ಅಶ್ವಥ್ ಪುತ್ರನ ಕೈಗೆ ಬ್ಲಾಂಕ್ ಚೆಕ್ ನೀಡಿ ಶಂಕರ್‌ ಅವರ ಕಾಲ್‌ಶೀಟ್ ಪಡೆದ ಒಳ್ಳೆ ಹುಡುಗ ಪ್ರಥಮ್..!!

0
894

ಸಾಹಸಸಿಂಹ ವಿಷ್ಣುವರ್ಧನ್‌ ಅಭಿನಯದ ‘ನಾಗರಹಾವು’ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರಾಗಿ ಕಾಣಿಸಿಕೊಂಡ ಕೆ.ಎಸ್‌ ಅಶ್ವತ್ಥ್‌ ಯಾರಿಗೆ ತಾನೇ ಗೊತ್ತಿಲ್ಲ ಅವರು ತಮ್ಮ ಅಧೂತಾವಾದ ನಟನೆಯ ಮೂಲಕ ಈಗಲೂ ಕನ್ನಡಿಗರ ಮನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇಂದು ಇಂತಹ ಪ್ರಸಿದ್ಧ ನಟನ ಪುತ್ರ ಜೀವನದ ಬಂಡಿ ಸಾಗಿಸಲು ಕ್ಯಾಬ್‌ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ಮೊದಲು ಹಲವು ವರ್ಷಗಳಿಂದ ಬೆಳ್ಳಿತೆರೆ ಮತ್ತು ಕಿರುತೆರೆಗಳಲ್ಲಿ ಅಭಿನಯಿಸುತ್ತಿದ್ದರು, ಪ್ರತಿಯೊಂದು ಟಿವಿ ಚಾನೆಲ್-ನಲ್ಲಿ ಇವರು ನಟಿಸಿದ ಒಂದಲ್ಲ ಒಂದು ಧಾರಾವಾಹಿ ಇರುತ್ತಿತ್ತು ಅಷ್ಟರ ಮಟ್ಟಿಗೆ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಶಂಕರ್. ಆದರೆ ಕಳೆದ ಕೆಲ ವರ್ಷಗಳಿಂದ ಅವರಿಗೆ ಯಾವ ಸಿನೆಮಾದಿಂದಾಗಲಿ ಅಥವಾ ಕಿರುತೆರೆಯಿಂದಾಗಲಿ ಆಫರ್ ಬಂದಿಲ್ಲವಂತೆ, ಒಬ್ಬ ಉತ್ತಮ ಕಲಾವಿದನಿಗೆ ಸಿಗಬೇಕಾದ ಅವಕಾಶಗಳು ಬಣ್ಣದ ಲೋಕದಲ್ಲಿ ದೊರಕದೇ ಬೇಸರಗೊಂಡಿರುವುದರಿಂದ ಕಲಾವೃತ್ತಿಯ ಜೊತೆಗೆ ಅವರು ಟ್ಯಾಕ್ಸಿ ನಡೆಸುತ್ತಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಮತ್ತಿ ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಅವರಿಗೆ ಸಹಾಯಮಾಡಲು ಬಿಗ್‌ಬಾಸ್‌ ಸೀಸನ್‌ 4 ವಿಜೇತ ಒಳ್ಳೆಹುಡುಗ ಪ್ರಥಮ್‌ ಮೈಸೂರಿನ ಶಂಕರ್‌ ಅಶ್ವತ್ಥ್‌ ಅವರ ಮನೆಗೆ ಭೇಟಿ ನೀಡಿ ಪ್ರಥಮ್ ಅವರ ಮುಂದಿನ ಚಿತ್ರ ‘ಪ್ರಥಮ್‌ ಬಿಲ್ಡಪ್‌’ಗೆ ಮುಂಗಡ ಹಣ ನೀಡಿ ಶಂಕರ್‌ ಅವರ ಕಾಲ್‌ಶೀಟ್ ಪಡೆದಿದ್ದಾರೆ. ಈ ಹಿಂದೆ ಗ್ಯಾಂಗ್ರೀನ್ ಕಾಯಿಲೆಯಿಂದ ಕಾಲು ಕಳಕೊಂಡಿದ್ದ ಸತ್ಯಜಿತ್ ಅವರಿಗೂ ಕೂಡಾ ಪ್ರಥಮ್ ತಮ್ಮ ಚಿತ್ರದಲ್ಲಿ ಅವಕಾಶ ಕೊಡೋ ಮೂಲಕ ಗಮನ ಸೆಳೆದಿದ್ದರು. ಈಗ ಕಷ್ಟದಲ್ಲಿದ್ದಾರೆನ್ನಲಾದ ಶಂಕರ್ ಅಶ್ವತ್ಥ್ ಅವರಿಗೂ ಅವಕಾಶ ಕೊಡೋ ಮೂಲಕ ನೆರವಾಗಿದ್ದಾರೆ. ಇನ್ನು ನವರಸನಾಯಕ ಜಗ್ಗೇಶ್‌ ಕೂಡ ಶಂಕರ್‌ ಅಶ್ವತ್ಥ್‌ರ ಈ ಕರುಣಾಜನಕ ಸ್ಥಿತಿಗೆ ಟ್ವೀಟ್‌ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.