ವಿಜಯ ದಶಮಿಯ ಆಚರಣೆಯಲ್ಲಿ ದೇವಿಗೆ ಪ್ರಿಯವಾದ `ಸಬ್ಬಕ್ಕಿ ಖೀರು’ ಮಾಡುವ ವಿಧಾನ..

0
1237

ಶರದ್ ಋತುವಿನಲ್ಲಿ ಆಚರಿಸುವ ನವರಾತ್ರಿಯಲ್ಲಿ ವಿಶೇಷವಾಗಿ ಶಕ್ತಿ ದೇವತೆಯನ್ನು ಆರಾಧಿಸುತ್ತಾರೆ. ಆಶ್ವೀಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಒಂಬತ್ತು ದಿನಗಳಲ್ಲಿ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸುತ್ತಾರೆ. ನವರಾತ್ರಿಯ ಮೊದಲ ಮೂರು ದಿನಗಳು ಋಗ್ವೇದ ಸ್ವರೂಪಳಾದ ಮಹಾಕಾಳಿಯನ್ನು, ದ್ವಿತೀಯ ಮೂರು ದಿನಗಳನ್ನು ಸಾಮವೇದ ಸ್ವರೂಪಳಾದ ಮಹಾ ಸರಸ್ವತಿಯನ್ನು,ತೃತೀಯ ಮೂರು ದಿನಗಳನ್ನು ಯಜುರ್ವೇದ ಸ್ವರೂಪಳಾದ ಮಹಾಲಕ್ಷ್ಮಿಯನ್ನು ಅರ್ಚಿಸುತ್ತಾರೆ.

Also read: ರುಚಿ ರುಚಿಯಾದ ಪನ್ನೀರ್- ಚಿಕನ್ ಗ್ರೇವಿ ಮಾಡುವ ವಿಧಾನ..!!

ಏಳನೆಯ ದಿನ ಶಾರದಾ ಪೂಜೆಯನ್ನು ಹಾಗು ಹತ್ತನೆಯ ದಿನ ವಿಜಯ ದಶಮಿಯನ್ನು ಆಚರಣೆಯಲ್ಲಿ .ದೇವಿಗೆ ಪ್ರಿಯವಾದ ಹಾಲು ಪಾಯಸ,ಚಿತ್ರಾನ್ನ ಹಾಗು ಮೊಸರನ್ನವನ್ನು ನೈವೇದ್ಯ ಮಾಡುತ್ತಾರೆ. ಇದರ ಜೊತೆಗೆ ಸಬ್ಬಕ್ಕಿ ಖೀರು, ನೈವೇದ್ಯಕ್ಕೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದು, ಇದರ ರುಚಿ ಮಕ್ಕಳು ಇಷ್ಟಪಡುತ್ತಾರೆ. ಹಾಗಾದ್ರೆ ಸಬ್ಬಕ್ಕಿ ಖೀರು ತಯಾರಿಸುವುದು ಹೇಗೆ ಅಂದ್ರೆ ಇಲ್ಲದೆ ನೋಡಿ.

Also read: ಬಿಸಿ ಹಾಲು-ಬೆಲ್ಲ ಹಾಕಿ ಕುಡಿದರೆ ಇಷ್ಟೊಂದೆಲ್ಲ ಪ್ರಯೋಜನ ಇದೆ ಅಂತ ಗೊತ್ತಾದ್ರೆ, ಇವಾಗ್ಲಿಂದಾನೆ ಕುಡಿಯೋಕ್ಕೆ ಶುರು ಮಾಡ್ತೀರ!!

ಬೇಕಾಗುವ ಪದಾರ್ಥಗಳು:

 • ಒಂದು ಕಪ್ ಸಬ್ಬಕ್ಕಿ
 • ಎರಡು ಕಪ್ ಹಾಲು
 • 1/2 ಕಪ್ ಬೆಲ್ಲ ಅಥವಾ ಸಕ್ಕರೆ
 • 1 ಚಮಚ ಏಲಕ್ಕಿ ಪೌಡರ್
 • 10-15 ಒಣದ್ರಾಕ್ಷಿ
 • 6. 10 ಬಾದಾಮಿ 10
 • 10 ಗೋಡಂಬಿ
 • ಒಂದು ಚಮಚ ವನಸ್ಪತಿ ತುಪ್ಪ
 • ಒಂದು ಚಮಚ ಕೇಸರಿ

  ಮಾಡುವ ವಿಧಾನ:

Also read: ಹೋಳಿಗೆ ಸಾರಿಲ್ಲದೆ ಹಬ್ಬದ ಅಡುಗೆ ಪರಿಪೂರ್ಣವಾಗುವುದಿಲ್ಲ.. ಮತ್ತೆಯಾಕೆ ತಡ ನೀವು ಮಾಡಿ ಸವಿದು ನೋಡಿ..!!

 • ಸಣ್ಣ ಗಾತ್ರದ ಸಬ್ಬಕ್ಕಿ (1 ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿದ್ದು). ಹಾಲನ್ನು ಚಿನ್ನಾಗಿ ಕುದಿಸಿ.
 • ಬೆಲ್ಲ ಅಥವಾ ಸಕ್ಕರೆಯನ್ನು ಸ್ವಲ್ಪ ನೀರು ಹಾಕಿ ಕುದಿಸಿ ಸಕ್ಕರೆ ಅಥವಾ ಬೆಲ್ಲದ ಪಾನಕ ತಯಾರಿಸಿ.
 • ಬೆಲ್ಲದ ಪಾನಕವನ್ನು ಹಾಲಿನೊಂದಿಗೆ ಬೆರೆಸಿ, 2 ನಿಮಿಷ ಕುದಿಸಿ. ನಂತರ ಈ ಮಿಶ್ರಣಕ್ಕೆ ಸಬ್ಬಕ್ಕಿ ಹಾಕಿ 10-12 ನಿಮಿಷ ಬೇಯಿಸಿ.
 • ವನಸ್ಪತಿಯನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ ಪುಡಿ, ಒಣದ್ರಾಕ್ಷಿ ಕಾಕಿ ಬಿಸಿ ಮಾಡಿ ಅದನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ.
 • ಇದಕ್ಕೆ ಈಗ ಕೇಸರಿಯನ್ನು ಬೆರೆಸಿದರೆ ಬಣ್ಣದ ಜೊತೆಗೆ ಸುವಾಸನೆಯು ದೊರೆಯುವುದು.
 • ಈಗ ಸಿದ್ಧವಾದ ಸಬ್ಬಕ್ಕಿ ಪಾಯಸವನ್ನು 2 ಗಂಟೆಗಳ ಕಾಲ ಆರಲು ಬಿಟ್ಟು ನಂತರ ಬಡಿಸಿ.