20ನೇ ಬಾರಿ ಗರ್ಭಿಣಿಯಾದ 38 ವರ್ಷದ 16 ಮಕ್ಕಳ ಮಹಾತಾಯಿ; ಇದೇನಾ ಕುಟುಂಬ ಯೋಜನೆಯ ಅಂದ್ರೆ??

0
205

ಈಗಿನ ಕಾಲದಲ್ಲಿ ಒಂದೇ ಮಗುವಿಗೆ ಜನ್ಮ ನೀಡುವುದೇ ದೊಡ್ಡ ಸಾಹಸವಾಗಿದೆ. ಅದರಂತೆ ಸರ್ಕಾರವು ಕೂಡ ಒಂದು ಅಥವಾ ಎರಡು ಮಕ್ಕಳು ಸಾಕು ಎಂದು ಹೇಳುತ್ತಿದೆ. ಅದರಲ್ಲಿ ಮಹಿಳೆಯರು ಕೂಡ ಒಂದು ಮಗು ಮಾಡಿಕೊಳ್ಳುವಲ್ಲಿ ಹಲವು ತೊಂದರೆಗಳಿಗೆ ಒಳಗಾಗಿ. ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಕಾಲದಲ್ಲಿ ಇಲ್ಲೊಬ್ಬರು ಮಹಿಳೆ ಬರೋಬರಿ 20 ನೇ ಭಾರಿಗೆ ಗರ್ಭಿಣಿಯಾಗಿ ದಾಖಲೆ ಮಾಡಿದ್ದಾಳೆ. ಇದರಲ್ಲಿ ವಿಶೇಷ ವೆಂದರೆ 20 ನೇ ಹೆರಿಗೆಗೆ ಆಸ್ಪತ್ರೆ ಬಂದಿದ್ದಾಳೆ ಈ ಹಿಂದೆ ಆದ ಎಲ್ಲ ಡಿಲಿವರಿಗಳು ಮನೆಯಲ್ಲಿಯೇ ಆಗಿವೆ ಅಂತೆ.

ಸಂಧರ್ಬಿಕ ಚಿತ್ರ

Also read: ಇನ್ಮುಂದೆ ಚಪ್ಪಲಿ, ಲುಂಗಿ ಹಾಕ್ಕೊಂಡು ಗಾಡಿ ಓಡ್ಸಿದ್ರೂ ಬಿಳ್ಳುತ್ತೆ ದಂಡದ ಜೊತೆಗೆ ಜೈಲು ವಾಸ; ಮೊದಲು ಸಂಪೂರ್ಣ ನಿಯಮ ತಿಳಿದು ವಾಹನ ಹತ್ತಿ..!

20ನೇ ಬಾರಿ ಗರ್ಭಿಣಿ?

ಹೌದು ಮಹಾತಾಯಿ ಒಬ್ಬಳು ಒಂದಲ್ಲ ಎರಡಲ್ಲ 20 ಭಾರಿಗೆ ಗರ್ಭಿಣಿಯಾಗಿ ಆಶರ್ಯ ಮೂಡಿಸಿದ್ದು, ಇದು ದೇಶದಲ್ಲೇ ವಿಶೇಷ ಹೆರಿಗೆ ಎನ್ನಲಾಗುತ್ತಿದೆ. ಏಕೆಂದರೆ ಸರ್ಕಾರ ಮಕ್ಕಳ ನಿಯಂತ್ರಣಕ್ಕೆ ಏನೆಲ್ಲಾ ಯೋಜನೆ ಹಾಕಿಕೊಂಡು ಮನವರಿಕೆ ಮಾಡುತ್ತಿದ್ದರು ಅದ್ಯಾವುದನ್ನು ಲೆಕ್ಕಿಸದೆ ಬರೋಬರಿ 20 ಮಗುವಿಗೆ ಜನ್ಮ ನೀಡಲು ಸಿದ್ದಳಾಗಿದ್ದಾಳೆ. ಇತ್ತೀಚೆಗಷ್ಟೇ ಅಜ್ಜಿಯೊಬ್ಬರು ಮಗುವಿಗೆ ಜನ್ಮ ನೀಡಿದ ಸುದ್ದಿಯನ್ನು ರೆಕಾರ್ಡ್ ಬ್ರೇಕ್ ಮಾಡಿದ ಮಹಿಳೆ ಲಂಕಾಬಾಯಿ ಈವರೆಗೂ 16 ಮಕ್ಕಳಿಗೆ ಜನ್ಮ ನೀಡಿದ್ದು, ಮೂರು ಅರ್ಬಾಷನ್ ಆಗಿದೆ. ಈಗ ಅವರು ಮತ್ತೆ 7 ತಿಂಗಳು ಗರ್ಭಿಣಿ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಲ್ಲದೆ ಪ್ರತಿ ಬಾರಿ ಅವರು ಒಂದು ಮಗುವಿಗೆ ಜನ್ಮ ನೀಡುತ್ತಿದ್ದರು. ಹೀಗೆ ಡೆಲಿವರಿ ಆದ ಕೆಲವೇ ದಿನಗಳಲ್ಲಿ ಅಥವಾ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪುತ್ತಿತ್ತು. ಹೀಗೆ 5 ಮಕ್ಕಳು ಮೃತಪಟ್ಟಿವೆ. ಈಗ ಅವರ 11 ಮಕ್ಕಳು ಬದುಕಿದ್ದಾರೆ. ಲಂಕಾಬಾಯಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಮೂರು ಬಾರಿ ಗರ್ಭಪಾತ ಆಗಿದೆ. 38 ವರ್ಷದಲ್ಲಿ ಅವರು 20ನೇ ಬಾರಿ ಗರ್ಭಿಣಿ ಆಗಿದ್ದಾರೆ ಎಂದು ಬೀಡ್ ಜಿಲ್ಲೆಯ ಸಿವಿಲ್ ಸರ್ಜನ್ ಡಾ. ಅಶೋಕ್ ತೋರಟ್ ತಿಳಿಸಿದ್ದಾರೆ.

Also read: 74ನೇ ವಯಸ್ಸಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಜ್ಜಿಯ ಬಗ್ಗೆ ಓದಿ, ಈ ವಯಸ್ಸಿನಲ್ಲೂ ತಾಯಿಯಾಗುವ ಭಾಗ್ಯ ಕೊಟ್ಟಿದ್ದು ವೈದ್ಯಲೋಕ!!!

ಇದೇ ವೇಳೆ ಮಾತನಾಡಿದ ಮತ್ತೊಬ್ಬ ವೈದ್ಯರು, ಅವರು ಗರ್ಭಿಣಿ ಎಂಬ ವಿಷಯ ತಿಳಿದಾಗ ಮೊದಲು ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಗತ್ಯವಿರುವ ಎಲ್ಲ ಪರೀಕ್ಷೆ ನಡೆಸಿದ್ದೇವೆ. ಸದ್ಯ ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ. ಇದು ಆಸ್ಪತ್ರೆಯಲ್ಲಿ ಮಹಿಳೆಯ ಮೊದಲ ಹೆರಿಗೆ ಆಗಿದ್ದು, ಈ ಹಿಂದೆ ಎಲ್ಲ ಹೆರಿಗೆ ಮನೆಯಲ್ಲೇ ನಡೆದಿತ್ತು. ಆರೋಗ್ಯದ ಅಪಾಯವನ್ನು ತಪ್ಪಿಸಲು ಎರಡು ತಿಂಗಳಲ್ಲಿ ನಿಗದಿಯಾದ ಹೆರಿಗೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಆಕೆ ಇದೇ ಮೊದಲ ಬಾರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರಂತೆ! ಇದುವರೆಗೂ ಆದ ಹೆರಿಗೆಯೆಲ್ಲವೂ ಆಕೆಯ ಮನೆಯಲ್ಲೇ ಆಗಿದ್ದು ಎನ್ನುತ್ತಾರೆ ವೈದ್ಯರು! ಕೂಲಿ ಕೆಲಸಕ್ಕಾಗಿ ಒಂದಿಲ್ಲೊಮದು ಪ್ರದೇಶಗಳಿಗೆ ಓಡಾಡುತ್ತಿರುವ ಬಡ ಸಮುದಾಯದ ಮಹಿಳೆಯಾಗಿದ್ದು, ಆಧುನಿಕ ಔಷಧಗಳು, ಗರ್ಭಧರಿಸದೆ ಇರಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು, ಮತ್ತು ಅಗತ್ಯ ಔಷಧಗಳನ್ನು ಕೊಳ್ಳಲು ಹಣವೂ ಇಲ್ಲದ ಕಾರಣ ಅವರು ಇಪ್ಪತ್ತನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎನ್ನುತ್ತಾರೆ ಸ್ಥಳೀಯ ವೈದ್ಯರು.