ಹುಣಸುರಿನಲ್ಲಿ ಮೆರವಣಿಗೆ ವೇಳೆ ಅನವಶ್ಯಕವಾಗಿ ಮಾಧ್ಯಮದವರಿಗೆ ನಿಯಂತ್ರಣ ಹಾಕಿದ್ದ ಎ.ಸಿ.ಯವರನ್ನು ತರಾಟೆಗೆ ತೆಗೆದುಕೊಂಡ ಸಂಸದ ಪ್ರತಾಪ್ ಸಿಂಹ

0
480

ಸದಾ ಏನಾದರೊಂದು ಸುದ್ದಿಯಿಂದ, ವಿವಾದಗಳಿಂದ ಮಾಧ್ಯಮಗಳಲ್ಲಿ ಕಾಣುತ್ತಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಈಗ ಮತ್ತೊಮ್ಮೆ ಸುಡಿಯಲ್ಲಿದ್ದಾರೆ. ಈ ಬರಿ ಅವರು ಬೇರೆ ಯಾರಿಗೂ ಅಲ್ಲ ರಾಜ್ಯ ಪೊಲೀಸರಿಗೆ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ನಡೆದ ಘಟನೆಯೇನು, ಮುಂದೆ ಓದಿ.

ಹುಣಸೂರಿನಲ್ಲಿ ನಡೆಯುತ್ತಿರುವ ಹನುಮ ಜಯಂತಿ ಮೆರವಣಿಗೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಸಹ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳನ್ನು ನಿಯಂತ್ರಿಸಲು ಮುಂದಾದ ಪೊಲೀಸರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮೆರವಣಿಗೆ ವೇಳೆ ಮಾಧ್ಯಮಗಳನ್ನು ನಿಯಂತ್ರಿಸಲು ಎಸಿ ಅವರು ಮುಂದಾಗಿದ್ದೆ ಪ್ರತಾಪ್ ಸಿಂಹರ ಕೋಪಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಸಂಸದ ಪ್ರತಾಪ್ ಸಿಂಹ ಎಸಿ ಅವರನ್ನು, ನೀವೇನು ಭಿಕ್ಷೆ ಬೇಡಿ ಮೆರವಣಿಗೆಗೆ ಅವಕಾಶ ನೀಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನಮ್ಮ ಭಾವನೆಗೆ ಧಕ್ಕೆಯಾದರೆ ನಮಗೆ ಕೋಪ ಬರುತ್ತೆ, ಗಲಾಟೆ ನಡೆಯುತ್ತೆ, ಇದಕ್ಕೆ ಅವಕಾಶಕೊಡಬೇಡಿ. ನಾವು ನೀವು ತಿಳಿಸಿದ ಮಾರ್ಗದಲ್ಲೇ ಮೆರವಣಿಗೆ ಹೋಗುತ್ತೇವೆ ಎಂದಿದ್ದಾರೆ.

ಎಸಿ ಅವರೇ ಒಂದು ವೇಳೆ ನೀವು ನಮ್ಮ ಮೇಲೆ ಒತ್ತಡ ಹಾಕಿದರೆ ರಸ್ತೆಯಲ್ಲಿ ಕೂರಬೇಕಾಗುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.