ಬಿಗ್ ಬಾಸ್-ನ ವಿಜೇತ ಪ್ರಥಮ್-ಗೆ ಇನ್ನು ಬಹುಮಾನದ ಹಣ ಸಿಕ್ಕಿಲ್ಲ!!

0
726

ಪ್ಯಾನ್‍ ಕಾರ್ಡ್‍ ಇಲ್ಲ ಅಂತ ಪ್ರಥಮ್ ಗೆ ಸಿಗದ ಬಿಗ್‍ಬಾಸ್‍ನ 50 ಲಕ್ಷ ಬಹುಮಾನ!

ಪ್ಯಾನ್‍ ಕಾರ್ಡ್‍ ಇಲ್ಲದ ಕಾರಣ ಬಿಗ್ ಬಾಸ್-4 ವಿಜೇತ ಪ್ರಥಮ್ ಗೆ 50 ಲಕ್ಷ ರೂ. ಇನ್ನೂ ಕೈ ಸೇರಿಲ್ಲ. ಈ ವಿಷಯವನ್ನು ಸ್ವತಃ ಪ್ರಥಮ್ ಅವರೇ ಹೇಳಿಕೊಂಡಿದ್ದಾರೆ.

ಬಿಗ್‍ಬಾಸ್‍ ವಿಜೇತರಾದ ಬೆನ್ನಲ್ಲೇ ಪ್ರಥಮ್‍, ಬಹುಮಾನ ಮೊತ್ತದಲ್ಲಿ ಬಂದ ಹಣದಲ್ಲಿ ಸೈನಿಕರ ಕಲ್ಯಾಣಕ್ಕೆ ಹಾಗೂ ಊರಿನಲ್ಲಿ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ಬಳಸುವುದಾಗಿ ಘೋಷಿಸಿದ್ದರು. ಆದರೆ ತಿಂಗಳು ಕಳೆದರೂ ಯಾರಿಗೂ  ಹಣ ತಲುಪಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಥಮ್ ಈ ಸ್ಪಷ್ಟನೆ ನೀಡಿದ್ದಾರೆ.

ಮಂಡ್ಯಕ್ಕೆ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಪ್ರಥಮ್‍ ಈ ರೀತಿ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

ನನ್ನ ಕೈಗೆ ದುಡ್ಡು ಬಂದಿಲ್ಲ ಅಂದರೆ ನಾನು ಕೊಡಲು ಹೇಗೆ ಸಾಧ್ಯ. ಪಾನ್‍ ಕಾರ್ಡ್‍ ಮಾಡಿಸಲು ಕೊಟ್ಟಿದ್ದೇನೆ. ಈ ತಿಂಗಳಲ್ಲಿ ಅದು ಕೈ ಸೇರಬಹುದು. ಆಗ ದುಡ್ಡು ಬರುತ್ತದೆ. ಬಂದ ನಂತರ ನಾನು ಕೊಟ್ಟ ಭಾಷೆಯಂತೆ ದಾನ ಮಾಡಲಿದ್ದೇನೆ. ನಾನು ಆ ಬಹುಮಾನ ಮೊತ್ತದಲ್ಲಿ ಒಂದು ರೂ.ವನ್ನೂ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

50 ಲಕ್ಷ ರೂಪಾಯಿ ಇಟ್ಟುಕೊಳ್ಳಲ್ಲ ಎಂದಾಗ ಕೆಲವರು ಈತ ರಾಜಕೀಯಕ್ಕೆ ಹೋಗುತ್ತಾನೆ ಎಂದರು. ಮತ್ತೆ ಕೆಲವರು50 ಲಕ್ಷವನ್ನು ತಾನೆ ಇಟ್ಟುಕೊಂಡಿದ್ದಾನೆ ಎಂದಿದ್ದಾರೆ. ನಿಜ ಏನೆಂದರೆ ನನ್ನ ಬಳಿ ಪಾನ್ ಕಾರ್ಡ್ ಇಲ್ಲದ ಕಾರಣಇದುವರೆಗೂ ನನಗೆ ಬಹುಮಾನದ ಮೊತ್ತವೇ ಬಂದಿಲ್ಲ. ನಾನು ಸ್ವ ಇಚ್ಛೆಯಿಂದ 50 ಲಕ್ಷ ಕೊಡಲುನಿರ್ಧರಿಸಿರುವುದು. ಇಂಥವರಿಗೆ ಕೊಡಬೇಕು ಎಂದು ಲಿಸ್ಟ್ ಕೂಡ ಮಾಡಿದ್ದೇನೆ. ಅವರಿಗೆ ತಲುಪಿಸುವ ವ್ಯವಸ್ಥೆ ಕೂಡಮಾಡುತ್ತೇನೆ.

ರಾಜಕೀಯಕ್ಕೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಾಲಿಟಿಕ್ಸ್ ಕಲಿಯಲು ನನಗೆ 10 ವರ್ಷನಾದರೂಬೇಕು. ನನಗೂ ರಾಜಕೀಯಕ್ಕೆ ದೂರದ ಮಾತು ಎಂದರು. ಡಬ್ಬಿಂಗ್ ಗೆ ವಿರೋಧ ವ್ಯಕ್ತಪಡಿಸಿದ ಪ್ರಥಮ್, ಡಬ್ಬಿಂಗ್ಅನ್ನೊದು ಏಡ್ಸ್ ಗಿಂತಲೂ ದೊಡ್ಡ ರೋಗ. ಡಬ್ಬಿಂಗ್ ವಿಷಯದಲ್ಲಿ ಈಗಾಗಲೇ ಕನ್ನಡಿಗರು ತೀರ್ಮಾನತೆಗೆದುಕೊಂಡಿದ್ದಾರೆ. ನನಗೆ ಈಗಾಗಲೇ 5 ಸಿನಿಮಾಗಳಲ್ಲಿ ನಾಯಕನಾಗಿ ನಟಿಸೋ ಅವಕಾಶ ಸಿಕ್ಕಿದೆ. ನನ್ನಮೊದಲ ಸಿನಿಮಾದ ಪೂಜೆ ಸಿದ್ದಗಂಗಾಮಠದಿಂದಲೇ ಆರಂಭವಾಗಿದೆ ಎಂದರು.