ಗುಡಿಸಲ್ಲಿ ಸನ್ಯಾಸಿ ಜೀವನ ಸೈಕಲ್ ಮೇಲೆ ಚುನಾವಣೆ ಪ್ರಚಾರ; ಈಗ ಮೋದಿ ಸರ್ಕಾರದ ಮಂತ್ರಿಯಾದ ಸರಳ ವ್ಯಕ್ತಿಯ ರಾಜಕೀಯ ಬೆಳೆವಣಿಗೆಗೆ ಏನು ಕಾರಣ ಗೊತ್ತಾ??

0
607

ಸರಳತೆಗೆ ಯಾರು ಮಿರಿಸಲಾಗದಷ್ಟು ಎತ್ತರಕ್ಕೆ ಬೆಳೆದ ‘ಒಡಿಶಾದ ಮೋದಿ’ ಎಂದೇ ಹೆಸರು ಪಡೆದಿರುವ ಪ್ರತಾಪ್ ಸಾರಂಗಿ ಚಿಕ್ಕ ಗುಡಿಸಲಲ್ಲಿ ಜೀವನ ಮಾಡಿ, ಜಿಲ್ಲೆಯಾದಂತ ಸೈಕಲ್ ಮೇಲೆ ಪ್ರಚಾರ ಮಾಡಿ ಶ್ರೀ ಮಂತ ಸ್ಪರ್ಧಿಯನ್ನು ಸೋಲಿಸಿ ಸಂಸದರಾದ ಒಡಿಶಾದ ಮೋದಿ’ ‘ನಾನಾ’ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿ ಮೋದಿ ಸರ್ಕಾರ ದಲ್ಲಿ ಮಂತ್ರಿಯಾಗಿದ್ದಾರೆ.

Also read: ಮೋದಿ ಸರ್ಕಾರದಲ್ಲಿ ಕರ್ನಾಟಕದ ಮೂವರಿಗೆ ಮಂತ್ರಿ ಸ್ಥಾನ; ಯಾರಿವರು ಅದೃಷ್ಟವಂತರು ಇಲ್ಲಿದೆ ನೋಡಿ ಮಾಹಿತಿ..

ಹೌದು ಒಡಿಶಾದ ಬಾಲಾಸೋರ್ ನಲ್ಲಿ ಬಿಜೆಡಿ ಅಭ್ಯರ್ಥಿ ರಬೀಂದ್ರ ಜೇನಾ ಅವರನ್ನು 12,956 ಮತಗಳಿಂದ ಸೋಲಿಸಿ ಸಂಸದರಾದ ಸಾರಂಗಿ ಅವರಿಗೆ ಮೋದಿ ಸರ್ಕಾರ ಇದೀಗ ಸಚಿವ ಸ್ಥಾನ ನೀಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದು ಹಳ್ಳಿಗಾಡಿನ ಅಭಿವೃದ್ಧಿಗಾಗಿ, ಜನಸೇವೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟ ಸಾರಂಗಿ ಅವರನ್ನು ಗುರುತಿಸಿ, ಅವರಿಗೆ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು, ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಒಡಿಶಾದ ಬಾಲಸೋರ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ತನ್ನ ಸರಳ ಜೀವನ ಶೈಲಿಯಿಂದಲೇ ಮನೆಮಾತಾದ ಪ್ರತಾಪ್‌ ಚಂದ್ರ ಸಾರಂಗಿ ಒಡಿಶಾದಲ್ಲಿ ಇವರು ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಗೆ ಹೆಸರಾದವರು. ಪ್ರಖರ ವಾಗ್ಮಿ, ಸಂಸ್ಕೃತ ಪಂಡಿತ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತ ಸಾರಂಗಿ ಸೈಕಲ್ನಲ್ಲೇ ಹಳ್ಳಿಗಳಿಗೆ ಸುತ್ತುವ ಸರಳ ಜೀವಿ. ಇವರ ಎದುರು ಬಾಲಸೋರ್‌ನಲ್ಲಿ ಬಿಜೆಡಿಯಿಂದ ಮಾಧ್ಯಮ ದೊರೆ, ಕೋಟ್ಯಧಿಪತಿ ಎಂದೇ ಕರೆಯಲ್ಪಟ್ಟ ರವೀಂದ್ರ ಕುಮಾರ್‌ ಜೇನಾ ವಿರುದ್ಧ 12 ಸಾವಿರ ಮತಗಳಿಂದ ಜೇನಾರನ್ನು ಸೋಲಿಸಿದ್ದಾರೆ. ಕಾಂಗ್ರೆಸ್‌ನಿಂದ ನಬಜ್ಯೋತಿ ಪಟ್ನಾಯಕ್‌ ಕೂಡ ಕಣಕ್ಕೆ ಇಳಿದಿದ್ದರು.

ಸಚಿವರಾಗಿ ಅಭಿಪ್ರಾಯ ತಿಳಿಸಿದ ಸಾರಂಗಿ;

“ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ನಂಬಿಕೆ ಇಟ್ಟಿಕೊಂಡು ಮಂತ್ರಿಸ್ಥಾನ ನೀಡಿದ್ದು ನನ್ನ ಪುಣ್ಯ. ಈ ದೇಶದ ಸೇವೆಗೆ ಇದೊಂದು ಮಾಧ್ಯಮ ಎಂದು ನಾನು ಭಾವಿಸಿದ್ದೇನೆ. ನಮ್ಮ ಪಕ್ಷ ಎಂದಿಗೂ, ದೇಶ ಮೊದಲು, ಪಕ್ಷ ನಂತರ, ನಾನು ಕೊನೆಯಲ್ಲಿ ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟಿದೆ. ನಾನು ಮೋದಿ ಮತ್ತು ಜನ ಸಾಮಾನ್ಯರ ನಂಬಿಕೆಯನ್ನು ಗಳಿಸಲು, ಉಳಿಸಿಕೊಳ್ಳಲು ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ” ಪ್ರತಾಪ್ ಚಂದ್ರ ಸಾರಂಗಿ.

ಸಚಿವ ಸಾರಂಗಿ ನಡೆದು ಬಂದ ಹಾದಿ;

ಬಾಲಸೋರ್ ಜಿಲ್ಲೆಯ ಗೋಪಿನಾಥಪುರ್ ನ ಬಡಕುಟುಂಬದಲ್ಲಿ ಜನಿಸಿದ್ದ ಪ್ರತಾಪ್ ಸಿಂಗ್ ಸಾರಂಗಿ ಅಲ್ಲಿನ ಫಕೀರ್ ಮೋಹನ್ ಕಾಲೇಜ್-ನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಓಡಿಯಾ ಮತ್ತು ಸಂಸೃತದಲ್ಲಿ ಸರಾಗವಾಗಿ ಮಾತನಾಡಬಲ್ಲ ಇವರು ದ್ವಿಭಾಷಾ ನಿಪುಣ ಬಾಲ್ಯದಿಂದಲೂ ಅಧ್ಯಾತ್ಮದತ್ತ ಒಲವು ಒಮ್ಮೆ ಸನ್ಯಾಸಿಯಾಗಲು ಬಯಸಿ ರಾಮಕೃಷ್ಣ ಮಠಕ್ಕೆ ತೆರಳಿದರು. ಆದರೆ ಮನೆಯಲ್ಲಿ ವಿಧವೇ ತಾಯಿ ಇರುವುದು ಮಠದ ಸ್ವಾಮಿಗಳಿಗೆ ತಿಳಿದು ತಾಯಿಯ ಸೇವೆಯನ್ನು ಮಾಡುವಂತೆ ಅವರನ್ನು ವಾಪಸ್ ಮನೆಗೆ ಕಳಿಸಿದರು. ಅಲ್ಲಿಂದ ಹಿಂತಿರುಗಿದ ನಂತರ ಸಾರಂಗಿ ತಮ್ಮನ್ನು ಪೂರ್ಣಾವಧಿ ಸೇವಾಕಾರ್ಯಕ್ಕೆ ಮುಡಿಪಾಗಿಸಿಕೊಂಡರು.

ಸೈಕಲ್ ಪ್ರಚಾರ ಮಾಡಿ ಕೋಟ್ಯಧಿಪತಿಯನ್ನು ಸೋಲಿಸಿದ;

ಸೈಕಲ್ -ನಲ್ಲೇ ಹಳ್ಳಿಗಳಿಗೆ ಸುತ್ತುವ ಸರಳ ಜೀವಿ. ಇವರ ಎದುರು ಬಾಲಸೋರ್‌ನಲ್ಲಿ ಬಿಜೆಡಿಯಿಂದ ಮಾಧ್ಯಮ ದೊರೆ, ಕೋಟ್ಯಧಿಪತಿ ಎಂದೇ ಕರೆಯಲ್ಪಟ್ಟ ರವೀಂದ್ರ ಕುಮಾರ್‌ ಜೇನಾ ವಿರುದ್ಧ 12 ಸಾವಿರ ಮತಗಳಿಂದ ಜೇನಾರನ್ನು ಸೋಲಿಸಿದ್ದಾರೆ. ಬಾಲಸೋರ್‌ನಲ್ಲಿ ಪ್ರಧಾನಿ ಮೋದಿ ಕೂಡ ಪ್ರಚಾರ ನಡೆಸಿದ್ದರು. ಅಂದಹಾಗೆ ಇದಕ್ಕೂ ಮೊದಲು ಎರಡು ಬಾರಿ ನೀಲಗಿರಿ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಶಾಸಕರಾಗಿದ್ದರು. ಜೇನಾ ಐಷಾರಾಮಿ ಕಾರುಗಳಲ್ಲಿ ಸುತ್ತಾಡಿ ಮತಯಾಚನೆ ಮಾಡುತ್ತಿದ್ದರೆ, ಇತ್ತ ಸಾರಂಗಿ ಬಾಡಿಗೆಗೆ ಪಡೆದ ರಿಕ್ಷಾದಲ್ಲಿ ಸುತ್ತುತ್ತಾ ಮತ ಯಾಚಿಸುತ್ತಿದ್ದರು. ಇವರನ್ನು ಇಲ್ಲಿನ ಜನರು ನಾನಾ ಎಂದೇ ಕರೆಯುತ್ತಾರೆ.

Also read: ಚುನಾವಣೆ ಗೆಲ್ಲಲ್ಲು ಕೋಟಿ ಕೋಟಿ ಹಣ ಬೇಕು ಅನ್ನುವುದನ್ನು ಸುಳ್ಳು ಮಾಡಿದ ಸಂಸ್ಕೃತ ಪಂಡಿತನ ಬಳಿ ಇರುವುದು ಬರೀ ಒಂದು ಚಿಕ್ಕ ಗುಡಿಸಲು, ಒಂದು ಸೈಕಲ್ ಮತ್ತೆ ಒಂದು ಬ್ಯಾಗು!!