ಇವಿಎಂ ದೋಷದ ಬಗ್ಗೆ ಮಾತನಾಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಆಘಾತ ನೀಡಿದ ಪ್ರಣಬ್ ಮುಖರ್ಜಿ; ತುರ್ತುಪರಿಸ್ಥಿತಿಯ ದುಷ್ಪರಿಣಾದ ಬಗ್ಗೆ ಏನು ಹೇಳಿದ್ದಾರೆ ನೋಡಿ..

0
224

ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಪಕ್ಕಾ ಎಂದು ತಿಳಿದ ಕಾಂಗ್ರೆಸ್ ದಿನಕ್ಕೊಂದು ತಕರಾರು ಮಾಡುತ್ತಿದ್ದು, ಮೋದಿಯವರ ಪರವಾಗಿ ಆಯೋಗ ಚುನಾವಣೆಯಲ್ಲಿ ಕೆಲಸ ಮಾಡಿದೆ ಎನ್ನುವ ಆರೋಪವನ್ನು ಕಾಂಗ್ರೆಸ್ ನಾಯಕರು ಹೇರುತ್ತಾ ಬಂದಿದ್ದಾರೆ. ಅದನ್ನು ಅಲ್ಲೆಗಳೆದ ಪ್ರಣಬ್ ಮುಖರ್ಜಿ ಆಯೋಗವನ್ನು ಹೊಗಳಿ ಕಾಂಗ್ರೆಸ್-ಗೆ ಆಘಾತವಾಗುವ ವಿಷಯದ ಬಗ್ಗೆ ಹೇಳಿದ್ದಾರೆ.

Also read: ಎನ್‍ಡಿಎ ಮೈತ್ರಿ ಕೂಟದಲ್ಲಿ ಸಂತೋಷದ ಅಲೆ; ಎರಡು ದಿನದ ಮೊದಲೇ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ 2 ಸಾವಿರ ಕೆಜಿ ಸ್ವೀಟ್..

ಹೌದು ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿಹಾಕಿ ಆಯೋಗದ ಕಾರ್ಯವೈಖರಿಯನ್ನು ಹೊಗಳಿದ ಪ್ರಣಬ್ ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ನೀಡಿದ್ದು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇದೀಗ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಹೌದು ಎನ್ ಡಿಟಿವಿಯ ಸೋನಿಯಾ ಸಿಂಗ್ ಅವರು ಬರೆದ ‘Defining India: Through Their Eyes’ ಎಂಬ ಪುಸ್ತಕದಲ್ಲಿ ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಅವರ ಸಂದರ್ಶನ ಪ್ರಕಟವಾಗಿದ್ದು, ಈ ಸಂದರ್ಶನದಲ್ಲಿ ಅವರು, “1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರದೇ ಇರಬಹುದಿತ್ತು” ಎಂದಿದ್ದರು. ಅವರ ಈ ಹೇಳಿಕೆಯನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದ್ದು, ಕಾಂಗ್ರೆಸ್ ನಾಯಕರಿಗೆ ಮುಜುಗರವನ್ನುಂಟು ಮಾಡಿದೆ.
ಸೋನಿಯಾ ಸಿಂಗ್ ಅವರು ಬರೆದಿದ್ದ “ಡಿಫೈನಿಂಗ್ ಇಂಡಿಯಾ ಥ್ರೂ ದೇರ್ ಐಸ್” ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಪಕ್ಷಗಳ ವಿರೋಧದ ನಡುವೆಯು ಚುನಾವಣಾ ಆಯೋಗದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನಮ್ಮ ಸಂಸ್ಥೆಗಳು ಉತ್ತಮವಾಗಿದೆ.

Also read: ಮಂಡ್ಯದಲ್ಲಿ ಜೋರಾದ ಪಲಿತಾಂಶದ ಕಾವು; ಸಮೀಕ್ಷೆಯ ನಂತರ ಬೆಟ್ಟಿಂಗ್-ನಲ್ಲಿ ಬದಲಾವಣೆ? ನಿಖಿಲ್ ಗೆಲುವಿಗೆ ಮೇಕೆ ಹರಕೆ ಬಿಟ್ಟ ಅಭಿಮಾನಿಗಳು..

ಈ ಸಂಸ್ಥೆಗಳು ಹಲವಾರು ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ. ನನ್ನ ಪ್ರಕಾರ ಕಳಪೆ ಕೆಲಸಗಾರ ಮಾತ್ರ ತನ್ನ ಸಲಕರಣೆಗಳನ್ನು ದೂಷಿಸುತ್ತಾನೆ. ಉತ್ತಮ ಕೆಲಸಗಾರ ಈ ಸಲಕರಣೆಗಳನ್ನು ಹೇಗೆ ಬಳಕೆ ಮಾಡುವುದು ಎಂದು ಯೋಚನೆ ಮಾಡುತ್ತಾನೆ. ಕಾಂಗ್ರೆಸ್ ಅವರ ಗೋಳು ಹೀಗೆ ಆಗಿದೆ ಎಂದು ಅಭಿಪ್ರಾಯ ತಿಳಿಸಿದ ಅವರು. ಮೊದಲ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಅವರಿಂದ ಹಿಡಿದು ಇಂದಿನ ಆಯುಕ್ತರವರೆಗೆ ಆಯೋಗ ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇವತ್ತು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದರೆ ಅದಕ್ಕೆ ಈ ಸಂಸ್ಥೆಗಳೇ ಕಾರಣ. ಆ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಕೂಡ ಉತ್ತಮವಾಗಿ ಕೆಲಸ ಮಾಡಿದೆ. ಈ ಕೆಲಸವನ್ನು ಟೀಕಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ತುರ್ತುಪರಿಸ್ಥಿತಿಯಿಂದ ಆದ ಲಾಭ -ನಷ್ಟವೇನು?

Also read: ಯುಪಿಎ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ಸ್ ನಡೆದಿದ್ದವು ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್-ಗೆ ಭಾರತೀಯ ಸೇನೆಯಿಂದ ತಿರುಗೇಟು..

ತುರ್ತು ಪರಿಸ್ಥಿತಿಯಿಂದ ಒಳ್ಳೆಯ ಪರಿಣಾಮಕ್ಕಿಂತ ದುಷ್ಪರಿಣಾಮವಾಗಿದ್ದೇ ಹೆಚ್ಚು. ಸ್ವಾತಂತ್ರ್ಯವನ್ನುಕಸಿಯಲಾಯ್ತು. ಒಂದು ಹಂತದಲ್ಲಿ ಜನರ ಸ್ವಾತಂತ್ರ್ಯವನ್ನೇ ಕಸಿಯಲಾಯ್ತು. ತುರ್ತುಪರಿಸ್ಥಿಯ ದುಷ್ಪರಿಣಾಮಗಳನ್ನು ಮನಗಂಡು ಆಗಲೇ ಅದನ್ನು ಹೇರುವುದನ್ನು ತಡೆಯಬಹುದಿತ್ತು ಎಂದ ಪ್ರಣಬ್ ಮುಖರ್ಜಿ, ಇಂದಿರಾ ಗಾಂಧಿ ಹತ್ಯೆ ಮತ್ತು ನಂತರ ಸಿಖ್ ಹತ್ಯಾಕಾಂಡಗಳನ್ನೂ ಅವರು ವಿರೋಧಿಸಿದರು. ಭಾರತ ಹಿಂದೆಂದೂ ಅಂಥ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಅವು ಕರಾಳ ದಿನಗಳ ಎಂದು ಪ್ರಣಬ್ ಮುಖರ್ಜಿ ಹೇಳಿದ್ದರು.
ನಾವು ಯಾವುದೇ ಸಾಂವಿಧಾನಿಕ ಸಂಸ್ಥೆಯನ್ನು ಬಲಾಡ್ಯಗೊಳಿಸಬೇಕಾದರೆ ಅದರ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು, ಇಂದು ಭಾರತದಲ್ಲಿ ಚುನಾವಣೆಗಳು ಯಶಸ್ವಿಯಾಗುತ್ತಿವೆ ಎಂದರೆ ಅದಕ್ಕೆ ಕಾರಣ ಚುನಾವಣಾ ಆಯುಕ್ತರು. ಅವರನ್ನು ಟೀಕಿಸುವುದು ಸರಿಯಲ್ಲ. ಈ ಚುನಾವಣೆಯೂ ಪರಿಪೂರ್ಣವಾಗಿದೆ” ಇವಿಎಂ ದೋಷದ ಬಗ್ಗೆ ಮಾತನಾಡುವುದು ಯಾವ ಮನಸ್ಥಿತಿಯಲ್ಲಿ ಎನ್ನುವುದು ತಿಳಿದಿಲ್ಲ. ಎಂದು ಹೇಳಿದರು.