಮೆಥೈಲಾಮೈನ್ (ಎನ್ಡಿಎಂಎ) ಎಂಬ ನೈಟ್ರೊಸಮೈನ್ ಹೊಂದಿರುತ್ತದೆ” ಎಂದು ಎಫ್ ಡಿಎ ಹೇಳಿದೆ.
ಇಂತಹ ಔಷಧಿಗಳನ್ನು ಪ್ರಯೋಗಾಲಯ ಪರೀಕ್ಷೆಗಳ ಫಲಿತಾಂಶ ಆಧಾರದ ಮೇಲೆ ಎನ್‌ಡಿಎಂಎ ಗುರುತ್ತಿಸಿದ್ದು, ಇದು ಕ್ಯಾನ್ಸರ್ ಕಾರಕ ಎಂದು ಹೇಳಿದೆ. ಅದರಂತೆ ಜಂಟಾಕ್ ಎನ್ನುವ ಫ್ರೆಂಚ್ ಫಾರ್ಮಾ ಮೇಜರ್ ಸನೋಫಿ ತಯಾರಿಸಿದ. ಔಷಧಿಗಳನ್ನು ಭಾರತದಲ್ಲಿ ಮಾರಾಟ ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ. ಸಾಮಾನ್ಯವಾಗಿ ಭಾರತದ ವ್ಯೆದ್ಯರು ರಾನಿಟಿಡಿನ್ ಆಮ್ಲ ಸಂಬಂಧಿತ ಕೆಮ್ಮು, ಅಜೀರ್ಣ, ಹೊಟ್ಟೆ ನೋವು ಮತ್ತು ಎದೆಯುರಿ ಗುಣಪಡಿಸಲು ಇದನ್ನು ಸೂಚಿಸುತ್ತಾರೆ.

ಈ ಕುರಿತು ಬ್ಲೂಮ್‌ಬರ್ಗ್ ಮತ್ತೊಂದು ಉನ್ನತ ಆರೋಗ್ಯ ನಿಯಂತ್ರಕ, ಉಲ್ಲೇಖಿಸಿದ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ, “ರಾನಿಟಿಡಿನ್ ಬಳಸುವ ರೋಗಿಗಳು ಯಾವ
ಯಾವ ಅಪಾಯಕ್ಕೆ ಒಳಗಾಗುತ್ತಾರೆಯೇ ಎಂದು ಪತ್ತೆ ಹಚ್ಚುತ್ತಿದ್ದಾರೆ. ಅದರಂತೆ ರೋಗಿಗಳ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿ, ಎಫ್‌ಡಿಎಯೊಂದಿಗೆ ಕೆಲಸ ಮಾಡುತ್ತಿದ್ದು ಜಂಟಾಕ್ ಒಟಿಸಿ ಒಂದು ದಶಕದಿಂದಲೂ ಮಾರುಕಟ್ಟೆಯಲ್ಲಿ ಎಲ್ಲಾ ನಿರ್ದಿಷ್ಟ ಸುರಕ್ಷತಾ ಅವಶ್ಯಕತೆಗಳನ್ನು ಪೂರೈಸುತ್ತದೆ. ಅದರಂತೆ FDA ಹೊರಡಿಸಿದ ಎಚ್ಚರಿಕೆಯನ್ನು ನಾವು ಗಮನಿಸಿದ್ದೇವೆ, ಆದರೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ನಾವು ಅಂತಿಮ ಫಲಿತಾಂಶಗಳಿಗಾಗಿ ಕಾಯುತ್ತೇವೆ ಎಂದು ಸಿಡಿಎಸ್ಕೊ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಎಫ್‌ಡಿಎ ತಿಳಿಸಿದ ಹಾಗೆ ಇದು ತುರ್ತು ಪರಿಸ್ಥಿತಿ ಅಲ್ಲ ಪ್ರಾಥಮಿಕ ಪರೀಕ್ಷೆಗಳಲ್ಲಿ ರಾನಿಟಿಡಿನ್‌ನ ಮಟ್ಟವು ಸಾಮಾನ್ಯ ಆಹಾರಗಳಲ್ಲಿನ ಪ್ರಮಾಣವನ್ನು ಮೀರಿದೆ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ, ನೀವೂ ಈ ಮಾತ್ರೆಗಳನ್ನು ಕೊಡಬೇಡಿ ಎಂದು ವ್ಯೆದ್ಯರಲ್ಲಿ ಸಲಹೆ ಮಾಡಬಹುದು. ಅದರಂತೆ ವೈದ್ಯರು ರೋಗಿಗಳಿಗೆ ಕೊಡುವ ಔಷಧಿಗಳು ಎಷ್ಟು ಸುರಕ್ಷಿತವಾಗಿವೆ ಎನ್ನುವುದನ್ನು ತಿಳಿಸಿದೆ. ಈ ಮೊದಲು ರಕ್ತದೊತ್ತಡ ಮತ್ತು ಹೃದಯ ಚಿಕಿತ್ಸೆಗೆ ನೀಡುವ ಔಷಧಿಯಲ್ಲಿ ಅಪಾಯಕಾರಕ ವಸ್ತು ಇರುವುದನ್ನು ಎಫ್‌ಡಿಎ ಪತ್ತೆ ಮಾಡಿತ್ತು, ಆದರಿಂದ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ಹೆಚ್ಚಿನ ಎಚ್ಚರವಹಿಸುವುದು ಒಳ್ಳೆಯದು.