ಇನ್ನು ಮುಂದೆ ವಿದ್ಯುತ್ ಬಳಕೆಗೂ ಮೊದಲೇ ರಿಚಾರ್ಜ್; ಶೀಘ್ರದಲ್ಲೇ ಬೆಸ್ಕಾಂ ವ್ಯಾಪ್ತಿಯ ನಗರಸಭೆಗಳು ಹಾಗೂ ಗ್ರಾಮಪಂಚಾಯಿತಿಗಳಲ್ಲಿ ನಿಯಮ ಜಾರಿ..

0
1350

ಕೇಂದ್ರ ಸರ್ಕಾರವು ದೇಶಾದ್ಯಂತ ಜಾರಿಗೆ ತಂದಿರುವ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ನಿಯಮವನ್ನು 2019ರ ಏಪ್ರಿಲ್‌ 1ರಿಂದ ಕಡ್ಡಾಯ ಮಾಡಿ ನಿರ್ಧಾರ ಹೊರಡಿಸಿದೆ. ಅದರಂತೆ ಬಹುದಿನಗಳಿಂದ ನೆನೆಗುಂದಿಗೆ ಬಿದಿದ್ದ ವಿದ್ಯುತ್ ಶುಲ್ಕ ಪಾವತಿಗೆ ಸಂಬಧಿಸಿದಂತೆ ವಿವಾದ ಈಗ ಹೊಸ ರೂಪದಲ್ಲಿ ಬಳಕೆದಾರರಿಗೆ ಸಿಗಲಿದೆ. ಇದರಿಂದ ಬಿಲ್ ಪಾವತಿ ವಿಳಂಬದ ಗದ್ದಲಗಳು ಪರಿಹಾರವಾಗಲಿದೆ. ಇಂತಹದೊಂದು ಮಹತ್ವದ ಸುಧಾರಿತ ನಿಯಮವನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಶೀಘ್ರವಾಗಿ ಜಾರಿ ಮಾಡಲಿದೆ.

Also read: ನಮ್ಮ ಸೈನಿಕರ ಸುರಕ್ಷತೆಗೆ ಅಂತ ಕೇಂದ್ರ ಸರ್ಕಾರ ಹೊಸ ವಾಹನ ಪರಿಚಯಿಸಿದೆ; ಬಾಂಬ್ ಬಿದ್ದರೂ ಅಳುಕದ ಈ ವಾಹನದ ವಿಶೇಷತೆ ಹೇಳ್ತೀವಿ ಓದಿ!!

ಏನಿದು ರಿಚಾರ್ಜ್ ವಿದ್ಯುತ್?

ಹೌದು ಬೆಸ್ಕಾಂ ವ್ಯಾಪ್ತಿಯ ನಗರಸಭೆಗಳು ಹಾಗೂ ಗ್ರಾಮಪಂಚಾಯಿತಿ ಸೇರಿದಂತೆ ಪ್ರತಿಯೊಂದು ಸ್ಥಳೀಯ ಸಂಸ್ಥೆಯೂ ಇನ್ನು ಮುಂದೆ ವಿದ್ಯುತ್‌ ಬಳಕೆ ಮಾಡುವ ಮೊದಲೇ ಬೆಸ್ಕಾಂಗೆ ವಿದ್ಯುತ್‌ ಶುಲ್ಕ ಪಾವತಿಸಬೇಕು! ಇದರಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಕೆ ಮಾಡುವ ಬೀದಿ ದೀಪಗಳು ಹಾಗೂ ಕುಡಿಯುವ ನೀರು ಸರಬರಾಜು ಮಾಡಲು ಪಡೆಯುವ ವಿದ್ಯುತ್‌ ಸಂಪರ್ಕಗಳಿಗೆ ಇನ್ನು ಮುಂದೆ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಲು ಬೆಸ್ಕಾಂ ಮುಂದಾಗಿದೆ.

ಈ ನಿಯಮ ಜಾರಿಗೆ ತರಲು ಕಾರಣ?

ಬೆಸ್ಕಾಂಗೆ ನಿಗದಿತ ದಿನಾಂಕದಲ್ಲಿ ಸ್ಥಳೀಯ ಸಂಸ್ಥೆಗಳು ವಿದ್ಯುತ್‌ ಶುಲ್ಕ ಪಾವತಿಸುವುದಿಲ್ಲ. ಹೀಗಾಗಿ ಕೋಟ್ಯಂತರ ರು. ಶುಲ್ಕ ಪಾವತಿ ಬಾಕಿ ಉಳಿದುಕೊಂಡಿದೆ. ಇದನ್ನು ಸಮರ್ಪಕವಾಗಿ ವಸೂಲಿ ಮಾಡಲು ಅನುವಾಗುವಂತೆ ಪ್ರಿಪೇಯ್ಡ್‌ ಮೀಟರ್‌ ಅಳವಡಿಕೆ ಮಾಡಲಾಗುವುದು. ಬಿಬಿಎಂಪಿ ಸೇರಿದಂತೆ ಎಲ್ಲಾ ಸಂಸ್ಥೆಗಳೂ ಮೊದಲು ವಿದ್ಯುತ್‌ ಶುಲ್ಕ ಪಾವತಿಸಿ ರೀಚಾರ್ಚ್ ಮಾಡಿಸಿಕೊಳ್ಳಬೇಕು. ರೀಚಾಜ್‌ರ್‍ ಮಾಡಿಕೊಂಡಿರುವ ಮೊತ್ತ ಇರುವವರೆಗೆ ವಿದ್ಯುತ್‌ ಪೂರೈಕೆಯಾಗುತ್ತದೆ. ರೀಚಾಜ್‌ರ್‍ ಹಣ ಮುಗಿದ ಬಳಿಕ ತನ್ನಿಂದ ತಾನೇ ವಿದ್ಯುತ್‌ ಸಂಪರ್ಕ ಕಡಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಿಯಮ ಎಲ್ಲಲ್ಲಿ ಜಾರಿ?

ನೂತನವಾಗಿ ಜಾರಿಗೆ ಬರುತ್ತಿರುವ ಬೆಸ್ಕಾಂನ ನಿಯಮ ಜಾರಿಗೆ ಬಂದರೆ ಇದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ ಭಾಗದ ಎಲ್ಲಾ ನಗರ ಸಭೆ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲೂ ಶುಲ್ಕ ಪಾವತಿಸದೆ ವಿದ್ಯುತ್‌ ಪಡೆಯಲಾಗದ ಮಾದರಿ ಅನ್ವಯವಾಗಲಿದೆ. ಈ ನಿಯಮ ಕುರಿತು ಬೆಸ್ಕಾಂನ ಉನ್ನತ ಅಧಿಕಾರಿಗಳು ಮಾತನಾಡಿದ್ದು ಬೆಸ್ಕಾಂ ಸಂಸ್ಥೆಯು ಕರ್ನಾಟಕ ವಿದ್ಯುತ್‌ ನಿಯಂತ್ರಣಾ ಆಯೋಗಕ್ಕೆ ಪ್ರಸ್ತಾವನೆಯೊಂದನ್ನು ನೀಡಿತ್ತು ಈಗ ಪ್ರಸ್ತಾವನೆಗೆ ಕೆಇಆರ್‌ಸಿ ಒಪ್ಪಿಗೆ ನೀಡಿದೆ. ಆದರಿಂದ ಯಾವ ಕ್ಷಣದಲ್ಲಿಲಾದರು ಈ ಹೊಸ ನಿಯಮವನ್ನು ಜಾರಿಗೆ ತರಬಹುದು ಎಂದು ತಿಳಿಸಿದ್ದಾರೆ.

ಬಿಬಿಎಂಪಿಯಿಂದ ಕೋಟ್ಯಂತರ ರು. ಬಾಕಿ:

Also read: ಭಾರತ ಪಾಕ್ ಮೇಲೆ ದಾಳಿ ಮಾಡಿದರೆ ದೇಶದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ದಾರಿ; ದೇಶ ವಿರೋಧಿಗಳ ಪರ ಬ್ಯಾಟಿಂಗ್ ಮಾಡುತ್ತಿದ್ದಾರ ಮುಖ್ಯಮಂತ್ರಿ ಎಚ್.ಡಿ.ಕೆ??

ಬಿಬಿಎಂಪಿಯ ಬೀದಿ ದೀಪ ನಿರ್ವಹಣೆಗೆ ಸಂಬಂಧಿಸಿದಂತೆ ಕಳೆದ ವರ್ಷ ಟೆಂಡರ್‌ ಕರೆಯಲಾಗಿತ್ತು. ಕಳೆದ ಒಂದು ವರ್ಷದಿಂದ .25 ಕೋಟಿ ಮೊತ್ತದ ಹಣ ಗುತ್ತಿಗೆದಾರರಿಗೆ ಸಿಕಿಲ್ಲ. ಆದರಿಂದ 15 ಕೋಟಿಗೂ ಹೆಚ್ಚು ಮೊತ್ತವನ್ನು ಬೆಸ್ಕಾಂಗೆ ಕಟ್ಟುವುದು ಬಾಕಿಯಿದೆ. ಜತೆಗೆ ಕುಡಿಯುವ ನೀರು ಪೂರೈಕೆಗೆ ಅಳವಡಿಸಿರುವ 5 ಎಚ್‌ಪಿ ಹಾಗೂ 10 ಎಚ್‌ಪಿ ಪಂಪ್‌ಸೆಟ್‌ ಸಂಪರ್ಕದ ಹಣವನ್ನೂ ಸುಮಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿವೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಬೆಸ್ಕಾಂ ಅಧಿಕಾರಿಗಳು ಎಫ್‌ಐಆರ್‌ ಕೂಡ ದಾಖಲು ಮಾಡಿದ್ದಾರೆ. ಇವೆಲ್ಲ ಸಮಸ್ಯೆಗಳು ಬರಬಾರದು ಎಂದು ಈ ನಿಮಯ ಜಾರಿಗೆ ತಂದಿದೆ.