ಬಾಲಾಕೋಟ್ ದಾಳಿಯಲ್ಲಿ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರನ್ನು ದ್ವಂಶ ಮಾಡಿದ ಇಬ್ಬರು ಪೈಲಟ್-ಗಳು ಬಿಚ್ಚಿಟ್ಟ ರೋಚಕ ಕ್ಷಣಗಳು..

0
235

ಪಲ್ವಾಮದಲ್ಲಿ ಭಾರತೀಯ ಯೋದರ ಮೇಲೆ ಪಾಕ್ ಆಶ್ರಿತ ಉಗ್ರರು ನಡೆಸಿದ ದಾಳಿಯ ಪ್ರತಿಕಾರವಾಗಿ ಬಾಲಾಕೋಟ್ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಯಲ್ಲಿ ನೂರಾರು ಉಗ್ರರು ನಿರ್ನಾಮವಾದರು, ಈ ವಿಷಯ ಇಡಿ ದೇಶದಲ್ಲಿ ಸಂತಸ ಮೂಡಿಸಿತ್ತು ಸೇಡಿಗೆ ಸೇಡು ತಿರಿಸಿಕೊಂಡ ಹೆಮ್ಮೆ ದೇಶದಲ್ಲಿ ಹರಡಿತ್ತು, ಆದರೆ ದಾಳಿಯ ಹೇಗೆ ನಡೆಯಿತು ಎನ್ನುವುದರ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಕೂಡ ಹೊರ ಬಿಟ್ಟಿರಲಿಲ್ಲ, ದಾಳಿಯ ನಂತರವೂ ಇದರ ಬಗ್ಗೆ ಮಾಹಿತಿ ಇರಲಿಲ್ಲ, ಆದರೆ ಈಗ ಮಾಧ್ಯಮ ಒಂದಕ್ಕೆ ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್ ಲೀಡರ್ ವೊಬ್ಬರು ಬಾಲಕೋಟ್ ಏರ್ ಸ್ಟ್ರೈಕ್ ನ ಅನುಭವ ಹಂಚಿಕೊಂಡಿದ್ದು, ದಾಳಿಯ ರೋಚಕ ಕ್ಷಣಗಳನ್ನು ಹೇಗಿವೆ ನೋಡಿ.

Also read: ವಾಹನ ಸವಾರರೆ ಎಚ್ಚರ; ಇನ್ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಬಿಳ್ಳಲಿದೆ ಲಕ್ಷ ಲಕ್ಷ ದಂಡ!..

ಹೌದು ಬಾಲಕೋಟ್ ಏರ್ ಸ್ಟ್ರೈಕ್ ನಲ್ಲಿ ಭಾಗಿಯಾಗಿದ್ದ ಮಿರಾಜ್ 2000 ಯುದ್ಧ ವಿಮಾನದ ಇಬ್ಬರು ಪೈಲಟ್ ಗಳು ಎನ್ ಡಿಟಿವಿ ಗೆ ನೀಡಿದ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಆ ಅನುಭವಗಳನ್ನು ಹಂಚಿಕೊಂಡಿದ್ದು, ಆ ದಾಳಿಗೂ ಮುನ್ನ ನಾವು ಆದೆಷ್ಟು ಸಿಗರೇಟ್ ಸೇದಿದ್ದದೆವೋ ಲೆಕ್ಕವಿಲ್ಲ. ಪಾಕಿಸ್ತಾನಕ್ಕೆ ಸುಳಿವೂ ನೀಡದಂತೆ ಅಂಥದೊಂದು ಮಹತ್ವದ ದಾಳಿ ನಡೆಸುವದು ನಮ್ಮ ಗುರಿಯಾಗಿತ್ತು. ನಮ್ಮ ಗುರಿ ತಪ್ಪಿರುವುದಕ್ಕೆ ಸಾಧ್ಯವೇ ಇಲ್ಲ” ಎಂದು ಭಾರತೀಯ ವಾಯುಸೇನೆಯ ಸ್ಕ್ವಾಡ್ರನ್ ಲೀಡರ್ ಹೇಳಿದ್ದಾರೆ.

ಪೈಲಟ್ ಗಳು ಹಂಚಿಕೊಂಡ ರೋಚಕ ವಿಷಯ;

ಜೈಷ್ ಇ ಮೊಹಮದ್ ಉಗ್ರ ಸಂಘಟನೆಯ ಉಗ್ರರು ಅಡಗಿದ್ದ ಬಾಲಾಕೋಟ್ ನಲ್ಲಿನ ಕ್ಯಾಂಪ್ ಗಳು ನಮ್ಮ ಗುರಿಗಳಾಗಿತ್ತು. ನಮ್ಮ ಹಿರಿಯ ಅಧಿಕಾರಿಗಳ ಆದೇಶದಂತೆ ನಾವು ಪಾಕಿಸ್ತಾನ ಆಕ್ರಮಿತ ಗಡಿಯೊಳಗೆ ನುಗ್ಗಿ ನಮಗೆ ನೀಡಲಾಗಿದ್ದ ಗುರಿಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ನಿಖರವಾಗಿ ಧ್ವಂಸ ಮಾಡಿದ್ದೇವೆ. ಅದು ಎರಡೂವರೆ ತಾಸಿನ ಕಾರ್ಯಾಚರಣೆ. ಅದಕ್ಕೂ ಮುನ್ನ ನಾವು ಸಾಕಷ್ಟು ಸಿಗರೇಟ್ ಸೇದಿದ್ದೆವು. ಪಾಕಿಸ್ತಾನಕ್ಕೆ ಸುಳಿವೂ ಸಿಗದಂತೆ ಕಾರ್ಯಾಚರಣೆ ಮಾಡಿ ಮುಗಿಸೋದು ನಮ್ಮ ಗುರಿಯಾಗಿತ್ತು. ಆದ್ದರಿಂದ ಸಹಜವಾಗಿಯೇ ತಲೆಬಿಸಿಯಾಗಿತ್ತು. ಜೊತೆಗೆ ಪುಲ್ವಾಮಾನದಲ್ಲಿ ನಮ್ಮ ಸಹೋದ್ಯೋಗಿಗಳ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಕಿಚ್ಚು ನಮ್ಮೊಳಗಿತ್ತು’ ಎಂದು ಹೇಳಿದ್ದಾರೆ.

Also read: ಗ್ರಾಮ ವಾಸ್ತವ್ಯ ನಡೆಸಿರುವ ಸಿಎಂ ಅವರ ಒಂದು ದಿನದ ವಾಸ್ತವ್ಯಕ್ಕೆ ಖರ್ಚಾದ ಹಣ ಕೋಟಿ ರೂ ಅಂತೆ, ಇದೇನಾ ದುಂದು ವೆಚ್ಚವಿಲ್ಲದೆ ಗ್ರಾಮ ವಾಸ್ತವ್ಯ??

ಗುರಿ ತಪ್ಪಲು ಸಾಧ್ಯವೇ ಇಲ್ಲ;

ನಮ್ಮ ವಿಮಾನದಲ್ಲಿದ್ದ ಸ್ಪೈಸ್ 2000 ಉಪಗ್ರಹ ನಿಯಂತ್ರಿತ ಬಾಂಬ್ ಗಳ ಗುರಿಗಳ ಮೇಲೆ ಉಡಾಯಿಸಿದ್ದೆವು. ಬಾಂಬ್ ಗಳು ನಿಖರವಾಗಿ ಗುರಿ ತಲುಪಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು ಎಂದು ಹೇಳಿದ್ದಾರೆ. ಇನ್ನು ವಾಯುದಾಳಿಯ ಸತ್ಯಾಸತ್ಯತೆ ಕುರಿತು ಎದ್ದಿದ್ದ ವಿವಾದಗಳಿಗೆ ಉತ್ತರ ನೀಡಿರುವ ಮತ್ತೋರ್ವ ಪೈಲಟ್ ಸ್ಪೈಸ್ 2000 ಬಾಂಬ್ ಸಾಮಾನ್ಯ ವರ್ಗದ ಬಾಂಬ್ ಅಲ್ಲ. ಅದರ ಗುರಿ ತಪ್ಪಲು ಸಾಧ್ಯವೇ ಇಲ್ಲ. ತಾಂತ್ರಿಕ ದೋಷವನ್ನು ಹೊರತು ಪಡಿಸಿದರೆ, ಯಾವುದೇ ರೀತಿಯ ಹವಾಮಾನದಲ್ಲೂ ಗುರಿಗಳ ಮೇಲೆ ಅದು ನಿಖರ ದಾಳಿ ಮಾಡಬಲ್ಲದು ಎಂದು ಹೇಳಿದ್ದಾರೆ.

ಒಂದೇ ಆತಂಕ ಎಂದರೆ?

Also read: ಬೆಂಗಳೂರಿನ ವಂಡರ್ಲಾದಲ್ಲಿ ಅವಘಡ; ಮಕ್ಕಳ ಜೊತೆಯಲ್ಲಿ ಅಮ್ಯೂಸ್‍ಮೆಂಟ್ ಪಾರ್ಕಿಗೆ ಹೋಗುವ ಮುನ್ನ ಈ ವಿಡಿಯೋ ನೋಡಿ;

ನಿಜ ಹೇಳಬೇಕೆಂದರೆ ಆ ಎರಡೂವರೆ ತಾಸು ಕಳೆದುಹೋಗಿದ್ದೇ ತಿಳಿಯಲಿಲ್ಲ. ಯಾಕೆಂದರೆ ನಾವು ಅಷ್ಟೇ ಹೊತ್ತಿನಲ್ಲಿ ಏನೆಲ್ಲ ಮಾಡಿದ್ದೆವು. ನಮಗೆ ಇದ್ದ ಒಂದೇ ಆತಂಕ ಎಂದರೆ ನಮ್ಮ ದಾಳಿಯ ಬಗ್ಗೆ ಪಾಕಿಸ್ತಾನಕ್ಕೆ ತಿಳಿಯಬಾರದು ಎಂಬುದು. ಏಕೆಂದರೆ ಆ ಸಂದರ್ಭದಲ್ಲಿ ಒಂದು ಪಾಕಿಸ್ತಾನಿ ಯುದ್ಧ ವಿಮಾನವೂ ಅದೇ ಪ್ರದೇಶದಲ್ಲಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು! ಸ್ಪೈಸ್ 2000 ಅಸ್ತ್ರ ಎಂದರೆ ಬೆಂಕಿ ಹಚ್ಚಿ ಮರೆತು ಬಿಡುವ ಅಸ್ತ್ರ. ನೀವು ಅದು ಗುರಿ ತಲುಪಿದೆಯೇ ಇಲ್ಲವೇ, ಆಮೇಲೇನಾಯ್ತು ಎಂದು ಪರಿಶೀಲಿಸುವ ಅಗತ್ಯವಿಲ್ಲ. ಅದು ಕರಾರುವಕ್ಕಾಗಿ ಗುರಿ ತಲುಪಿ, ಮಾಡಬೇಕಾದ ಹಾನಿಯನ್ನು ಮಾಡಿಯೇ ಮಾಡುತ್ತದೆ ಎಂದು ವಿಶ್ವಾಸವನ್ನು ಹಂಚಿಕೊಂಡಿದ್ದಾರೆ.