ದೇಶದ ಪರಿಸ್ಥಿತಿ ಬಗ್ಗೆ ಬಾಲ ಜ್ಯೋತಿಷಿ ಅಭಿಗ್ಯಾ ಆನಂದ್ ನುಡಿದ ಭವಿಷ್ಯ ಸುಳ್ಳು? ಈ ಕುರಿತು ಸೌರಬ್ ದ್ವಿವೇದಿ ಹೇಳಿರುವ ಸತ್ಯಾವಲೋಕನ ಏನು.?

0
223

ಕೊರೊನಾ ಸಂಬಂಧಪಟ್ಟಂತೆ ದೇಶದಲ್ಲಿ ಹಲವು ಊಹಾಪೋಹಗಳು ಹರಿದಾದುತ್ತಿದ್ದರೆ, ಕೆಲವು ನಿಜ ಸಂಗತಿಗಳು ಹರಿದಾಡುತ್ತಲೇ ಇವೇ ಅದರಲ್ಲಿ ಜೋತಿಷ್ಯಗಳು ಮತ್ತು ದೇವರ ಕಾಣಿಕಗಳು ಕೂಡ ಸಾಕಷ್ಟು ವೈರಲ್ ಆಗಿವೆ. ಅದರಂತೆ ದೆಶ್ಯಾದಂತ ಪ್ರಶಿದ್ಧವಾದ ಬಾಲಕನೊಬ್ಬ ನುಡಿದಿರುವ ಭವಿಷ್ಯ, ಸಾಮಾಜಿಕ ತಾಣದಲ್ಲಿ ಭಾರೀ ಸದ್ದನ್ನು ಮಾಡಿತ್ತು, ಏಕೆಂದರೆ ಕೊರೊನಾ ಕುರಿತು ಹರಡಿರುವ ಕೆಲವು ಮಾತುಗಳು ದೆಶ್ಯಾದಂತ ಆತಂಕ ಮತ್ತು ಎಚ್ಚರಿಕೆ ನೀಡಿದ್ದವು, ಅದರಂತೆ ಏಪ್ರಿಲ್ 2019ರಲ್ಲೇ ಇಂತಹ ಮಾರಣಾಂತಿಕ ಕಾಯಿಲೆಯಿಂದ, ಮುಂದೆ ಜಗತ್ತಿಗೆ ವಿಪತ್ತು ಕಾದಿದೆ” ಎಂದು ಈ ಹಿಂದೆ ತಾನು ನುಡಿದಿದ್ದ ವಿಡಿಯೋವನ್ನು ಈ ಬಾಲಕ ಯೂಟ್ಯೂಬ್ ನಲ್ಲಿ ಶೇರ್ ಮಾಡಿಕೊಂಡಿದ್ದ. ಆದರೆ ಇದೆಲ್ಲ ಸುಳ್ಳಾಯಿತಾ ಎನ್ನುವ ಚರ್ಚೆಗಳು ಶುರುವಾಗಿದೆ.

ಬಾಲ ಜ್ಯೋತಿಷಿ ನುಡಿದ ಭವಿಷ್ಯದ ಸುಳ್ಳಾ?

ಹೌದು ಏಪ್ರಿಲ್ 2019ರಲ್ಲೇ ಇಂತಹ ಮಾರಣಾಂತಿಕ ಕಾಯಿಲೆಯಿಂದ ಜಗತ್ತಿಗೆ ವಿಪತ್ತು ಕಾದಿದೆ ಎಂದಿರುವ ಈ ಬಾಲಕ, ಮುಂದಿನ ಐದು ದಿನ ಅಂದರೆ ಮಾರ್ಚ್ 29 ರಿಂದ ಏಪ್ರಿಲ್ 2ರವರೆಗೆ ಜನತೆ ತುಂಬಾ ಜಾಗರೂಕತೆಯಿಂದ ಇರಬೇಕೆಂದು ಹೇಳಿದ್ದಾನೆ. ಕೊರೊನಾ ವೈರಾಣಿನ ಭವಿಷ್ಯ ತುಂಬಾ ದಿನ ಇರುವುದಿಲ್ಲ ಎಂದು ಹಲವು ಜ್ಯೋತಿಷಿಗಳು ಹೇಳಿದ್ದರೂ, ಇದ್ದಷ್ಟು ದಿನ ಅದು ಎಷ್ಟು ಜನರನ್ನು ಬಲಿ ತೆಗೆದುಕೊಳ್ಳಲಿದೆ ಎನ್ನುವುದು ಆತಂಕ ತರುವ ವಿಚಾರವಾಗಿತ್ತು, ಅದರಂತೆ ಹಲವು ರಾಶಿಗಳು ತಮ್ಮ ಪಥವನ್ನು ಬದಲಿಸಲಿದೆ. ಹಾಗಾಗಿ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಳೆಯಿಂದ (ಮಾ 29) ಮುಂದಿನ ಐದು ದಿನ, ಈ ಅವಧಿಯಲ್ಲಿ ಜನರು ವಿಶೇಷ ಎಚ್ಚರಿಕೆಯಿಂದ ಇರುವುದು ಸೂಕ್ತ ಎಂದು ಬಾಲ ಜ್ಯೋತಿಷಿ ಅಭಿಗ್ಯಾ ಅಭಿಪ್ರಾಯ ಪಟ್ಟಿದ್ದರು.

ಅದರಂತೆ ಈಗ ಹರಡಿರುವ ವಿಚಾರದಂತೆ ಬಾಲ ಜೋತಿಷಿ ಹೇಳಿರುವುದು ಸುಳ್ಳಾಯಿತು ಎನ್ನಲಾಗುತ್ತಿದೆ. ಈ ಕುರಿತು ಅಭಿಗ್ಯಾ ನುಡಿದ ಭವಿಷ್ಯದ ಬಗ್ಗೆ ಸೌರಬ್ ದ್ವಿವೇದಿ ಎನ್ನುವವರು ಸತ್ಯಾವಲೋಕನ ಮಾಡಿರುವ ವಿಡಿಯೋ ಒಂದನ್ನು ಸಾಮಾಜಿಕ ತಾಣದಲ್ಲಿ ಬಿಟ್ಟಿದ್ದಾರೆ. ಅದರಂತೆ ಅಭಿಗ್ಯಾ ಭವಿಷ್ಯದ ಸತ್ಯಾಸತ್ಯತೆ ಹೇಗಿದೆ ಅದರಲ್ಲಿ ಏನಿದೇ ಎನ್ನುವುದು ಇಲ್ಲಿದೆ ನೋಡಿ. “ನವೆಂಬರ್ 2019 ರಿಂದ ಏಪ್ರಿಲ್ 2020ರ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ನಡೆಯುತ್ತದೆ ಎಂದು ಬಾಲ ಜ್ಯೋತಿಷಿ ಅಭಿಗ್ಯಾ ಹೇಳಿದ್ದ.

ಆದರೆ, ಎರಡು ದೇಶಗಳ ನಡುವೆ ಯುದ್ದ ನಡೆದಿಲ್ಲ. ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮತ್ತು ಇನ್ನೊಂದು ವಿಚಾರ ಎಂದರೆ ಗಡಿ ಉಲ್ಲಂಘನೆಯ ಹಲವು ಘಟನೆಗಳು ನಡೆದಿದ್ದರೂ, ಇದೇನು ಹೊಸದೇನೂ ಅಲ್ಲ” ಎಂದು ಸೌರಬ್ ದ್ವಿವೇದಿ ಹೇಳಿದ್ದಾರೆ. ಅಷ್ಟೇ ಅಲ್ಲದೆ “ಪ್ರಪಂಚದಲ್ಲಿ ದೃಷ್ಟರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂತಹ ಕೆಟ್ಟ ದಿನಗಳು ಎದುರಾಗುತ್ತವೆ. ರಾಮಕೃಷ್ಣನ ಸ್ಮರಣೆಯಿಂದ ವೈರಾಣು ದೂರವಾಗುತ್ತದೆ ಎಂದು ಜ್ಯೋಷಿ ಹೇಳಿರುವುದನ್ನು ಉಲ್ಲೇಖಿಸಿರುವ ಸೌರಬ್, “ಆಸ್ತಿಕ, ನಾಸ್ತಿಕದ ವಿಚಾರ ಇದಲ್ಲ. ಈ ವೇಳೆ, ವೈರಾಣು ನಾಶ ಮಾಡುವುದಕ್ಕೆ ಲಸಿಕೆಯ ಅವಶ್ಯಕತೆಯಿದೆಯೇ ಹೊರತು ದೇವರ ಸ್ಮರಣೆ ಮುಖ್ಯವಾಗುವುದಿಲ್ಲ. ಎನ್ನುವುದು ದೇಶದ ಜನರು ಅರಿಯುವ ವಿಚಾರವಾಗಿದೆ.