ಸಂಜೆ ಟೀ ವೇಳೆಯಲಿ ಚಳಿ ಚಳಿಯಲಿ ಬಿಸಿ ಬಿಸಿಯಾಗಿ ತಿನ್ನಿ ಕ್ಯಾಬೇಜ್‌ ಪಕೋಡ..!!

0
878

ಮಂಡಕ್ಕಿ ಜೊತೆ ಸಂಜೆ ಟೀ ಸಮಯದಲ್ಲಿ ಬಿಸಿಯಾಗಿ ಸವಿಯಲಿ ರುಚಿಯಾದ ಕ್ಯಾಬೇಜ್‌ ಪಕೋಡ ಮಾಡಿ ಸವಿಯಿರಿ

ಬೇಕಾಗುವ ಪದಾರ್ಥಗಳು

 • ಎಲೆಕೋಸು(ಕ್ಯಾಬೇಜ್)
 • ಈರುಳ್ಳಿ
 • ಕಡಲೆ ಹಿಟ್ಟು ಅರ್ಧ ಕಪ್
 • ಸ್ವಲ್ಪ ಕರಿಬೇವು
 • ಸ್ವಲ್ಪ ಅರಿಶಿಣ
 • ಅರ್ಧ ಚಮಚ ಖಾರದ ಪುಡಿ
 • ಎಣ್ಣೆ
 • ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ

 • ಎಲೆಕೋಸು, ಈರುಳ್ಳಿ, ಕಡಲೆ ಹಿಟ್ಟು ಅರ್ಧ ಕಪ್, ಸ್ವಲ್ಪ ಕರಿಬೇವು, ಸ್ವಲ್ಪ ಅರಿಶಿಣ, ಅರ್ಧ ಚಮಚ ಖಾರದ ಪುಡಿ ಎಲ್ಲಾ ಪದಾರ್ಥಗಳನ್ನು ಒಂದು ಬೌಲ್‌ ನಲ್ಲಿ ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ.
 • ನಂತರ ಪ್ಯಾನ್ ಅನ್ನು ಗ್ಯಾಸ್‌ ಉರಿ ಮೇಲೆ ಇಟ್ಟು ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ ಕಾಯಿಸಿ.
 • ನಂತರ ಕಾದ ಎಣ್ಣೆ ಕ್ಯಾಬೇಜ್‌ ಮಿಶ್ರಣವನ್ನು ಸ್ವಲ್ಪ-ಸ್ವಲ್ಪವಾಗಿ ಎಣ್ಣೆಯಲ್ಲಿ ಬಿಟ್ಟು, ಕಂದು ಬಣ್ಣ ಬರುವಾಗ ಎಣ್ಣೆಯಿಂದ ತೆಗೆಯಿರಿ.
 • ಬಿಸಿಯಾದ ಕ್ಯಾಬೇಜ್‌ ಪಕೋಡ ಸವಿಯಲು ಸಿದ್ದ.