ಜಾತಿಯ ಹಂಗಿಲ್ಲದೆ ಹಾಗೂ ಹಣವಿಲ್ಲದೇ ರಾಜಕೀಯ ಮಾಡಲು ಹೊರಟಿದ್ದಾರೆ ಉಪೇಂದ್ರ, ಗೆಲ್ಲುತ್ತಾರ?

0
690

ಇತ್ತೀಚಿನ ದಿನಗಳಲ್ಲಿ ಒಂದು ಪಕ್ಷ ಕಟ್ಟಬೇಕು ಅಂದರೆ ಕೋಟಿಗಟ್ಟಲೆ ಹಣ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ನಿಲ್ಲಿಸುವಾಗ ಅವರಿದಂದ ಹಣ ಪಡೆದರೆ, ಆತ ಗೆದ್ದ ಮೇಲೆ ಸುಮ್ಮನಿರುತ್ತಾನಾ? ತಾನು ಹಾಕಿದ ಹಣವನ್ನು ಲಾಭದ ಸಮೇತ ವಾಪಸ್ ಪಡೆಯಲು ಇಚ್ಛಿಸುತ್ತಾನೆ. ದುಡ್ಡು ಹಾಕಿ, ದುಡ್ಡು ಮಾಡೋದಕ್ಕೆ ಇದು ಬಿಸಿನೆಸ್‌ ಅಲ್ಲ, ಈ ರೀತಿ ನಡೆಯಬಾರದು ಎಂಬುದೇ ನನ್ನ ಈ ಒಂದು ಪರಿಕಲ್ಪನೆ. ದುಡ್ಡು ಯಾಕೆ ಬೇಕು? ಜಾತಿ ಯಾರಿಗೆ ಬೇಕು? ಧರ್ಮ ಯಾರಿಗೆ ಬೇಕು? ಜನರಿಗೆ ಮುಖ್ಯವಾಗಿ ಬೇಕಿರುವುದು ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಗಳು ಬೇಕು ಎಂದು ಪ್ರಜಕೀಯ ಪಕ್ಷದ ಅಧ್ಯಕ್ಷರಾದ ಉಪೇಂದ್ರ ಹೇಳಿದ್ದಾರೆ.

ಕ್ಯಾಷ್‌ ಮತ್ತು ಕ್ಯಾಸ್ಟ್‌ ಲೆಸ್‌ ರಾಜಕಾರಣ ಪ್ರಜಾಕೀಯ ಪಕ್ಷದ ಗುರಿಯಾಗಿದ್ದು, ಸಂವಿಧಾನದಡಿ ಆಯ್ಕೆಯಾಗುವ ಜನಪ್ರತಿನಿಧಿಗಳು, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಬೇಕು. ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು, ಜನರಿಗೆ ಎಂದು ಮೋಸಮಾಡಬಾರದು ಎಂದು ಉಪೇಂದ್ರ ಹೇಳಿದ್ದಾರೆ.

ಸ್ಪರ್ಧಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಮೊದಲೇ ಹೇಳಿದಂತೆ ಕ್ಷೇತ್ರದ ಸಮಸ್ಯೆ, ಅಲ್ಲಿನ ಜನರ ಅಭಿಪ್ರಾಯ, ಕ್ಷೇತ್ರದಲ್ಲಿ ಏನು ಅಭಿವೃದ್ಧಿಯಾಗಬೇಕು, ಅದಕ್ಕೆ ಏನು ಮಾಡಬಹುದೆಂದು ಅರಿತು ಅದನ್ನು ನಮಗೆ ವಾಟ್ಸಾಪ್‌, ಇಮೇಲ್‌, ಟ್ವಿಟರ್‌ ಮೂಲಕ ಕಳುಹಿಸಬೇಕು. ನಾವು ಯಾರಿಗೂ ನೇರವಾಗಿ ಬಾಗಿಲಿನಿಂದ ಟಿಕೆಟ್‌ ಕೊಡಲ್ಲ, ಜನರ ಸಮಸ್ಯೆ ಗೊತ್ತಿರುವವರಿಗೆ ಅದನ್ನು ಬಗೆಹರಿಸುವ ತಾಕತ್ತು ಅವರಲ್ಲಿ ಕಂಡರೆ ಮಾತ್ರ ಅವರಿಗೆ ನೀರ ಸಂದರ್ಶನದ ಮೂಲಕ ಪಕ್ಷದ ಟಿಕೆಟ್ ಕೊಡುತ್ತೇವೆ ಎಂದರು.

ನಮ್ಮ ಪಕ್ಷಕ್ಕೆ ಜಾತಿ, ಧರ್ಮ, ಹಣ, ಸ್ಟಾರ್ ಪ್ರಚಾರ, ಇದ್ಯಾವುದರ ಅವಶ್ಯಕತೆಯಿಲ್ಲ, ನಾವು ನಾಯಕರಲ್ಲ, ಜನರಿಗಾಗಿ ಕಷ್ಟ ಪಟ್ಟು ಪಾರದರ್ಶಕವಾಗಿ, ಕೆಲಸಮಾಡುತ್ತೇವೆ ಜನರೇ ನಮ್ಮ ನಾಯಕರು ನಮ್ಮ ಪಕ್ಷದ ಉದ್ದೇಶವನ್ನು ಮೆಚ್ಚಿ ಅನೇಕ ಹಿರಿಯರು, ಸಮಾನ ಮನಸ್ಕರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಇದಲ್ಲದೆ ಮೈಸೂರಿನ ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸಹ ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಇಷ್ಟು ಸಾಕು ನಮ್ಮ ಉದ್ದೇಶ ಚೆನ್ನಾಗಿದೆ ಎಂದು ಹೇಳುವುದಕ್ಕೆ ಎಂದು ಉಪೇಂದ್ರ ಹೇಳಿದರು.