ರಾಮಲಿಂಗ ರೆಡ್ಡಿಯವರಿಗೆ ಸಂಸದ ಪ್ರತಾಪ್ ಸಿಂಹ ಸ್ಕ್ರೂ ಡ್ರೈವರ್ ಪಾರ್ಸೆಲ್ ಮಾಡ್ತಾರಂತೆ!! ಯಾಕೆ ಗೊತ್ತ??

0
324

ಸದ್ಯ ಕರ್ನಾಟಕದಲ್ಲಿ ಎಲ್ಲ ಪಕ್ಷಗಳ ನಡುವೆ ಜಿದ್ದು ಉಂಟಾಗಿದೆ. ಶತಾಯಗತಾಯ ಸರ್ಕಾರ ರಚಿಸಬೇಕು ಎಂಬ ಆಸೆ ಎಲ್ಲ ಪಕ್ಷಗಳದ್ದು ಆಗಿದೆ. ಇದಕ್ಕೆ ಪೂರಕ ಎಂಬಂತೆ ರಾಜಕೀಯ ನಾಯಕರು ಸಹ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮತದಾರರನ್ನು ತನ್ನತ್ತ ಸೆಳೆಯಲು ಪ್ಲಾನ್ ಮಾಡ್ತಾ ಇದ್ದಾರೆ.

ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ ಕೊಲೆಯಾಗಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಬಗ್ಗೆ ರಾಜಕೀಯ ದೊಂಬರಾಟಗಳು ನಡೆಯುತ್ತಲೆ ಇವೆ. ಇದಕ್ಕೆ ಇನ್ನೊಂದು ಉದಾಹರಣೆ ಸೇರ್ಪಡೆ ಆಗಿದೆ. ಸಂತೋಷರನ್ನು ಕೊಲೆ ಮಾಡಲು ಸ್ಕ್ರೂ ಡ್ರೈವರ್ ಬಳಕೆ ಮಾಡಿದ್ದರು ಅಷ್ಟೇ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ಖಂಡನೆ ಕೂಡಾ ವ್ಯಕ್ತವಾಗಿತ್ತು. ಈಗ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಸದ ಪ್ರತಾಪ್ ಸಿಂಹಾ, ಹೊಸ ಪ್ರತಿಭಟನೆ ಶುರು ಮಾಡಿದ್ದಾರೆ. ಅಂದಹಾಗೆ ಇದಕ್ಕೆ ಸ್ಕ್ರೂ ಡ್ರೈವರ್ ಅಭಿಯಾನ ಎಂದು ಹೆಸರಿಡಲಾಗಿದೆ. ಈ ಅಭಿಯಾನವನ್ನು ರಾಜ್ಯಾದ್ಯಂತ ನಡೆಸಲು ಬಿಜೆಪಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಸ್ಟೇಟ್ ಸ್ಪಾನ್ಸರ್ ಟೆರರಿಸಂ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ 24 ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ನಡೆದಿದೆ. ಈ ಬಗ್ಗೆ ತಿಳಿಯದೆ ರಾಮಲಿಂಗಾರೆಡ್ಡಿ ಸಂವೇದನಾ ರಹಿತ ಹೇಳಿಕೆ ನೀಡುತ್ತಿದ್ದಾರೆ. ಇನ್ನು ರಾಮಲಿಂಗಾ ರೆಡ್ಡಿ ಅಧಿಕಾರಕ್ಕೆ ಬಂದ ಮೇಲೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಮಂಗಳೂರು ದೀಪಕ್ ರಾವ್ ಹತ್ಯೆ ಯಾಗಿದೆ. ಆಗಲೇ ರಾಂಲಿಂಗಾರೆಡ್ಡಿ ಅವರಿಗೆ ತಮ್ಮ ಕೆಲಸದ ಮೇಲೆ ಅನುಮಾನ ಬರಬೇಕಿತ್ತು. ಅಲ್ಲದೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಬೇಕಿತ್ತು. ಇದ್ಯಾವದೂ ನಡೆಯದೆ ಆರೋಪಿಗಳ ಬೆನ್ನಿಗೆ ನಿಂತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

ಇನ್ನು ಮುಂದುವರೆದ ಪ್ರತಾಪ್ ಸಿಂಹಾ, ನಾವು ಗೃಹ ಸಚಿವರಿಗೆ ಸ್ಕ್ರೂ ಡ್ರೈವರ್ ಕೊರಿಯರ್ ಮಾಡುತ್ತೇವೆ. ಇದನ್ನು ನೋಡಿದ ಮೇಲೆ ಅವರಿಗೆ ಸಂತೋಷ್ ನೆನಪಾಗಬೇಕು ಎಂದು ಲೇವಡಿ ಮಾಡಿದ್ದಾರೆ.