ಕಡಲೆಬೇಳೆ-ತೊಗರಿಬೇಳೆ ಹೋಳಿಗೆ

0
2841

Kannada News | Recipe tips in Kannada

ಸಾಮಗ್ರಿ:

 • ಮೈದಾಹಿಟ್ಟು-2 ಕಪ್,
 • ಚಿರೋಟಿ ರವೆ 2 ಕಪ್,
 • ಕಡ್ಲೆಬೇಳೆ-2 ಕಪ್,
 • ತೊಗರಿಬೇಳೆ-2 ಕಪ್,
 • ಬೆಲ್ಲ-4 ಅಚ್ಚು,
 • ತೆಂಗಿನಕಾಯಿ-1.
 • ಅರಿಶಿನ-1/2 ಚಮಚ,
 • ಏಲಕ್ಕಿ ಪುಡಿ-1/2 ಚಮಚ,
 • ಎಣ್ಣೆ-1 ಕಪ್.:

ವಿಧಾನ

 • ಮೈದಾಹಿಟ್ಟು, ಚಿರೋಟಿ ರವೆಗೆ ಅರಿಶಿನ, ನೀರು, ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಕಣಕ ರೆಡಿಮಾಡಿಟ್ಟುಕೊಳ್ಳಿ.
 • ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು 1/2 ಗಂಟೆ ನೆನೆಸಿಟ್ಟು ನಂತರ ಬೇಯಿಸಿ. ಅರ್ಧ ಬೆಂದ ನಂತರ ತೊಳೆದ ತೊಗರಿಬೇಳೆಯನ್ನು ಹಾಕಿ ಚೆನ್ನಾಗಿ ಬೇಯಿಸಿ.
 • ಬೆಂದ ನಂತರ ಕಟ್ಟನ್ನು ಬಸಿದು ಬೆಲ್ಲ, ತೆಂಗಿನತುರಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕದಕಿ. ಗಟ್ಟಿಯಾದ ನಂತರ ಇಳಿಸಿ ಸ್ವಲ್ಪ ಬಿಸಿಯಿರುವಾಗಲೇ ಹೂರಣವನ್ನು ರುಬ್ಬಿಕೊಳ್ಳಿ.
 • ನಂತರ ಉಂಡೆ ಮಾಡಿಕೊಂಡು ಕಣಕಕ್ಕೆ ತುಂಬಿ ಬಾಳೆ ಎಲೆ ಅಥವಾ ಕವರ್ ಮೇಲೆ ಹೋಳಿಗೆ ಲಟ್ಟಿಸಿ ಎರಡೂ ಕಡೆ ಸಣ್ಣ ಉರಿಯಲ್ಲಿ ಬೇಯಿಸಿ ತುಪ್ಪದೊಂದಿಗೆ ಸವಿಯಿರಿ.

Also read: ಮೊಟ್ಟೆ ಪ್ರಿಯರಿಗಾಗಿ ಬಗೆ-ಬಗೆಯ ರುಚಿಯಲ್ಲಿ ತಯಾರಿಸಬಹುದಾದ ಆಮ್ಲೆಟ್‌ ರೆಸಿಪಿ..!!