ಮೋದಿಯವರ ವಿರುದ್ಧ ನಾನು ಮಾತಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ ಎಂದು ಉಲ್ಟಾ ಹೊಡೆದ ಪ್ರಕಾಶ ರೈ ..!!

0
590

ಪ್ರಧಾನಿ ಮೋದಿರನ್ನು ಪ್ರಶ್ನೆ ಮಾಡಿದ್ದೇ ತಪ್ಪ: ಪ್ರಕಾಶ್​ ರೈ

‘ನಾನು ಪ್ರಶಸ್ತಿ ಹಿಂದಿರುಗಿಸುತ್ತೇನೆ ಎಂದು ಹೇಳಿಲ್ಲ, ತಪ್ಪಾಗಿ ಅರ್ಥೈಸಲಾಗಿದೆ. ನನ್ನಲ್ಲಿನ ಕಲೆಯನ್ನು ಮೆಚ್ಚಿ ಕೇಂದ್ರ ಸರ್ಕಾರ ನೀಡಿದ ಗೌರವ. ನಾನು ಹಿಂದಿರುಗಿಸುವ ಪ್ರಶ್ನೇ ಇಲ್ಲವೇ ಎಲ್ಲ’ ಎಂದು ಬಹುಭಾಷ ನಟ ಪ್ರಕಾಶ ರೈ ಹೇಳಿದ್ದಾರೆ.

ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಪ್ರಕಾಶ್‌ ರೈ ತಮ್ಮ ರಾಷ್ಟ್ರಪ್ರಶಸ್ತಿಗಳನ್ನು ಹಿಂದಿರುಗಿಸಲಿದ್ದಾರೆ ಎನ್ನುವ ಸುದ್ದಿಗೆ ವೀಡಿಯೋ ಟ್ವೀಟ್‌ ಮೂಲಕ ಉತ್ತರಿಸಿ ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ಇನ್ನು ನನಗೆ ಹಾಗೂ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ನಾನು ಪಕ್ಷದ ಪರ ಮಾತನಾಡಲಾರೆ. ನಾನು ಪ್ರಧಾನಿ ಆದಾವರು ಮೌನದ ವಿರುದ್ಧ ಧ್ವನಿ ಎತ್ತಿದ್ದೇನೆ. ದೇಶದ ಪ್ರಜೆಯಾಗಿ, ಪ್ರಧಾನಿ ಅವರು ಮೌನ ತಾಳಿರುವುದರ ಬಗ್ಗೆ ನನಗೆ ತುಂಬಾ ಬೇಸರ ವಿರುದ್ಧ, ಇದನ್ನೇ ಪ್ರಶ್ನಿಸಿದ್ದೇನೆ. ಭಾರತ ವಾಸಿ, ಇಲ್ಲಿನ ಪ್ರಜೆಯಾಗಿ ಅವರನ್ನು ಕೇಳುವ ಹಕ್ಕು ನನಗಿದೆ. ಇದನ್ನಷ್ಟೇ ನಾನು ಹೇಳಿದ್ದು, ಆದ್ರೆ ಪ್ರಶಸ್ತಿ ಹಿಂದಿರುಗಿಸುತ್ತೇನೆ ಎಂದು ಹೇಳಿಲ್ಲ ಪ್ರಕಾಶ್​ ರೈ ತಿಳಿಸಿದ್ದಾರೆ.

ಇನ್ನು ಟ್ವೀಟರ್​​ನಲ್ಲಿ ಗೌರಿ ಲಂಕೇಶ್​ ಸಾವನ್ನು ಸಂಭ್ರಮಿಸಿದ ಮನಸ್ಸುಗಳ ವಿರುದ್ಧ ಮೋದಿ ಮಾತನಾಡುತ್ತಿಲ್ಲ ಎಂಬವಾ ಪ್ರಕಾಶ್​ ರಾಜ್​ ಅವರದ್ದಾಗಿತ್ತು.
ಇನ್ನು ಸೋಮವಾರ ನಡೆದ ಒಂದು ಕಾರ್ಯಕ್ರಮದಲ್ಲಿ ಪ್ರಕಾಶ್​ ರೈ, ಮಾತನಾಡುತ್ತಾ ಉತ್ತರ ಪ್ರದೇಶದ ಸಿ.ಎಂ ಓರ್ವ ಶ್ರೇಷ್ಠ ನಟ. ಅವರಿಗೂ ಪ್ರಶಸ್ತಿಗಳನ್ನು ನೀಡಬೇಕು ಎಂದಿದ್ದರು.

ಮೋದಿ ನನಗಿಂತ ದೊಡ್ಡ ನಟ ಎಂದು ಮೋದಿ ವಿರುದ್ದ ಮಾತನಾಡಿದ ನಟ ಪ್ರಕಾಶ್‌ ರಾಜ್‌ ಹೇಳಿಕೆಗೆ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿದ್ದಾರೆ. ನೀವು ಖಳನಾಯಕನಾಗಿ ಉತ್ತಮವಾಗಿ ನಟನೆ ಮಾಡಿದ್ದೀರಿ. ನಿಜ ಜೀವನದಲ್ಲೂ ಖಳನಾಯಕನಂತೆ ನಟನೆ ಮಾಡಬೇಡಿ ಎಂದಿದ್ದು, ಫೇಸ್‌ಬುಕ್‌ನಲ್ಲಿ ಪ್ರತಾಪ್‌ ಸಿಂಹ ಅವರಿಗೆ ಟ್ರೋಲ್‌ ಮಾಡಿದ್ದಾರೆ.