ಆರೋಗ್ಯಕ್ಕೂ ಹಿತ ಹಾಗು ರುಚಿಗೂ ಚೆನ್ನ ಈ ಹಾಗಲಕಾಯಿ ಪಕೋಡ, ಇಂದೇ ಟ್ರೈ ಮಾಡಿ..!!

0
800

ಬೇಕಾಗುವ ಸಾಮಗ್ರಿಗಳು:

 • ಹಾಗಲಕಾಯಿ
 • ಕಡಲೆಹಿಟ್ಟು
 • ಅಕ್ಕಿ ಹಿಟ್ಟು
 • ಬೆಣ್ಣೆ
 • ಅಚ್ಚು ಖಾರದ ಪುಡಿ
 • ಈರುಳ್ಳಿ
 • ಇಂಗು
 • ಜೀರಿಗೆ
 • ಶುಂಠಿ
 • ಕರಿಬೇವು
 • ರುಚಿಗೆ ತಕ್ಕಷ್ಟು ಉಪ್ಪು
 • ಎಣ್ಣೆ

ಮಾಡುವ ವಿಧಾನ :

 • ಮೊದಲು ಹಾಗಲಕಾಯಿಯನ್ನು ತೊಳೆದು ಒಂದು ಭಾಗ ಸೀಳಿ. ಬೀಜ ತೆಗೆದು ತೆಳುವಾಗಿ ಹೋಳುಗಳಾಗಿ ಕತ್ತರಿಸಿ ಅರಿಶಿಣ ಸವರಿ ಐದು ನಿಮಿಷ ಬಿಡಿ.
 • ನಂತರ ಒಂದು ಪಾತ್ರೆಯಲ್ಲಿ ೧ ಕಪ್ ಕಡಲೆ ಹಿಟ್ಟು ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ಬೆಣ್ಣೆ, ಅಚ್ಚು ಖಾರದ ಪುಡಿ, ತುರಿದ ಶುಂಠಿ, ಕತ್ತರಿಸಿದ ಕರಿಬೇವು, ಸ್ವಲ್ಪ ಜೀರಿಗೆ, ಇಂಗು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ತೆಳುವಾಗಿ ಬೋಂಡದ ಹಿಟ್ಟಿನಂತೆ ಕಲೆಸಿಕೊಳ್ಳಿ.
 • ಈಗ ಅದರಲ್ಲಿ ಕತ್ತರಿಸಿದ ಹಾಗಲಕಾಯಿಯನ್ನು ಉದ್ದನೇಯದಾಗಿ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ ಹೊಂಬಣ್ಣ ಬರುವವರೆಗೆ ಪಕೋಡದಂತೆ ಕರಿಯಿರಿ.
 • ರುಚಿಯಾದ ಹಾಗಲಕಾಯಿ ಕ್ರಿಸ್ಪಿ ಪಕೋಡ ಸವಿಯಲು ಸಿದ್ದ.