ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸಿಹಿಯಲ್ಲಿ ಒಂದಾದ ಜಿಲೇಬಿಯನ್ನು ಮನೆಯಲ್ಲೇ ಸಿಂಪಲ್ ಆಗಿ ಮಾಡುವ ವಿಧಾನ..!!

0
2368

ಬೇಕಾಗುವ ಸಾಮಗ್ರಿ:

  • ಅಡುಗೆ ಎಣ್ಣೆ
  • 1 1/2 ಕಪ್‌ ಸಕ್ಕರೆ
  • 2 ಕಪ್‌ ಮೈದಾ
  • ಅರ್ಧ ಕಪ್‌ ಮಜ್ಜಿಗೆ (ಮೊಸರನ್ನಾದರೂ ಬಳಸಬಹುದು),
  • ಕಾಲು ಸ್ಪೂನ್‌ ಕೇಸರಿ
  • 1 ಸ್ಪೂನ್‌ ತುಪ್ಪ

ಮಾಡುವ ವಿಧಾನ:

  • ಒಂದು ಪಾತ್ರೆಗೆ ಮೈದಾ ಹಾಗೂ ಮಜ್ಜಿಗೆ (ಮೊಸರು) ಹಾಕಿ 2 ಗಂಟಾಗದಂತೆ ಚೆನ್ನಾಗಿ ಮಿಶ್ರಣ ಮಾಡಿ ಒಂದು ರಾತ್ರಿ ಹಾಗೆ ಬಿಡಿ.
  • ಮರುದಿನ ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ. ಬಟ್ಟೆಯೊಂದರಲ್ಲಿ ತೂತು ಮಾಡಿ ಆ ಬಟ್ಟೆಗೆ ಜಿಲೇಬಿ ಹಿಟ್ಟನ್ನು ಹಾಕಿ ನೇರವಾಗಿ ಬಿಸಿಯಾದ ತುಪ್ಪಕ್ಕೆ ಜಿಲೇಬಿ ಆಕಾರದಲ್ಲಿ ಹಿಟ್ಟನ್ನು ಹಾಕಿ ಹೊಂಬಣ್ಣಕ್ಕೆ ಬರುವತನಕ ಬೇಯಿಸಿಕೊಳ್ಳಿ.
  • ಮತ್ತೊಂದು ಬಾಣಲೆಯನ್ನು ಸ್ಟವ್‌ ಮೇಲಿಟ್ಟು ಬಿಸಿಯಾಗುವಾಗ ಸಕ್ಕರೆ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಕಲಕುತ್ತ ಬನ್ನಿ. ನಂತರ ಪಾಕದ ಹದಕ್ಕೆ ಬಂದಾಗ ಅದಕ್ಕೆ ಕೇಸರಿ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಇಳಿಸಿಡಿ.
  • ಹೊಂಬಣ್ಣ ಬಂದ ಜಿಲೇಬಿಯನ್ನು ಈಗ ಈ ಮಾಡಿಟ್ಟ ಸಕ್ಕರೆ ಪಾಕಕ್ಕೆ ಹಾಕಿ. ಬಿಸಿ ಬಿಸಿ ಜಿಲೇಬಿ ರೆಡಿ.