ಯುವಕ ಯುವತಿಯರೇ ಎಚ್ಚರೇ, ನಿಮಗೆ ಈ ಅಭ್ಯಾಸಗಳು/ಖಾಯಿಲೆ ಇದ್ದರೆ ಮುಂದೆ ನಿಮಗೆ ಮಕ್ಕಳಾಗುವ ಸಂಭವ ಇರುವುದಿಲ್ಲ..!!

0
3567

Health Tips In Kannada | Kannada News

ಮದುವೆಯಾದ ಪ್ರತಿ ಹೆಣ್ಣು ಬಯಸುವುದು ತಾಯ್ತನ. ತಾಯಿಯಾಗಬೇಕೆಂದು ಪ್ರತಿ ಹೆಣ್ಣು ಬಯಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಕೆಲವರು ಎಷ್ಟೇ ಪ್ರಯತ್ನಿಸಿದರೂ ಸಂತಾನಭಾಗ್ಯ ಸಿಗುತ್ತಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಸದ್ಯಕ್ಕೆ ಈಗಿನ ಫಾಸ್ಟ್ ದುನಿಯಾದಲ್ಲಿ ಸಮಯ ಸಹ ಇಲ್ಲ. ಇದರಿಂದ ಗರ್ಭವನ್ನು ಪೋಸ್ಟ್ ಪೋನ್ ಮಾಡಿಕೊಳ್ಳುತ್ತಿದ್ದಾರೆ ಸಾಕಷ್ಟು ಮಂದಿ.

ಈ ರೀತಿ ಪ್ರತಿ ಸಲ ಮುಂದೂಡುವುದರಿಂದ ಸಹ ತೊಂದರೆಗಳು ಬರುತ್ತಿರುತ್ತವೆ. ಆದರೆ ಕಲವರು ಎಷ್ಟೇ ಪ್ರಯತ್ನಿಸಿದರೂ ಗರ್ಭ ಧರಿಸುತ್ತಿಲ್ಲ, ತಮ್ಮಲ್ಲೇ ಏನೋ ಲೋಪ ಇದೆ ಎಂದು ನೋವನುಭವಿಸುತ್ತಿರುತ್ತಾರೆ. ಈ ರೀತಿ ಗರ್ಭ ಧರಿಸದೆ ಇರಲು ಕಾರಣಗಳೇನಿರಬಹುದು? ಯಾಕೆ ಗರ್ಭಿಣಿಯಾಗುತ್ತಿಲ್ಲ? ಎಂಬುದನ್ನು ಈಗ ತಿಳಿದುಕೊಳ್ಳೋಣ. ಗರ್ಭ ಧರಿಸದೆ ಇರುವುದರ ಹಿಂದೆ ಪುರುಷರು, ಮಹಿಳೆಯರು ಇಬ್ಬರೂ ಕಾರಣರಾಗಬಹುದು. ಅಥವಾ ವಾತಾವರಣ ಪರಿಸ್ಥಿತಿಗಳು ಅಂದರೆ ಮಾಲಿನ್ಯ ಇತರೆ ಆಹಾರದ ಅಭ್ಯಾಸಗಳು ಸಹ ಒಂದು ಕಾರಣ ಆಗಿರಬಹುದು. ಇತ್ತೀಚೆಗೆ ನಡೆದ ಸಂಶೋಧನೆ ಪ್ರಕಾರ ಗರ್ಭಿಣಿಯಾಗದಿರಲು ಕೆಲವು ಪ್ರಮುಖ ಕಾರಣಗಳನ್ನು ಕಂಡುಹಿಡಿದಿದ್ದಾರೆ.. ಅವು ತುಂಬಾ ಇಂಟರೆಸ್ಟಿಂಗ್ ಆಗಿ ಇವೆ. ಏನೆಂದರೆ..

ಮಕ್ಕಳಾಗದಿರಲು ಕಾರಣ ಯಾರು?

 • ಮಹಿಳೆಯರು ಶೇ.33
 • ಪುರುಷರು ಶೇ.33
 • ಇತರೆ ಕಾರಣಗಳು ಶೇ.34

ಗರ್ಭ ಧರಿಸುವ ಅವಕಾಶಗಳು:

 • ಮದುವೆಯಾದ ಐದಾರು ತಿಂಗಳಲ್ಲಿ ಗರ್ಭ ಧರಿಸುವ ಅವಕಾಶ ಶೇ.50
 • ವರ್ಷದೊಳಗಾದರೆ ಶೇ.75
 • ಎರಡು ವರ್ಷಗಳ ಒಳಗೆ ಶೇ.85ರಿಂದ 90

ಪುರುಷರಲ್ಲಿ ಸಂತಾನಹೀನತೆಗೆ ಕಾರಣಗಳು

 • ಧೂಮಪಾನ, ಮದ್ಯಪಾನ
 • ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ಹೆಚ್ಚು ವಾಹನ ಸವಾರಿ.
 • ವೃಷಣಗಳಿಗೆ ಉಷ್ಣತೆ ಹೆಚ್ಚಾಗುವ ಉದ್ಯಮಗಳಲ್ಲಿ ಕೆಲಸ ಮಾಡುವುದು.
 • ವೃಷಣಗಳಿಗೆ ಶಸ್ತ್ರಚಿಕಿತ್ಸೆ, ಹರ್ನಿಯಾ ಚಿಕಿತ್ಸೆ ಆಗಿರುವುದು.
 • ಲೈಂಗಿಕ ಕಾಯಿಲೆಗಳು ಇರುವುದು.

ಮಹಿಳೆಯರಲ್ಲಿ ಕಾರಣಗಳು:

 • ವಯಸ್ಸು 18-36 ವಯಸ್ಸಿನಲ್ಲಿಇರುವವರಿಗೆ ಗರ್ಭ ಧರಿಸಲು ಸೂಕ್ತ ವಯಸ್ಸು.
 • 18ರೊಳಗೆ ಮತ್ತು 34 ಮೀರಿದರಿಗೆ ಅಂಡಾಶಯ ಸಮಸ್ಯೆಗಳು ಹೆಚ್ಚು.
 • ಫೆಲೋಪಿಯನ್ ನಾಳಗಳಲ್ಲಿ ಅಡ್ಡಿ ಇದ್ದರೂ ಗರ್ಭ ಧರಿಸಲು ಸಾಧ್ಯವಿಲ್ಲ.
 • ನಿಯಮಿತವಲ್ಲದ ಮುಟ್ಟು
 • ಪೆಲ್‌ವಿಕ್ ಸೋಂಕು
 • ಟಿ.ಬಿ (ಕ್ಷಯ) ದಂತಹ ಕಾಯಿಲೆಗಳು
 • ಧೂಮಪಾನ, ಮದ್ಯಪಾನ ಸೇವನೆ.
 • ಅಂಡಾಶಯ ಸಮಸ್ಯೆಗಳು.

ನೋಡಿದಿರಲ್ಲವೇ. ಮೇಲಿನ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಪರಿಹರಿಸಲಾಗದ್ದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದರೆ ಪ್ರತಿಫಲ ಸಿಗಬಹುದು. ಏನಂತೀರಾ?

Also Read: ಕುಂಬಳಕಾಯಿ ಬೀಜದ ಅರೋಗ್ಯ ಗುಣಗಳ ಬಗ್ಗೆ ತಿಳಿದುಕೊಂಡ ಮೇಲೆ, ನೀವು ಎಂದಿಗೂ ಕುಂಬಳಕಾಯಿ ಬೀಜಗಳನ್ನು ಬಿಸಾಡೋದೇ ಇಲ್ಲ!