ಧೈರ್ಯವಿದ್ದರೆ ಸೋನಿಯಾ ಗಾಂಧಿಯವರನ್ನು ಮಹದಾಯಿ ವಿಷಯದಲ್ಲಿ ಪ್ರಶ್ನೆ ಮಾಡಲಿ, ಕಾಂಗ್ರೆಸ್ ಕಪಟ ನಾಟಕವಾಡುತ್ತಿದೆ: ಪ್ರತಾಪ್ ಸಿಂಹ

0
536

ಉತ್ತರಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲೆಂದೇ ಗೋವಾದ ಮಹದಾಯಿ ನದಿಯಿಂದ ಕಳಸಾ ಬಂಡೂರಿ ಯೋಜನೆ ಮೂಲಕ ಮಲಪ್ರಭಾ ನದಿಗೆ ಸುಮಾರು 7.56 ಟಿಎಂಸಿ ನೀರನ್ನು ಹರಿಸಲು ಉದ್ದೇಶಿಸಲಾಗಿತ್ತು. ಗೋವಾ ಸಿಎಂ ಮತ್ತು ಪ್ರಧಾನಿಯವರ ಜೊತೆ ಮಾತನಾಡಿ ಬಗೆಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇದೆ ತಿಂಗಳಲ್ಲಿ ಲಿಖಿತವಾಗಿ ಭರವಸೆ ನೀಡುವುದಾಗಿ ಹೇಳಿದ್ದರು.

ತಮ್ಮ ಸಮಸ್ಯೆ ಬಗೆಹರಿಸಲು ವಿಳಂಬವಾದ ಕಾರಣ ಮತ್ತು ಸರ್ಕಾರ ಇದರ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹೋರಾಟ ಸಮಿತಿ ಉತ್ತರಕರ್ನಾಟಕ ಬಂದ್-ಗೆ ಕರೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸಿಎಂ, ಯಡಿಯೂರಪ್ಪನವರು ಜನರಿಗೆ ಬೇಜವಾಬ್ದಾರಿ ಭರವಸೆಗಳನ್ನು ನೀಡಬಾರದೆಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್-ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಖಾರವಾಗಿ ರಿಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪನವರಿಗೆ ಜನರ ಬಗ್ಗೆ ಕಾಲಿಜಿ ಇದ್ದರೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಂದ ಅಫಿಡವಿಟ್ ಬರೆಸಿ ಮಹದಾಯಿ ನ್ಯಾಯಮಂಡಳಿಗೆ ಸಲ್ಲಿಸಲಿ ಅದು ಬಿಟ್ಟು ಬೇಜವಾಬ್ದಾರಿ ಹೇಳಿಕೆ ನೀಡಬಾರದೆಂದು ಸಿಎಂ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಾಪ್ ಸಿಂಹ, 2007 ರ ಗೋವಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಒಂದು ಹನಿ ನೀರನ್ನು ಬಿಡುವುದಿಲ್ಲ ಎಂದಿದ್ದ ಸೋನಿಯಾ ಗಾಂಧಿ, 2009 ರಲ್ಲಿ ಮಹದಾಯಿ ಸಮಸ್ಯೆಯನ್ನು ಮಾತುಕತೆಯಲ್ಲಿ ಬಗೆಹರಿಸದೆ ನ್ಯಾಯಾಧಿಕರಣದ ಮುಖಾಂತರ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು ಇದನ್ನು ಸಿಎಂ ಸಿದ್ದರಾಮಯ್ಯ ಇಲ್ಲ ಏನಲ್ಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಯಡಿಯೂರಪ್ಪನವರು ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 100 ಕೋಟಿ ವೆಚ್ಚದಲ್ಲಿ 5.5 ಕಿ.ಮೀ ಮಹದಾಯಿ ಮತ್ತು ಮಲಪ್ರಭಾ ಜೋಡಣಾ ಕಾಲುವೆ ನಿರ್ಮಿಸಿದ್ದರು ಇದಕ್ಕೆ ನೀವು 2014-15 ರಲ್ಲಿ ತಡೆಗೋಡೆ ನಿರ್ಮಿಸಿದ್ದೀರಿ, ಅಲ್ಲದೆ ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಗೋವಾ ಕಾಂಗ್ರೆಸ್ ನಾಯಕರನ್ನು ಒಪ್ಪಿಸುತ್ತೇವೆಂದು ನೀವೇ ಒಪ್ಪಿಕೊಂಡು ಈಗ ನಿಮ್ಮ ಮಾತು ಉಳಿಸಿಕೊಳ್ಳದೆ ಬೇರೆಯವರನ್ನು ದೂರುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ನಿಮ್ಮದೇ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರು ಮಾತುಕತೆಯ ಮೂಲಕ ಬಗೆಹರಿಸಬಹುದಾದ ಜನರ ಒಂದು ನದಿ ಸಮಸ್ಯೆಯನ್ನು ರಾಜಕೀಯ ದುರುದ್ದೇಶದಿಂದ ವಿಳಂಭ ಮಾಡುತ್ತಿದ್ದೀರಿ ಎಂದು ಟೀಕಿಸಿದರು.