ಗೆಲ್ಲಬೇಕು ಸಾಧಿಸಲೇಬೇಕು ಎಂಬ ಮನಸ್ಸಿರುವ ವ್ಯಕ್ತಿಗೆ‌,ಅವಮಾನ ! ಅನುಮಾನ ! ಕೊನೆಯಲ್ಲಿ ಸನ್ಮಾನ

0
3270

ಬಿಗ್ ಬಾಸ್ ಮನೆಗೆ ಹೋಗಿಯೇ ಸಿದ್ದ ಎಂದು ಛಾಲೆಂಜ್ ಹಾಕಿದ್ದ

14650667_683132355202269_814982825866334201_n

ಬಿಗ್ ಬಾಸ್ ಸೀಸನ್ 4 ಪ್ರಾರಂಭವಾಗುತ್ತಿದೆ ಅನ್ನುವುದು ಗೊತ್ತಾಗುತ್ತಿದ್ದಂತೆ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಿಯೇ ಸಿದ್ದ ಎಂದು ಗೆಳೆಯರಲ್ಲಿ ಹೇಳಿದ್ದ. ಗೆಳೆಯರು ನಕ್ಕಿದ್ರು. ಆದ್ರೆ ಸೀದಾ ಕಲರ್ಸ್ ವಾಹಿನಿ ಕಚೇರಿ ನುಗ್ಗಿದ ಪ್ರಥಮ್ ಬಿಗ್ ಬಾಸ್ ಗೆ ಕಳುಹಿಸಿಕೊಡಿ ಎಂದು ವಿನಂತಿಸಿದ್ದ. ಇವಾನ್ಯವ ತಿಕ್ಲು ಅಂದುಕೊಂಡ ಚಾನೆಲ್ ಮುಖ್ಯಸ್ಥರು ಬಿಗ್ ಬಾಸ್ ಬಗ್ಗೆ ಘಟಾನುಘಟಿಗಳ ಪ್ರತಿಕ್ರಿಯೆ ತರವಂತೆ ಸೂಚಿಸಿದ್ದರು. ಚಾನೆಲ್ ಗಳ ಕೈಗೆ ಸಿಗದ ದೇವೇಗೌಡರು ಪ್ರಥಮ್ ನನ್ನು ಹಾರೈಸಿದ್ದರು. ಈಶ್ವರಪ್ಪ ತಮ್ಮ ಮೊಮ್ಮಗ ಅಂದ್ರು, ಪರಮೇಶ್ವರ್ ನಮ್ಮ ಹುಡುಗ ಅಂದರು. ಹೀಗೆ ಅನೇಕರ ಪ್ರತಿಕ್ರಿಯೆಗಳನ್ನು ತಂದು ಕಲರ್ಸ್ ಚಾನೆಲ್ ಹೆಡ್ ಮುಂದೆ ಗುಡ್ಡೆ ಹಾಕಿದ. ಆ ಕ್ಷಣಕ್ಕೆ ಗಾಬರಿಯಾದವರು. ಇವ ತಿಕ್ಲು ಅಲ್ಲ. ಇವನೊಳಗಡೆ ಎನೋ ಎಂದು ಅರಿತವರು, ಬಿಗ್ ಬಾಸ್ ಮನೆಗೆ ಹೋದ್ರೆ ಏನು ಮಾಡ್ತೀಯಾ ಎಂದ ಪ್ರಶ್ನಿಸಿದ್ದಾರೆ. ಸರ್ ಮನೆಯೊಳಗಡೆ ಹೋದ್ರೆ ನಾನು ಎಂದು ಶುರು ಮಾಡಿದ ಪ್ರಥಮ್ ಮಾತು ನಿಲ್ಲಿಸಿದಾಗ ಬಿಗ್ ಬಾಸ್ ವೇದಿಕೆಯಲ್ಲಿದ್ದ.

ಸ್ಕೀನ್ ಮುಂದೆ ಮಾತ್ರ ತಿಕ್ಲು…. ವೈಯುಕ್ತಿಕವಾಗಿ ಪ್ರಥಮ್ ಪ್ರತಿಭಾನ್ವಿತ

ಸಿಕ್ಕಾಪಟ್ಟೆ ಓದೋ ಹುಚ್ಚು ಇಟ್ಟುಕೊಂಡಿರುವ ಪ್ರಥಮ್ ರಾಜಕೀಯ, ಸಿನಿಮಾ ಕ್ರೀಡೆ, ಸಾಮಾಜಿಕ ವಿಷಯದಲ್ಲಿ ಸಾಕಷ್ಟು ಪಳಗಿದ್ದಾನೆ. ಈತನ ತಂದೆ ಕೂಡಾ ಅಪ್ಪಟ್ಟ ಕನ್ನಡ ಪ್ರೇಮಿ. ಸರ್ಕಾರಿ ಕಚೇರಿಯಲ್ಲಿ ಇಂಗ್ಲೀಷ್ ಕಂಡ್ರೆ ಕೆಂಡವಾಗುತ್ತಿದ್ರು. ಹಾಗೇ ಮಗನೂ ತಂದೆಯ ರಕ್ತದಂತೆ ಕಣ ಕಣದಲ್ಲೂ ಕನ್ನಡ ಅನ್ನುತ್ತಿದ್ದಾನೆ.

ಸೆಲೆಬ್ರೆಟಿ ಸೆಲ್ಪಿ ಸ್ಟಾರ್ ಪ್ರಥಮ್

14937174_689903667858471_7676871761087833139_n

ಪ್ರಥಮ್ ಜೊತೆ ಸೆಲ್ಪಿ ತೆಗೆಸಿಕೊಂಡಿಲ್ಲ ಅಂದ್ರೆ ಅವರು ಸ್ಟಾರ್ ಅಲ್ಲವೇ ಅಲ್ಲ. ಸೆಲೆಬ್ರೆಟಿ ಎಂದು ಗುರುತಿಸಿಕೊಳ್ಳಬೇಕು ಅಂದ್ರೆ ಪ್ರಥಮ್ ಜೊತೆ ಸೆಲ್ಪಿ ತೆಗೆಸಿಕೊಂಡಿರಬೇಕು. ಯಾಕಂದ್ರೆ ಅಷ್ಟೊಂದು ಸೆಲ್ಪಿ, ಸೆಲೆಬ್ರೆಟಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. ಮಾತು ಮಾತು ಮಾತು ಮೂರು ಹೊತ್ತು ಮಾತನಾಡುವ ಪ್ರಥಮ್ ನ ಹುಚ್ಚು ಅಂದ್ರೆ ಅದು ಫೋಟೋ ತೆಗೆಸಿಕೊಳ್ಳುವುದು.

ಯುವಕರಿಗೆ ಸ್ಫೂರ್ತಿ ಪ್ರಥಮ್

14718878_676439802538191_7896619293391514254_n

ಕೊಳ್ಳೆಗಾಲದ ಹಲಗಪುರದ ಈ ಯುವಕ ಯುವಕರಿಗೊಂದು ಸ್ಫೂರ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ.ಹಳ್ಳಿಯಿಂದ ಬಂದ ಹೈದ ಈ ಮಟ್ಟಕ್ಕೆ ಬೆಳೆದಿದ್ದಾನೆ ಅಂದ್ರೆ ಛಲವೇ ಮುಖ್ಯ ಕಾರಣ. ಸಾಧನೆಯ ಶಿಖರ ಏರಲೇಬೇಕು ಎಂದು ನಿರ್ಧರಿಸಿದ ಈತ ಆತ್ಮೀಯ ಗೆಳೆಯರಿಗೂ ಬೈಯುತ್ತಿದ್ದ. ಅವನಿಗೆ ಇಷ್ಟವಾಗಿಲ್ಲ ಅಂದ್ರೆ ಖಂಡಿಸುತ್ತಿದ್ದ. ಪ್ರಥಮ್ ನ ಹಿನ್ನಲೆ ಕೆದಕಿದ ಮೇಲೆ ಆತನನ್ನು ಹುಚ್ಚ ವೆಂಕಟ್ ಗೆ ಹೋಲಿಸೋ ಹಾಗಿಲ್ಲ. ಸಾಧಕರಿಗೆ ಈತ ಪ್ರೇರಕ ಶಕ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ. Olle Hudga Pratham

*ಗೆಲ್ಲಬೇಕು ಸಾಧಿಸಲೇಬೇಕು ಎಂಬ ಮನಸ್ಸಿರುವ ವ್ಯಕ್ತಿಗೆ‌,ಅವಮಾನ ! ಅನುಮಾನ ! ಕೊನೆಯಲ್ಲಿ ಸನ್ಮಾನ.* *ನಿನ್ನ ದಾರಿಯಲ್ಲಿ ನೀನಡೆ, ಅಂಜದಿರು, ಎದೆಗುಂದದಿರು,*
*ಹೆಚ್ಚು ಪೆಟ್ಟುತಿಂದ ಕಲ್ಲೆ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದು‌*.
*ಮನುಜ ಇದ ನೀ ಮರೆಯದಿರು.*
ಸರ್ವರಿಗೂ ಒಳಿತಾಗಲಿ ಸರ್ವರಿಗೂ ಶುಭವಾಗಲಿ