ಕೇವಲ 20 ರೂ.ನಲ್ಲಿ ಇನ್ಮುಂದೆ post officeನಲ್ಲಿ ಕೂಡ ಉಳಿತಾಯ ಖಾತೆ ತೆರೆಯಬಹುದು…

0
1178

ಹೀಗೊಂದು ಸಿಹಿ ಸುದ್ದಿ ಹೊರಬಿದ್ದಿದೆ… ಹೌದು ಇನ್ಮುಂದೆ ಅಂಚೆ ಕಚೇರಿಯಲ್ಲಿ ಕೂಡ ನೀವು ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ. ಬ್ಯಾಂಕ್ ನಲ್ಲಿ ಮಾತ್ರ ಉಳಿತಾಯ ಖಾತೆ ತೆರೆಯಬೇಕು ಎನ್ನುವುದು ನಿಮ್ಮ ಮನಸ್ಸಿನಲ್ಲಿ ಇದ್ದರೆ ಅದನ್ನು ಈಗಲೇ ತೆಗೆದುಹಾಕಿಬಿಡಿ. ಕೇವಲ 20 ರೂಪಾಯಿಯಲ್ಲಿ ನೀವು ಉಳಿತಾಯ ಖಾತೆ ಆರಂಭಿಸಬಹುದು. ಇದಕ್ಕೆ ನೀವು ಒಂದು ಫಾರ್ಮ್ ತುಂಬಬೇಕಷ್ಟೆ. ಬ್ಯಾಂಕ್ ಉಳಿತಾಯ ಖಾತೆಗೆ ಸಿಗುವ ಎಲ್ಲ ಸೌಲಭ್ಯಗಳೂ ಅಂಚೆ ಕಚೇರಿಯಲ್ಲಿ ತೆರೆದ ಖಾತೆಗೆ ಸಿಗಲಿದೆ.

ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ನಿಮ್ಮ ಖಾತೆಯನ್ನು ವರ್ಗಾಯಿಸಿಕೊಳ್ಳಬಹುದಾಗಿದೆ. ಒಂದು ಹೆಸರಲ್ಲಿ ಒಂದು ಅಕೌಂಟ್ ಓಪನ್ ಮಾಡಲು ಮಾತ್ರ ಅವಕಾಶವಿದೆ. ಬ್ಯಾಂಕ್ ನಂತೆ ಇಂತಿಷ್ಟೇ ಬ್ಯಾಲೆನ್ಸ್ ಇರಬೇಕೆನ್ನುವ ನಿಯಮವಿಲ್ಲ. ನಿಮ್ಮ ಖಾತೆಯಲ್ಲಿ 50 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಇದ್ದರೆ ಸಾಕು ಎಟಿಎಂನಿಂದ ಹಣ ಡ್ರಾ ಮಾಡುವ ಜೊತೆಗೆ ಶಾಪಿಂಗ್ ವೇಳೆ ಇದನ್ನು ಬಳಸಬಹುದಾಗಿದೆ.
ಖಾತೆದಾರರಿಗೆ ಚೆಕ್ ಬುಕ್ ನೀಡಲಾಗುವುದಿಲ್ಲ.

ಈ ಖಾತೆದಾರರಿಗೆ ಬ್ಯಾಂಕ್ ನಂತೆ ಶೇಕಡಾ 4ರಷ್ಟು ಬಡ್ಡಿ ಸಿಗಲಿದೆ. ಖಾತೆದಾರಿಗೆ ಡೆಬಿಟ್ ಕಾರ್ಡ್ ಸಿಗಲಿದೆ. 10 ವರ್ಷ ಮೇಲ್ಪಟ್ಟ ಮಕ್ಕಳು ಅಕೌಂಟ್ ಓಪನ್ ಮಾಡಬಹುದಾಗಿದೆ.

ಉಳಿತಾಯ ಖಾತೆ ಬಗ್ಗೆ ನಿಮಗೆಷ್ಟು ಗೊತ್ತು :

ಈ ಖಾತೆಯನ್ನು ಯಾರೂ ಬೇಕಾದರೂ ಸುಲಭವಾಗಿ ತೆರೆಯಬಹುದು. ಬ್ಯಾಂಕ್ ಶುಲ್ಕದೊಂದಿಗೆ ನಿರ್ದಿಷ್ಟ ಪ್ರಮಾಣದ ಹಣವನ್ನು ಡಿಪಾಸಿಟ್ ಮಾಡಿ ಖಾತೆಯನ್ನು ಮುನ್ನಡೆಸಬೇಕಾಗುತ್ತದೆ. ಈ ಖಾತೆ ಪಾಸ್ ಬುಕ್, ನಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್, ಚೆಕ್ ಬುಕ್ ಡೆಬಿಟ್ ಕಾರ್ಡ್ ಸೌಲಭ್ಯ ಒಳಗೊಂಡಿರುತ್ತದೆ.

ಪೋಸ್ಟ್‌ ಆಫೀಸ್‌ನಲ್ಲಿ ಸೇವಿಂಗ್‌ ಅಕೌಂಟ್‌ ತೆರೆಯುವುದರ ಲಾಭಗಳಿವು

  • ಸಮೀಪದ ಫೋಸ್ಟ್‌ ಆಫೀಸ್‌ನಲ್ಲಿ ಅಕೌಂಟ್‌ ತೆರೆಯ ಬೇಕಾದರೆ ಒಂದು ಅರ್ಜಿಯನ್ನು ತುಂಬಬೇಕು.  ಮಿನಿಮಮ್‌ 50 ರೂ. ಬ್ಯಾಲೆನ್ಸ್‌ ಇರಬೇಕು.

 

  • ಇದರ ಮೇಲೆ 4 ಶೇ.ದಷ್ಟು ಬಡ್ಡಿ ದೊರೆಯುತ್ತದೆ.

 

  • ಡೆಬಿಟ್‌ ಕಾರ್ಡ್ ಸೌಲಭ್ಯವೂ ದೊರೆಯುತ್ತದೆ.

 

  • ಚೆಕ್‌ ಸೌಲಭ್ಯಬೇಕೆಂದಾದರೆ 500 ರೂ. ಯ ಖಾತೆ ತೆರೆಯಬೇಕು. ಇದಕ್ಕೆ ಅಕೌಂಟ್‌ನಲ್ಲಿ ಮಿನಿಮಮ್‌ 500 ರೂ. ಇರಬೇಕು.

 

  • ಪೋಸ್ಟ್‌ ಆಫೀಸ್‌ನಲ್ಲಿನ ಅಕೌಂಟ್‌ನ್ನು ಒಂದು ಪೋಸ್ಟ್‌ ಆಫೀಸ್‌ನಿಂದ ಇನ್ನೊಂದು ಪೋಸ್ಟ್‌ ಆಫೀಸ್‌ಗೆ ವರ್ಗಾಯಿಸಬಹುದು.

 

  • ಖಾತೆ ತೆರೆಯುವ ಮೊದಲು ಅಥವಾ ಖಾತೆ ತೆರೆದ ನಂತರವೂ ನೋಮಿನಿ ಸೌಲಭ್ಯ ಕೂಡಾ ಇದೆ.

 

  • ಪೋಸ್ಟ್ ಆಫೀಸ್‌ನಲ್ಲಿ ಅಪ್ರಾಪ್ತರ ಹೆಸರಿನಲ್ಲಿಯೂ ಖಾತೆ ತೆರೆಯಬಹುದು.

 

  • ಹತ್ತು ಸಾವಿರದ ವರೆಗಿನ ದುಡ್ಡಿಗೆ ಯಾವುದೇ ಟ್ಯಾಕ್ಸ್‌ ಇರುವುದಿಲ್ಲ.