ಸಂಜೆ ಚಹಾದ ಜೊತೆ ಕಡಲೆಬೇಳೆ ಅಂಬಡೆ ಟೇಸ್ಟಿಯಾಗಿರುತ್ತದೆ. ಇದರ ರುಚಿ ಹೇಗಿರುತ್ತದೆ ಎಂದು ನೀವೆ ಮಾಡಿ ನೋಡಿ..!!

0
1172

ಬೇಕಾಗುವ ಸಾಮಗ್ರಿಗಳು:

 • 2 ಲೋಟ ಕಡಲೆಬೇಳೆ
 • 1/4 ಉದ್ದಿನಬೇಳೆ
 • ಕೊತ್ತಂಬರಿ ಸೊಪ್ಪು
 • 2 ಚಮಚ ಜೀರಿಗೆ
 • ಸ್ವಲ್ಪ ಇಂಗು
 • ಕರಿಬೇವಿನ ಸೊಪ್ಪು
 • ಅಕ್ಕಿ ಹಿಟ್ಟು
 • ಈರುಳ್ಳಿ
 • ಹಸಿಮೆಣಸು
 • ಹುಳಿ
 • ಕರಿಯಲು ಎಣ್ಣೆ

ಮಾಡುವ ವಿಧಾನ:

 • ಮೊದಲಿಗೆ ಕಡ್ಲೆಬೇಳೆಯನ್ನು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.
 • ನೆನೆಹಾಕಿದ ಕಡಲೆಬೇಳೆಗೆ ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತರಿ ತರಿಯಾಗಿ ಹಾಗೂ ಗಟ್ಟಿ ಇರುವಂತೆ ರುಬ್ಬಿಕೊಳ್ಳಿ.
 • ನಂತರ ಸಣ್ಣ ಉಂಡೆ ಮಾಡಿಕೊಂಡು ಅಂಬಡೆ ಆಕಾರದಲ್ಲಿ ತಟ್ಟಿಕೊಂಡು ಎಣ್ಣೆಯಲ್ಲಿ ಕರಿದರೆ ಬಿಸಿ ಬಿಸಿ ಕಡಲೆಬೇಳೆ ಅಂಬಡೆ ರೆಡಿ.
 • ಈ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕರಿಬೇವು, ಉಪ್ಪು, ಅಕ್ಕಿ ಹಿಟ್ಟು ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಈರುಳ್ಳಿ ಹಿಟ್ಟಿನೊಂದಿಗೆ ಸರಿಯಾಗಿ ಬೆರೆತ ನಂತರ ಅಂಗೈನಲ್ಲಿ ತಟ್ಟಿಕೊಂಡು ಸಣ್ಣದಾದ ಹಾಗೂ ಸ್ವಲ್ಪ ದಪ್ಪವಾದ ಉಂಡೆಯನ್ನು ಮಾಡಿಕೊಳ್ಳಿ.
 • ನಂತರ ಕಾಯಿದ ಎಣ್ಣೆಗೆ ಮಾಡಿಟ್ಟ ಉಂಡೆಯನ್ನು ಒಂದೊಂದಾಗಿ ಹಾಕಿ, ಬೇಯಿಸಿ.
 • ಈಗ ರುಚಿ ರುಚಿಯಾದ ಕಡಲೆಬೇಳೆ ಅಂಬಡೆ ತಿನ್ನಲು ಸಿದ್ಧ.