ನಿಮ್ಮ್ ಮಕ್ಕಳ ಮೆಚ್ಚಿನ ಆಹಾರವಾದ ಮ್ಯಾಗ್ಗಿ , ನೂಡಲ್ಸ್ ನಲ್ಲಿ ಸೀಸ ಮತ್ತು ವಿಷಕಾರಿ ಅಂಶ ಇದೆ ಎಂದು ಆಹಾರ ತಯಾರಿಕ ಕಂಪನಿ ನೆಸ್ಲೆ ಒಪ್ಪಿಕೊಂಡಿದೆ…

0
773

ಜನಪ್ರಿಯ ಆಹಾರವಾಗಿ ಹೆಸರು ಪಡೆದ ಮಕ್ಕಳ ಮೆಚ್ಚಿನ ಮ್ಯಾಗಿಯಲ್ಲಿ ವಿಷಕಾರಿ ರಾಸಾಯನಿಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಾರಿ ಚರ್ಚೆಗೆ ಒಳಗಾಗಿ ನೆಸ್ಲೆ ಕಂಪನಿ ವಿರುದ್ದ ಹಲವಾರು ದೂರುಗಳು ಕೇಳಿ ಬಂದು ಕಳಪೆ ಹಾಗೂ ಆರೋಗ್ಯಕ್ಕೆ ಹಾನಿಕರ ವಸ್ತುಗಳಾದ ಮ್ಯಾಗ್ಗಿ, ನೂಡಲ್ಸ್-ಗಳನ್ನು ಕೋಟ್ಯಂತರ ಗ್ರಾಹಕರಿಗೆ ಮಾರಾಟ ಮಾಡಿದೆ ಎಂದು ಆಪಾದಿಸಿ ಗ್ರಾಹಕ ವ್ಯವಹಾರಗಳ ಇಲಾಖೆ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಸಂಸ್ಥೆ (NCDRS) ಯಲ್ಲಿ ನೆಸ್ಲೆ ಕಂಪನಿಯಿಂದ 640 ಕೋಟಿ ರೂ. ಪರಿಹಾರ ಕೋರಿ ದೂರು ಅರ್ಜಿ ಸಲ್ಲಿಸಿತ್ತು. ಇಂದು ಸರ್ಕಾರ ಹೂಡಿರುವ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಇಂದು ವಿಮರ್ಶೆ ನಡೆಸಿದೆ.

ಪ್ರಕರಣದ ಹಿನ್ನೆಲೆ:

ನೆಸ್ಲೆ ಕಂಪನಿಯು ಗ್ರಾಹಕರಿಗೆ ಜಾಹೀರಾತುಗಳಲ್ಲಿ ತಪ್ಪು ಮಾಹಿತಿ ನೀಡಿ ಅವರನ್ನು ತಪ್ಪುದಾರಿಗೆಳೆದಿದೆ ಮಾತ್ರವಲ್ಲ್, ಸಂಸ್ಥೆ ಕೇವಲ ಲಾಭಕ್ಕಾಗಿ ಅನ್ಯಾಯದ ವ್ಯಾಪಾರ ಮಾರ್ಗಗಳನ್ನು ಬಳಸಿದೆ ಎಂದು ಆಪಾದಿಸಲಾಗಿ ಲಕ್ಷಾಂತರ ಗ್ರಾಹಕರ ಪರವಾಗಿ ದೂರು ಸಲ್ಲಿಸಿದ ಗ್ರಾಹಕ ವ್ಯವಹಾರಗಳ ಇಲಾಖೆ, ಸೆಸ್ಲೆ ಸಂಸ್ಥೆಯಿಂದ ಹಣವನ್ನು ಗ್ರಾಹಕ ರಕ್ಷಣಾ ಕಾಯ್ದೆಯಡಿ ಗ್ರಾಹಕ ಕಲ್ಯಾಣ ನಿಧಿಯಲ್ಲಿ ಠೇವಣಿ ಇಡಲು ಆದೇಶ ನೀಡುವಂತೆ ಎನ್.ಸಿ.ಡಿ.ಆರ್.ಸಿ ಯನ್ನು ವಿನಂತಿಸಿತ್ತು. ಅಲ್ಲದೆ ಈ ಹಣವನ್ನು ಠೇವಣಿ ಇಡುವವರೆಗೆ ನೆಸ್ಲೆ ಮೇಲೆ 18% ಬಡ್ದಿ ದರವನ್ನು ವಿಧಿಸಲೂ ಇಲಾಖೆ ಕೇಳಿಕೊಂಡಿತ್ತು.

ಈ ಎಲ್ಲ ಹಿನ್ನೆಲೆಯಲ್ಲಿ ಮ್ಯಾಗಿ ಸ್ಯಾಂಪಲ್ ಗಳ ಮೇಲೆ ಮೈಸೂರಿನ ಕೇಂದ್ರಿಯ ಆಹಾರ ಸಂಶೋಧನಾ ಮತ್ತು ತಂತ್ರಜ್ಞಾನ ಸಂಸ್ಥೆ ನೀಡಿರುವ ವರದಿ ಆಧಾರದ ಮೇಲೆ ಪ್ರೊಸೀಡಿಂಗ್ಸ್ ಆಧಾರವನ್ನು ರೂಪಿಸುತ್ತೇವೆ ಎಂದು ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಅವರ ನೇತೃತ್ವದಲ್ಲಿನ ನ್ಯಾಯಪೀಠ ಹೇಳಿಕೆ ನೀಡಿದೆ. ಅತ್ಯಂತ ಜನಪ್ರಿಯ ನೂಡಲ್ಸ್ ಸುರಕ್ಷತೆಯು ಪ್ರಶ್ನಿಸಲ್ಪಟು ನಂತರ ಸರ್ಕಾರವು ನೆಸ್ಲೆ ಚರ್ಚೆ ಮತ್ತೆ ಹೊತ್ತಿಕೊಳ್ಳುತ್ತದೆ ಎಂದು ನ್ಯಾಯಾಲಯದ ವಿಚಾರಣೆ ಸ್ಪಷ್ಟ ಸೂಚನೆಯಾಗಿದೆ. ನೆಸ್ಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಪುನರಾವರ್ತನೆ ಮಾಡಿದೆ.

ಈ ಹಿಂದೆ ನಡೆದ ವಿಚಾರಣೆಯಲ್ಲಿ:

ನೆಸ್ಲೆ ಮೇಲ್ಮನವಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗದ ಮುಂದೆ ವಿಚಾರಣೆಗೆ ಸುಪ್ರೀಂಕೋರ್ಟ್ ಈ ಹಿಂದೆ ತಡೆ ನೀಡಿತ್ತು. ಸುಮಾರು ಮೂರು ದಶಕಗಳಷ್ಟು ಹಳೆಯದಾದ ಗ್ರಾಹಕ ರಕ್ಷಣೆ ಕಾಯ್ದೆ ಬಳಕೆ ವಿನಾಯತಿಯಲ್ಲಿ ನೆಸ್ಲೆ ಇಂಡಿಯಾ ಕಂಪನಿ ವಿರುದ್ಧ ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗದ ಮುಂದೆ ಗ್ರಾಹಕ ವ್ಯವಹಾರಗಳ ಸಚಿವಾಲಯ 2015ರಲ್ಲಿ ದೂರು ದಾಖಲಿಸಿತ್ತು. ಅದೇ ವರ್ಷ ಮ್ಯಾಗಿ ಸೇವನೆ ಸುರಕ್ಷಿತವಿಲ್ಲ ಎಂದು ತಿಳಿಸಿತ್ತು. ಈಗ ಇದೆ ವಿಚಾರವಾಗಿ ಮ್ಯಾಗ್ಗಿಯಲ್ಲಿ ಮಿತಿಗಿಂತ ಹೆಚ್ಚಿದ್ದ ಸೀಸ ಮತ್ತ್ ಎಮ್.ಎಸ್.ಜಿ. ಯಿಂದ ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಆದರಿಂದ ದೇಶಾದ್ಯಂತ ಆಹಾರವನ್ನು ನೀಡುತ್ತಿರುವ ಆಹಾರ ಉತ್ಪನ್ನಗಳ ಸುರಕ್ಷತೆಯನ್ನು ಮತ್ತೊಮ್ಮೆ ವಿಚಾರಣೆ ಮಾಡಿದೆ.

Also read: ಈ ತರಕಾರಿಗಳನ್ನ ಜಾಸ್ತಿ ತಿಂದ್ರೆ ಹೈಪೋ ಥೈರೊಯ್ಡ್ ಖಾಯಿಲೆ ಬರೋದಂತು ಗ್ಯಾರಂಟಿ…