ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ; ಸ್ವಂತ ಮನೆ ನಿರ್ಮಿಸುವವರಿಗೆ ಬಿಗ್ ಆಪರ್..

0
3580

ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಡವರಿಗೊಂದು ಸೂರು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಅದರಂತೆ ಪ್ರತಿಯೊಬ್ಬರಿಗೂ ತಾವು ಸ್ವಂತ ನೆಲೆಯನ್ನು ನಿರ್ಮಿಸುವುದು ಗುರಿಯಾಗಿರುತ್ತದೆ. ಆದರೆ ಹಣದ ಅಭಾವ ವಿರುವುದರಿಂದ ತಮ್ಮ ಕನಸ್ಸನು ಹಿಂದೆ ಹಾಕುತ್ತ ಸಾಗುತ್ತಾರೆ. ಇದೆ ಉದ್ದೇಶವನ್ನು ಇಟ್ಟುಕೊಂಡು ಪ್ರತಿಯೊಂದು ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ಸಹಾಯ ನೀಡಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ತರಲಾಗಿದೆ.

Also read: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆ; ಚಿತ್ರದ ಮೋದಿ ನೋಡಿ ದೇಶವೆ confused..

ಈ ಯೋಜನೆಯಂತೆ ಮುಂದೆಬರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿರಿಸಿ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅದರಂತೆ ಈ ಬಾರಿಯ ಬಜೆಟ್​ನಲ್ಲಿ ಪ್ರಧಾನಿ ಮಂತ್ರಿ ಆವಾಸ್​ ಯೋಜನೆಯ ಬಜೆಟ್​ ಅನ್ನು ಶೇ.50 ರಷ್ಟು ಹೆಚ್ಚಿಸಲಾಗುತ್ತದೆ ಎಂದು ಮಾಹಿತಿಗಳು ಹೊರಬಿದ್ದಿವೆ. ಮಧ್ಯಮ ವರ್ಗಕ್ಕೆ ಈ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ವಸತಿ ಒದಗಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಈ ಯೋಜನೆ ಕುರಿತು ಹಲವು ದೂರುಗಳು ಕೇಳಿ ಬರುತ್ತಿದವು ಏಕೆಂದರೆ ಈ ಹಿಂದೆಯೇ ಪರಿಚಯಿಸಿದ್ದ ಈ ಯೋಜನೆಯ ಲಾಭವನ್ನು ಎಲ್ಲ ವರ್ಗಗಳಿಗೆ ನೀಡಲಾಗಿರಲಿಲ್ಲ. ಆದರೆ ಈ ಬಾರಿ ಬಜೆಟ್​ನಲ್ಲಿ ಯೋಜನೆಯ ಮೊತ್ತವನ್ನು ಹೆಚ್ಚಿಸುವ ಮೂಲಕ ಸ್ವಂತ ಮನೆ ಹೊಂದಬೇಕೆನ್ನುವ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಅಲ್ಲದೆ ಯೋಜನೆ ಅಡಿಯಲ್ಲಿ ನೀಡುವ ಸಾಲದ ಅವಧಿಯನ್ನು ಕೂಡ ವಿಸ್ತರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Also read: ಪ್ರಯಾಣ ಮಾಡುವಾಗ ವಾಂತಿ ಹಾಗೂ ತಲೆಸುತ್ತಿನಿಂದ ಮುಕ್ತಿ ಸಿಗಬೇಕಾದರೆ ಈ ಮನೆಮದ್ದುಗಳನ್ನು ಪಾಲಿಸಿ…!!

ಹೊಸ ಬಜೆಟ್​ನಲ್ಲಿ ಯಾವ ರೀತಿಯ ಬದಲಾವಣೆ?

  • AHF ಫಂಡ್​ ಮೊತ್ತವನ್ನು 10,000 ಕೋಟಿಗಳಿಂದ 15,000 ಕೋಟಿ ರೂ.ಗೆ ಏರಿಸುವ ಪ್ರಸ್ತಾಪವಿದೆ.
  • ಹಣ​ ಹೆಚ್ಚಳದಿಂದ ಬಡ್ಡಿದರದಲ್ಲಿ ಇಳಿಕೆಯ ಸಾಧ್ಯತೆ ಇದೆ.
  • ಹೌಸಿಂಗ್ ಫಾರ್ಮ್ ಎಲ್ಲ ಯೋಜನೆ ಅಡಿಯಲ್ಲಿ ಎಲ್ಲರಿಗೂ ಮನೆ ಒದಗಿಸಲು ಒತ್ತು
  • ಮಧ್ಯಮ ವರ್ಗದವರಿಗೂ ಈ ಯೋಜನೆಯನ್ನು ಅನ್ವಯಿಸುತ್ತದೆ.
  • ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಬಡ್ಡಿದರದಲ್ಲಿ ರಿಯಾಯಿತಿ ಇರಲಿದೆ.
  • ಈ ಯೋಜನೆ ಅಡಿಯಲ್ಲಿ ಮನೆ ಖರೀದಿಸಿದ ಜನರ ಖಾತೆಗೆ ಸರ್ಕಾರದಿಂದ ಸಹಾಯಧನ ಸಿಗಲಿದೆ.

Also read: ಕೇಂದ್ರ ಸರ್ಕಾರದಿಂದ ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ; ಇನ್ಮುಂದೆ ಹೆಚ್ಚಿನ ಪಠ್ಯಪುಸ್ತಕ ಮತ್ತು ಹೋಮ್ ವರ್ಕ್ ಹೊರೆಯಿಲ್ಲ..

ರೀತಿಯ ಎಲ್ಲ ಮನೆಗಳಿಗೆ ಯೋಜನೆ ಅನ್ವಯ;

1. ಹೊಸ ಮನೆಯನ್ನು ನಿರ್ಮಿಸುವವರಿಗೂ ಕೂಡ ಈ ಯೋಜನೆಯ ಲಾಭವಿದೆ.
2. ನೀವು ಡೆವಲಪರ್ ಅಥವಾ ಬಿಲ್ಡರ್​ನಿಂದ ಮನೆಯೊಂದನ್ನು ಅಥವಾ ಹಳೆಯ ಮನೆಯನ್ನು ಖರೀದಿಸುತ್ತಿದ್ದರೆ, ಈ ಯೋಜನೆಯ ಲಾಭ ಪಡೆಯಬಹುದು.
3. ಈಗಾಗಲೇ ಶಾಶ್ವತ ಮನೆ ಇರುವವರು ಅದನ್ನು ದುರಸ್ತಿ ಅಂಥವಾ ಮರುನಿರ್ಮಾಣ, ಮನೆಗೆ ಕೊಠಡಿಗಳನ್ನು ಸೇರಿಸಲು ಕೂಡ ಈ ಸಾಲವನ್ನು ತೆಗೆದುಕೊಳ್ಳಬಹುದು.
4. ಇರುವ ಹಳೆಯ ಮನೆಯೊಳಗೆ ಕೊಠಡಿಗಳನ್ನು, ಅಡುಗೆ ಕೋಣೆಗಳನ್ನು ಮೇಲ್ದರ್ಜೆಗೆ ಏರಿಸಲು ಈ ಸಾಲವನ್ನು ನೀಡಲಾಗುವುದಿಲ್ಲ.

ಯೋಜನೆಯಲ್ಲಿ ಸಬ್ಸಿಡಿ ಎಷ್ಟಿದೆ?

1- 6ರಿಂದ 12 ಲಕ್ಷ ರೂ. ಆದಾಯ ಹೊಂದಿರುವ ಮಧ್ಯಮ ಗುಂಪಿನ(MIG)ಫಲಾನುಭವಿಗಳಿಗೆ 9 ಲಕ್ಷ ರೂ. ಮೇಲೆ 4% ಸಬ್ಸಿಡಿಯನ್ನು ನೀಡಲಾಗುತ್ತದೆ. 12 ರಿಂದ 18 ಲಕ್ಷದ ಆದಾಯ ಹೊಂದಿರುವ ಕುಟುಂಬಗಳಿಗೆ 12 ಲಕ್ಷದ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ರಿಯಾಯಿತಿ ಇರಲಿದೆ. ಇದರ ಹೊರತಾಗಿ ಹೆಚ್ಚಿನ ಸಾಲ ಪಡೆದರೆ ಅದರ ಹೆಚ್ಚುವರಿ ಬಡ್ಡಿಯನ್ನು ಗ್ರಾಹಕರೇ ಪಾವತಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ