ರಾಜಧಾನಿ ಬೆಂಗಳೂರಿನಲ್ಲಿ ರೋಡಿನಲ್ಲಿ ಹಳ್ಳವಿದೆಯೋ, ಹಳ್ಳದಲ್ಲಿ ರೋಡ್ ಇದೆಯೋ ಎಂಬಂತೆ ಆಗಿದೆ.. BBMP ಏನು ಮಾಡುತ್ತಿದೆ??

0
457

ಈ ಮೇಲಿನ ಚಿತ್ರವನ್ನು ನೋಡಿ ಏನು ಅನಿಸುತ್ತದೆ ಅಂದ್ರೆ, ಬಿಬಿಎಂಪಿ ಮಾಡದ ಕೆಲಸವನ್ನು ಮಳೆ ಮಾಡಿಬಿಟ್ಟಿತು. ಏನಪ್ಪ ಮಳೆಗೆ ಬಿಬಿಎಂಪಿಗೆ ಎಲ್ಲಿಲ್ಲದ ಸಂಬಂಧ ಅಂದ್ರೆ.. ಅಲ್ಲೇ ಇರೋದು ಟ್ವಿಸ್ಟ್..

ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುತಿಸಿರುವಂತೆ ಸುಮಾರು 9000 ಗುಂಡಿಗಳಿವೆ. ಇನ್ನು ಪಾಲಿಕೆ ಅಧಿಕಾರಿಗಳ ಹೇಳಿಕೆಯಂತೆ ಭಾರೀ ಮಳೆಯಿಂದ ಇವುಗಳ ಸ್ಥಿತಿ ಮತ್ತು ಹದ ಗೆಟ್ಟಿದೆ. ಹಿರಿಯ ಅಧಿಕಾರಿ ಹೇಳುವಂತೆ ಸುಮಾರು 9000 ಗುಂಡಿಗಳನ್ನು ಪತ್ತೆ ಹಚ್ಚಲಾಗಿದ್ದು, 6000 ಗುಂಡಿಗಳ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಆಗಸ್ಟ್ 23ರ ಪರಿಶೀಲನೆ ಅನ್ವಯ ಪಾಲಿಕೆ 5.67 ಹುಂಡಿಗಳನ್ನು ಪತ್ತೆ ಮಾಡಿ ತೆಪೆ ಹಚ್ಚುವ ಕೆಲಸ ಮಾಡುತ್ತಿದೆ.

ಇನ್ನೇನು ಕೆಲಸ ಆರಂಭವಾಗುತ್ತದೆ. ನಾವು ಗುಂಡಿಗಳನ್ನು ತುಂಬಲು ಹೊಸ ಮಷೀನ್ಗಳ ಮೊರೆ ಹೋಗ್ತಿದ್ದೀವಿ. ಅಲ್ಲದೆ ಗುಂಡಿ ಪಕ್ಕದೆ ರಸ್ತೆಯನ್ನು ಶುಚಿ ಮಾಡಿ ಮುಂದೆ ಹೀಗೆ ಹಾಳಾಗದಂತೆ ಮುನ್ನಚ್ಚೆರಿಕೆ ವಹಿಸಲಾಗುವುದು. ನಗರದ ರಸ್ತೆಯಲ್ಲಿ ಗುಂಡಿಗಳನ್ನು ಪರಿಶೀಲಿಸಿದ್ರೆ, ಸದ್ಯಕ್ಕೆ ಗುಂಡಿಯನ್ನು ತುಂಬುವುದೇ ನಮ್ಮ ಮೊದಲ ಉದ್ದೇಶ. ಹಳೆಯ ಮಿಲ್ಲಿಂಗ್ ವಿಧಾನದಂತೆ ಗುಂಡಿ ಮುಚ್ಚವ ಕಾರ್ಯ ಮಾಡಿದ್ದಲ್ಲಿ ಹೆಚ್ಚು ಹಣ ಪೋಲಾಗುತ್ತದೆ. ಇದನ್ನು ತಡೆಯಲೇ ಈ ನಿರ್ಧಾರ ಕೈ ಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ದೊಡ್ಡ ವಿಷಯ. ಕಳೆದ ಬಾರಿಗಿಂತ ಈ ಬಾರಿಗೆ ಹೋಲಿಸಿದ್ರೆ ಮಳೆ ಪ್ರಮಾಣವೂ ಹೆಚ್ಚಿದೆ. ಅಲ್ಲದೆ ಗುಂಡಿಗಳು ಸಹ ಹೆಚ್ಚಾಗಿವೆ. ಒಟ್ಟು ಸುಮಾರು 954 ಕಿ.ಮಿ ರಸ್ತೆಯಲ್ಲಿ 9000 ಗುಂಡಿಗಳು ಬಿದ್ದಿವೆ. ಒಂದು ಲೆಕ್ಕಾಚಾರದ ಪ್ರಕಾರ ಒಂದು ರೋಡಿಗೆ 9 ಹೋಲ್ಗಳನ್ನು ಕಾಣಬಹುದು.

ಇನ್ನು ಈ ಬಗ್ಗೆ ಮಾತನಾಡಿದ ಕಾರ್ಮಿಕ, ವಾಹನ ದಟ್ಟಣೆ ಕಡಿಮೆ ಇದ್ದಾಗಲೇ ನಾವು ಕಾರ್ಯವನ್ನು ಮಾಡಬೇಕು. ರಾತ್ರಿ 10 ರಿಂದ ಬೆಳಗಿನ ಜಾವ 4ರ ವರೆಗೆ ಕೆಲಸದ ಸಮಯ ಆದ್ರೆ, ಈ ವೇಳೆಯಲ್ಲೇ ಹೆಚ್ಚು ಮಳೆ ಬಂದಿದ್ದರಿಂದ ತೊಂದರೆ ಆಗಿದೆ ಎಂದು ತಿಳಿಸಿದ್ದಾರೆ.

ಮಾಹಿತಿ ಕೃಪೆ: the news minute