ಉಡುಪಿ ಶೈಲಿಯ ಆಲೂಗಡ್ಡೆ ಈರುಳ್ಳಿ ಸಾಂಬಾರ್ ಮಾಡುವ ಸುಲಭವಾದ ವಿಧಾನ..!!

0
2094

ಬೇಕಾಗುವ ಸಾಮಾಗ್ರಿಗಳು:

 • ಆಲೂಗಡ್ಡೆ
 • ಈರುಳ್ಳಿ
 • ತೊಗರಿ ಬೇಳೆ ಒಂದು ಕಪ್
 • ಕಾಯಿ ತುರಿ ಒಂದು ಕಪ್
 • ಕೆಂಪು ಮೆಣಸಿನ ಪುಡಿ
 • ಕೊತ್ತಂಬರಿ ಬೀಜ ಎರಡು ಚಿಕ್ಕ ಚಮಚ
 • ಕರಿಬೇವಿನ ಎಲೆ
 • ಕಡಲೆ ಕಾಳು ಅರ್ಧ ಚಮಚ
 • ಉದ್ದಿನ ಬೇಳೆ ಅರ್ಧ ಚಮಚ
 • ಅಕ್ಕಿ ಹಿಟ್ಟು ಅರ್ಧ ಚಮಚ
 • ಬೆಲ್ಲ ಸ್ವಲ್ಪ
 • ಹುಣಸೆ ಹುಳಿ ಒಂದು ಚಮಚ
 • ಉಪ್ಪು
 • ಎಣ್ಣೆ ಒಗ್ಗರಣೆಗೆ ಅಗತ್ಯವಿದ್ದಷ್ಟು
 • ಸಾಸಿವೆ ಒಂದು ಚಿಕ್ಕ ಸಮಚ
source: hebbarskitchen.com

ಮಾಡುವ ವಿಧಾನ:

1) ಮೊದಲು ಪ್ರೆಶರ್ ಕುಕ್ಕರ್ ನಲ್ಲಿ ತೊಗರಿ ಬೇಳೆ, ಕೊಂಚ ನೀರು ಹಾಕಿ ಸುಮಾರು ಮೂರು ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ. ನಂತರ ತಣಿಸಿ ಮುಚ್ಚಳ ತೆರೆದು ಈರುಳ್ಳಿ (ಸಿಪ್ಪೆ ಸುಲಿದು ದೊಡ್ಡದಾಗಿ ಕತ್ತರಿಸಿಕೊಂಡಿರಿ), ಆಲೂಗಡ್ಡೆ (ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಂಡಿರಿ) ಹಾಕಿ ಮತ್ತೊಂದು ಮೂರು ಸೀಟಿ ಬರುವವರೆಗೆ ಬೇಯಿಸಿ.

2) ಇನ್ನೊಂದು ಚಿಕ್ಕ ಬಾಣಲೆಗೆ ಅಕ್ಕಿಹಿಟ್ಟು, ಧನಿಯ, ಉದ್ದಿನಬೇಳೆ, ಕಡ್ಲೆಕಾಳು ಹಾಕಿ ಕೆಂಪು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಇದನ್ನು ಅಗಲವಾದ ತಟ್ಟೆಯಲ್ಲಿ ಹರಡಿ ತಣ್ಣಗಾಗಲು ಬಿಡಿ. ನಂತರ ಮಿಕ್ಸಿಯ ಜಾರ್ ನಲ್ಲಿ ಹಾಕಿ. ಇದಕ್ಕೆ ಹುಣಸೆ ಹುಳಿ, ಕಾಯಿತುರಿ, ಬೆಲ್ಲ, ಮೆಣಸಿನ ಪುಡಿ ಮತ್ತು ಕೊಂಚ ನೀರು ಹಾಕಿ ನಯವಾಗುವಂತೆ ರುಬ್ಬಿಕೊಳ್ಳಿ.

4) ಬೇಯಿಸಿದ ಬೇಳೆ ಮತ್ತು ತರಕಾರಿಗಳನ್ನು ಇನ್ನೊಂದು ಪಾತ್ರೆಯಲ್ಲಿ ಸುರಿಯಿರಿ. ಈ ಪಾತ್ರೆಗೆ ಇನ್ನೂ ಕೊಂಚ ನೀರು ಸೇರಿಸಿ ಬೇಯಲಿಡಿ. ಇದಕ್ಕೆ ಮಿಕ್ಸಿ ಮಾಡಿದ ಮಸಾಲೆ ಸೇರಿಸಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.

5) ನಂತರ ಒಗ್ಗರಣೆಯ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಕರಿಬೇವಿನ ಎಲೆಗಳನ್ನು ಹಾಕಿ. ರುಚಿ ಹೆಚ್ಚಲು ಕೊಂಚ ಇಂಗನ್ನೂ ಹಾಕಬಹುದು.

7) ಸುಮಾರು ಐದರಿಂದ ಹತ್ತು ನಿಮಿಷ ಬೇಯಲು ಬಿಡಿ, ಈಗ ರುಚಿಕರವಾದ ಆಲೂಗಡ್ಡೆ ಈರುಳ್ಳಿ ಸಾಂಬಾರ್ ಸವಿಯಲು ಸಿದ್ದ.