ಪ್ರಥಮ್, ಸಂಜನಾ ಮತ್ತು ಭುವನ್-ರ ಪ್ರೇಮಲೀಲೆ ಚಿತ್ರವಾಗಿ ಬರುತ್ತಿದೆ!!

0
640

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎಲ್ಲರ ಚಿತ್ತವನ್ನು ಕದ್ದು, ನಾಲ್ಕನೇ ಆವೃತ್ತಿ ಬಿಗ್ ಬಾಸ್ ನ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಹಾಗೂ ಸಂಜನಾ ಮತ್ತು ಭುವನ್ ಮೂರು ಜನ ಪ್ರೇಮಕಹಾನಿ ತೆರೆಯ ಮೇಲೆ ಬರಲಿದೆ.

ಬಿಗ್ ಬಾಸ್ ವಿನ್ನರ್ ಪ್ರಥಮ್, ಸಂಜನಾ ಹಾಗೂ ಭುವನ್ ಅವರೇ ಕಲರ್ಸ್ ಕನ್ನಡದಲ್ಲಿ ಬರುವ `ಸಂಜು ಮತ್ತು ನಾನು’ ಎಂಬ ಶಿರ್ಷಿಕೆಯಡಿ ಶೋ ನಡೆಯಲಿದೆ. ಕಾಲ್ಪನಿಕ ಶೋ ಎಲ್ಲರನ್ನು ರಂಜಿಸಲು ವಾರಾಂತ್ಯದಲ್ಲಿ ನಿಮ್ಮ ಮುಂಧೆ ಬರಲಿದೆ. ಸಣ್ಣ ಪ್ರಯೋಗಾತ್ಮಕ ಪ್ರಯತ್ನ ಇದಾಗಿದ್ದು, ಈ ಬಗ್ಗೆ ಕಲರ್ಸ್ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್ ಬುಕ್ ನಲ್ಲಿ ಖಚಿತ ಪಡಿಸಿದ್ದಾರೆ.

ಈ ಬಗ್ಗೆ ಪ್ರಥಮ್ ಅವರು ಸಹ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಹೊಸ ಲುಕ್ ಫೋಟೋ ಫೋಸ್ಟ್ ಮಾಡಿದ್ದರು. ಅಲ್ಲದೆ ನೂತನ ಕಾರ್ಯಕ್ರಮಕ್ಕೆ ಕೇಶ ವಿನ್ಯಾಸವನ್ನು ಬದಲಿಸಿಕೊಂಡಿದ್ದಾಗಿ ಪ್ರಥಮ್ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಏನನನ್ನು ಸುಳಿವ ಕೊಡದ ತಂಡ ಈ ವಾರಾಂತ್ಯದಲ್ಲಿ 24 ಕಂತುಗಳಲ್ಲಿ ಬರಲಿದೆ ಎಂದು ತಿಳಿಸಿದೆ.

ಪ್ರಥಮ್, ಸಂಜನಾ ಮತ್ತು ಭುವನ್

ಈ ಮೂವರು ನಾಲ್ಕನೇ ಆವೃತ್ತಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ಖ್ಯಾತ ನಾಮರು. ಪ್ರಥಮ್ ಸಂಜನಾ ಅವರನ್ನು ಪ್ರೀತಿಸು.. ಪ್ರೀತಿಸು ಎಂದು ಬಿಗ್ ಬಾಸ್ ನಲ್ಲಿ ಕಾಲೆಳೆಯುತ್ತಿದ್ದರು. ಇದಕ್ಕೆ ಸೊಪ್ಪು ಹಾಕದ ಸಂಜನಾ ತಮ್ಮ ಕಾರ್ಯ ಮಾಡಿಕೊಂಡಿದ್ದರು. ಬಿಗ್ ಬಾಸ್ ಮುಗಿದ ಮೇಲೂ ಈ ಇಬ್ಬರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಆದರೆ ಈ ಮೂವರು ಅವುಗಳಿಗೆ ತಲೆ ಕೆಡಿಸಿಕೊಳ್ಳದೆ ತಾವು ಒಪ್ಪಿಕೊಂಡ ಕಾರ್ಯಕ್ರಮದಲ್ಲಿ ಬ್ಯೂಸಿ ಆಗಿದ್ದರು.