ರುಚಿಯಾದ, ಸ್ವಾದಿಷ್ಟಭರಿತ ಮತ್ತು ಫಟಾಫಟ್ ಅಂತ ಮಾಡಬಹುದಾದ ಬೇಸನ್ ಉಂಡೆ ಇಂದೇ ಟ್ರೈ ಮಾಡಿ..!!

0
896

ಹಬ್ಬ ಹಾಗೂ ವಿಶೇಷ ಸಮಾರಂಭಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿತಿಂಡಿಗಳ ಸಾಲಿನಲ್ಲಿ ಬೇಸನ್ ಉಂಡೆ ಕೂಡ ಒಂದು. ಬಾಯಲ್ಲಿಟ್ಟರೆ ಕರಗುವ ಈ ಉಂಡೆ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ.

ಬೇಕಾಗುವ ಪದಾರ್ಥಗಳು

  • ಹಸಿ ಕಡ್ಲೆ ಹಿಟ್ಟು 2 ಕಪ್
  • ತುಪ್ಪ 1 ಕಪ್
  • ಸಕ್ಕರೆ 1ಕಪ್
  • ಗೋಡಂಬಿ, ದ್ರಾಕ್ಷಿ, ಬಾದಾಮಿ

ಮಾಡುವ ವಿಧಾನ

  • ಸ್ಟವ್ ಹಚ್ಚಿ ದಪ್ಪ ತಳ ಇರುವ ಪಾತ್ರೆಯಲ್ಲಿ ತುಪ್ಪ ಕಾಯಲು ಬಿಡಿ. ತುಪ್ಪ ಕರಗಿದ ಮೇಲೆ ಅದಕ್ಕೆ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ಕೈ ಬಿಡದ ಹಾಗೆ ಚೆನ್ನಾಗಿ ಮಿಕ್ಸ್ ಮಾಡುತ್ತಿರಬೇಕು. ಸುಮಾರು 15ರಿಂದ 20 ನಿಮಿಷದವರೆಗೆ ಕೈ ಆಡಿಸುತ್ತಿರಬೇಕು. ಕಡಲೆಹಿಟ್ಟು ಮತ್ತು ತುಪ್ಪ ಚೆನ್ನಾಗಿ ಮಿಕ್ಸ್ ಆಗಿ ಪಾಕದ ರೀತಿ ಬರುವವರೆಗೂ ಕಲೆಸುತ್ತಿರಬೇಕು. ನಂತರ ತಣ್ಣಗಾಗಲು ಬಿಡಿ.
  • ಪಾಕ ಉಗುರು ಬೆಚ್ಚಗೆ ಇರುವಾಗ ಅದಕ್ಕೆ ಪುಡಿ ಮಾಡಿದ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ನಂತರ ಅದಕ್ಕೆ ದ್ರಾಕ್ಷಿ, ಗೋಡಂಬಿ, ಮತ್ತು ಬಾದಾಮಿ ಹಾಕಿ ಕಲೆಸಿ. ತದನಂತರ ಕೈಗೆ ಸ್ವಲ್ಪ ತುಪ್ಪ ಹಚ್ಚಿಕೊಂಡು ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆ ಮಾಡಿ. ಈಗ ಸಿಹಿಯಾದ ಬೇಸನ್ ಉಂಡೆ ಸವಿಯಲು ಸಿದ್ಧ.

ಕೃಪೆ: ಹೆಬ್ಬಾರ್ಸ್ ಕಿಚನ್