ಕಡಿಮೆ ಸಮಯ ಹಾಗೂ ಸಾಮಗ್ರಿಗಳನ್ನು ಬಳಸಿ ರುಚಿಕರವಾದ ಎಗ್‌‌ ಬುರ್ಜಿ ಮಾಡುವ ವಿಧಾನ…!!

0
1194

ಬೇಕಾಗುವ ಸಾಮಾಗ್ರಿಗಳು

 • 4 ಮೊಟ್ಟೆ
 • 2 ಈರುಳ್ಳಿ’2 ಟೊಮೆಟೊ
 • 3 ಹಸಿ ಮೆಣಸು
 • 1 ಕ್ಯಾಪ್ಸಿಕಂ
 • ಸ್ವಲ್ಪ ಶುಂಠಿ(ಚಿಕ್ಕದಾಗಿ ಕತ್ತರಿಸಿದ್ದು)
 • 1/4 ಕಪ್ ಕೊತ್ತಂಬರಿ ಸೊಪ್ಪು
 • 2 ಚಮಚ ಎಣ್ಣೆ
 • 1 ಚಮಚ ಜೀರಾ
 • 1 ಚಮಚನಿಂಬೆ ರಸ
 • 1 ಚಮಚ ಅರಿಶಿಣ ಪುಡಿ
 • ರುಚಿಗೆ ತಕ್ಕ ಉಪ್ಪು
 • 1 ಚಮಚ ಬೆಣ್ಣೆ
 • ಪಾವ್ ಬಾಜಿ ಮಸಾಲ
 • ಸ್ವಲ್ಪ ಇಂಗು

ಮಾಡುವ ವಿಧಾನ

 • ಒಂದು ದೊಡ್ಡ ಬಟ್ಟಲಿನಲ್ಲಿ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಕದಡಬೇಕು.
 • ಈಗ ಪ್ಯಾನ್‌ ತೆಗೆದು ಅದರಲ್ಲಿ ಎಣ್ಣೆ ಹಾಕಿ ನಂತರ ಜೀರಿಗೆ, ಈರುಳ್ಳಿ, ಇಂಗು, ಹಸಿ ಮೆಣಸು, ಕರಿಬೇವು ಮತ್ತು ಶುಂಠಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
 • ಈಗ ಟೊಮೆಟ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿ.
 • ನಂತರ 1 ಚಮಚ ಬೆಣ್ಣೆ ಹಾಕಿ, ಪಾವ್‌ ಬಾಜಿ ಮಸಾಲ, ಕೆಂಪು ಮೆಣಸಿನ ಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
 • ಕೊನೆಗೆ ಮೊಟ್ಟೆ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.
 • ಈಗ ನಿಂಬೆ ರಸ ಹಾಕಿ ಮಿಕ್ಸ್ ಮಾಡಿದರೆ ಎಗ್‌ ಬುರ್ಜಿ ಸವಿಯಲು ಸಿದ್ಧ.