ಪಾಸಿಟಿವ್ attitude ಪಾಲಕಿ ನೀವಾಗಿ …!

0
687

ಜೀವನದಲ್ಲಿ ನಮಗೆ ಬೇಕಿರುವುದು ಪಾಸಿಟಿವ್ ಆ್ಯಟಿಟ್ಯೂಡ್, ನಮ್ಮ ಮಹತ್ವವನ್ನು ನಾವೇ ತಿಳಿದುಕೊಳ್ಳಬೇಕು. ಹೆಮ್ಮೆ ಪಡಬೇಕು. ಜೊತೆಗೆ ಆತ್ಮವಿಶ್ವಾಸ. ಉತ್ಸಾಹದ ಜೊತೆಗೆ ನಂಬಿಕೆಯನ್ನು ಸದಾ ಉಳಿಸಿಕೊಳ್ಳಬೇಕು.

“ನಾನು ಮಾತ್ರವೇ ನನ್ನ ಜೀವನವನ್ನು ಬದಲಾಯಿಸಿಕೊಳ್ಳಬಲ್ಲೆ, ಮತ್ತೊಬ್ಬರು ಆ ಬದಲಾವಣೆ ಮಾಡಲಾರರು” ಎಂಬ ಕೆರೋಲ್ ಬರ್ ನೆಟ್ ರವರವ ಮಾತು ಸದಾಕಾಲ ನಮ್ಮ ಮನದ ಪರದೆಯ ಮೇಲೆ ರಾರಾಜಿಸುತ್ತಿದ್ದರೆ ಚಂದ

ಆದರೆ ಅವರು ಅದರಿಂದಾಚೆಗೊಂದು ಆಲೋಚನೆಯನ್ನು ಬೆಳೆಸಿಕೊಳ್ಳಬೇಕು. ಆಲೋಚನೆಯನ್ನು ಬೆಳೆಸಿಕೊಳ್ಳಬೇಕು. ಮೊದಲು ಅವರಂತೆಯೇ, ಸಾಮಾನ್ಯ ವೃತ್ತಿಯಲ್ಲಿದ್ದವರೇ. ಆದರೆ ಅವರ ಶ್ರಮ, ಪ್ರಮಾಣಿಕತೆ, ಶಿಸ್ತು ಮತ್ತು ನಿರಂತರ ದುಡಿಮೆಯಿಂದ ತಮ್ಮ ಬದುಕನ್ನು ಶ್ರೀಮಂತವಾಗಿರಿಸಿಕೊಂಡಿದ್ದಾರೆ. ಅದಕ್ಕೆ ಅವರು ಎಲ್ಲವನ್ನು ತ್ಯಾಗ ಮಾಡಿದ್ದಾರೆ.

*ಕೀಳಹಿರಿಮೆ ಎಂಬ ಭೂತವನ್ನು ತೊಲಗಿಸಿ: ಬೇರೆಯವರಲ್ಲಿ ನಿಮ್ಮನ್ನು ಹೋಲಿಸಿ ಅವರಂತೆ ‘ನಾನಿಲ್ಲ’ ಎಂಬ ಕೊರಗನ್ನು ಇಲ್ಲವಾಗಿಸಿಕೊಳ್ಳಿ. ಯಾವಾಗಲೂ ಒಂದು ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ. ಮೂರು ಹೊತ್ತು ಊಟ ಮಾಡುವ ವ್ಯಕ್ತಿಯನ್ನಷ್ಟೇ ಪರಿಗಣಿಸಲು ಹೋಗದೆ ಒಂದು ಹಿಡಿ ತುತ್ತಿಗೂ ಪರದಾಡುವ ಮಂದಿಯ ಬಗ್ಗೆ ಗಮನವಿಡಿ. ಆಗ ನಿಮ್ಮ ಕೊರಗು ಇಲ್ಲವಾಗುತ್ತದೆ.

*ನೀವೇ ನಿಮ್ಮ ಬೆನ್ನನ್ನು ತಟ್ಟಿಕೊಳ್ಳಿ: “ನನ್ನ ಹಣೆಬರಹ ಸರಿ ಇಲ್ಲ, ನಾನು ಮಾಡುವ ಒಂದು ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಯಾವುದಾದರೂ ಒಂದು ಲೋಪ ಇದ್ದೇ ಇರುತ್ತೆ. ನನಗೆ ಅದೃಷ್ಟವೇ ಒಲಿಯುವುದಿಲ್ಲ” ಎಂಬ ವಿಷಾದದ ಮಾತುಗಳು ನಿಮ್ಮಲ್ಲಿ ಇರುವ ಆತ್ಮವಿಶ್ವಾಸವನ್ನು ಕತ್ತು ಹಿಸುಕಿ ಸಾಯಿಸಿಬಿಡುತ್ತವೆ ಜಾಗೃತವಾಗಿರಬೇಕು.

‘ಮರಳಿ ಯತ್ನವ ಮಾಡು’ ಎಂಬ ಸಾಲು ಯಾವಾಗಲೂ ಜಪಿಸುತ್ತಿರಿ. ಎಲ್ಲರಿಗೂ ಎಲ್ಲವೂ ಒಲಿಯುವುದಿಲ್ಲ. ನಿಮಗೆ ಯಾವುದು ಸುಲಭವೆನಿಸುತ್ತದೊ ಆ ಕ್ಷೇತ್ರದಲ್ಲಿ ಗಮನಹರಿಸಿ. ಕೋಗಿಲೆಗೆ ಹಾಡು ಒಲಿದರೆ, ನವಿಲಿಗೆ ನಾಟ್ಯ ಒಲಿಯುತ್ತದೆ. ಇದು ಯಾವ ಕ್ಷಣದಲ್ಲೂ ನಿಮ್ಮ ಅರಿವಿನಲ್ಲಿರಲಿ.

*ನಿರೀಕ್ಷೆಯನ್ನು ಕಡಿಮೆ ಮಾಡಿಕೊಳ್ಳಿ: ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿರೀಕ್ಷೆಗೊಂದು ಮಿತಿ ಇರಲಿ.

*ಏಣಿ ಹತ್ತಿಸಿ – ಇಳಿಸುವವರ ನಡುವೆ: ಆಡಿಕೊಂಡು’ನಗುವವರ ಮುಂದೆ ಬೀಳಬಾರದು’ ಎಂಬುದು ನಾಣ್ಣುಡಿ. ಇದು ಸತ್ಯವು ಕೂಡ. ಪ್ರತಿಯೊಂದು ವಿಚಾರದಲ್ಲೂ ಸಾಮಾನ್ಯವಾಗಿ ಇರುತ್ತದೆ. ಆದರೆ ಈ ಹೊಗಳಿಕೆಯನ್ನು ಆಶ್ರಯಿಸಿ ಉಬ್ಬಿಹೋಗುವ ನಾವುಗಳು, ತೆಗಳಿಕೆಯನ್ನು ಕೇಳಿದೊಡನೆಯೇ ಕುಗ್ಗಿ ಹೋಗುವುದೇಕೆ? ಇದಕ್ಕಾಗಿಯೇ ‘ತನ್ನ ಬಣ್ಣಿಸಬೇಡ’ ಇದಿರ ಅಳಿಯಲು ಬೇಡ’. ಎಂದು ಬಸವಣ್ಣನವರು ಹೇಳಿರುವುದು.

*ನೆಗೆಟಿವ್ ಥಿಂಕಿಂಗ್ ಮಾಡಲು ಹೋಗಬೇಡಿ.

ಯಶಸ್ಸು, ಸಂಪತ್ತು, ಸಾಧನೆ ಎಲ್ಲವೂ ಕೈಗೂಡಬೇಕೆಂದರೆ ನಿಮ್ಮ ನಡೆ-ನುಡಿಯಲ್ಲಿ ಪಾಸಿಟಿವ್ ಅಥವಾ ಸಕಾರಾತ್ಮಕ ಗುಣಗಳನ್ನು ರೂಢಿಸಿಕೊಂಡು, ಯಾವುದೇ ಸಂದರ್ಭದಲ್ಲೂ ಧೈರ್ಯಗೆಡದೆ ತಾಳ್ಮೆಯಿಂದ ಪರಿಹರಿಸಿಕೊಳ್ಳಿ. ನಿಮ್ಮ ತೀರ್ಮಾನಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನಿಮ್ಮ ತೀರ್ಮಾನಗಳೊಂದಿಗೆ ಮುಂದಿನ ಹೆಜ್ಜೆಗಳನ್ನಿಟ್ಟು ಬೇರೆಯವರಿಗೆ ಆದರ್ಶವಾಗಿರಿ. ಅದು ಆದರ್ಶ ಪಾಸಿಟಿವ್ ಆ್ಯಟಿಟ್ಯೂಡ್ ಎಂದೆನಿಸುತ್ತದೆ.