ನಿಮಗೆ ಗೊತ್ತಿರುವ ಗರ್ಭಿಣಿಯರಿಗೆ ತಪ್ಪದೆ ಇದನ್ನು ಓದಲು ಹೇಳಿ!!

0
2716

Kannada News | Health tips in kannada

ಗರ್ಭಿಣಿಯರಲ್ಲಿ ಆಹಾರ ಸೇವನೆ

ಮಗು ಜನಿಸಿದ ನಂತರ ಬೊಜ್ಜು ಬೆಳೆಯುವ ಆತಂಕ ಕೆಲವು ಗರ್ಭಿಣಿಯರಲ್ಲಿ ತಿನ್ನುವ ಬಾಯಿಚಪಲಕ್ಕೆ ಕಡಿವಾಣ ಹಾಕುತ್ತದೆ. ಇಂಥ ಆತಂಕಗಳನ್ನು ದೂರವಿರಿಸಿ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸೇವಿಸುವ ಪ್ರಮಾಣಕ್ಕೆ ಮಿತಿ ಹೇರಿಕೊಳ್ಳದೆ ಖುಷಿಖುಷಿಯಾಗಿ ಸೇವಿಸಿ ಎನ್ನುವ ಸಲಹೆ ನೀಡಿದ್ದಾರೆ ಬರ್ಲಿನ್‍ನ ವೈದ್ಯಶಾಸ್ತ್ರಜ್ಞರು.ಗರ್ಭಿಣಿಯರಲ್ಲಿ ತೂಕ ಹೆಚ್ಚಾಗುವಿಕೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿರುವ ಬರ್ಲಿನ್ ಚಾರಿಟಿ ವಿಶ್ವವಿದ್ಯಾಲಯದ ವೈದ್ಯರು ತೂಕದ ಬಗ್ಗೆ ಕಾಳಜಿವಹಿಸದೆ ಹೆಚ್ಚೆಚ್ಚು ತಿನ್ನುವಂತೆ ಗರ್ಭಿಣಿಯರಿಗೆ ಸಲಹೆ ನೀಡಿದ್ದಾರೆ.

watch :

ಅಮೆರಿಕಾದಲ್ಲಿ ಮೊದಲ ಬಾರಿಗೆ ಗರ್ಭಧರಿಸಿದ ಮಹಿಳೆಯರು ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರಂತೆ. ಇದು ಹಿಂದಿನ ದಿನಗಳಿಗೆ ಹೋಲಿಸಿದರೆ ಆಧುನಿಕ ಗರ್ಭಿಣಿಯರಲ್ಲಿ ತೂಕ ಹೆಚ್ಚಿಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆಯಾಗಿ ಜಾರಿಯಲ್ಲಿದೆ. ಜರ್ಮನಿ ಮಹಿಳೆಯರಿಗೆ ಹೋಲಿಕೆ ಮಾಡಿದರೆ ತೂಕ ಜಾಸ್ತಿ ಮಾಡಿಕೊಳ್ಳುವುದರಲ್ಲಿ ಅಮೆರಿಕಾ ಮಹಿಳೆಯರೇ ಮುಂದಿದ್ದಾರಂತೆ. ಗರ್ಭದಲ್ಲಿರುವ ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ತೂಕ ಅಧಿಕವಾಗುವ ಬಗ್ಗೆ ತಲೆಕೆಡಿಸಿಕೊಳ್ಳದೆ ಪೌಷ್ಟಿಕ ಆಹಾರ ಸೇವನೆಯತ್ತ ಆದ್ಯತೆ ನೀಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮಗು ಜನಿಸಿದ ನಂತರ ಸ್ಥೂಲಕಾಯದಿಂದ ತಮ್ಮ ದೇಹ ಸೌಂದರ್ಯ ಕಡಿಮೆಯಾಗುವ ಮನೋಭಾವ ಹೊಂದಿದ್ದರೆ ಕೂಡಲೇ ಅದನ್ನು ಮರೆತು ರುಚಿರುಚಿಯಾದ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವಂತ ಮಗುವಿನ ಜನನಕ್ಕೆ ಅನುವು ಮಾಡಿಕೊಡಿ ಎಂದು ವೈದ್ಯರು ಗರ್ಭಿಣಿಯರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಮಹಿಳೆಯರಲ್ಲಿ ಹೃದಯಾಘಾತ

ಆಘಾತಕಾರಿ ಘಟನೆಗಳು, ಮನಸ್ಸಿಗೇ ನೋವು ತರುವ ಸನ್ನಿವೇಶಗಳಿಗೆ ಓರ್ವ ಮಹಿಳೆ ಸಾಕ್ಷಿಯಾಗಿದ್ದಾರೆ. ಆಕೆ ಮುಂಬರುವ ಹೃದಯಾಘಾತ, ಪಾಶ್ರ್ವವಾಯುವಿನಂತಹ ಆರೋಗ್ಯ ಸಮಸ್ಯೆಗೆ ತುತ್ತಾಗುವುದು ಗ್ಯಾರಂಟಿ ಎಂದಿದೆ ವೈದ್ಯಕೀಯ ವರದಿ.ಹೌದು! ಆಕಸ್ಮಿಕ ಇಲ್ಲವೇ ಅನಿರೀಕ್ಷಿತವಾಗಿ ಸಂಭವಿಸುವ ಘಟನೆಗಳು ಇಲ್ಲವೇ ಆ ಘಟನೆಯ ನೆನಪುಗಳು ಮಹಿಳೆಯರಲ್ಲಿ ಮರುಕಳಿಸುತ್ತಿದ್ದರೆ ಅಂಥವರಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಅಧಿಕ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ಪ್ರಕರಣಗಳು, ಘಟನೆಗಳು ಪುನಾರವರ್ತನೆ ಆದಲ್ಲಿ ಆಕೆ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಶೇ.60ರಷ್ಟು ಇರುತ್ತದೆ ಎಂದು ವಿವಿ ವೈದ್ಯರು ದೃಢಪಡಿಸಿದ್ದಾರೆ.

Also read: ಗೊರಕೆ ಹೊಡೆಯುವ ಸಮಸ್ಯೆಯಿಂದ ಹೊರಬರಲು ಆಸ್ಪತ್ರೆಗಳಿಗೆ ಅಲಿಯುವ ಬದಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…!!