ದಕ್ಷಿಣ ಕರ್ನಾಟಕದ ಪ್ರತಿ ಹೋಟೆಲ್ ಮೆನುವಿನಲ್ಲಿ ಕಾಣಸಿಗುವ ಪೂರಿ ಮಾಡುವ ವಿಧಾನ..!!

0
1100

ಬೇಕಾಗುವ ಪದಾರ್ಥಗಳು

 • ಗೋಧಿ ಹಿಟ್ಟು – 2 ಕಪ್
 • ಸಣ್ಣ ರವೆ – 2 ಟೇಬಲ್ ಚಮಚ
 • ಬಿಸಿ ತುಪ್ಪ ಅಥವಾ ಎಣ್ಣೆ – 2 ಟೇಬಲ್ ಚಮಚ
 • ಉಪ್ಪು – ರುಚಿಗೆ ತಕ್ಕಷ್ಟು
 • ಎಣ್ಣೆ – ಕರಿಯಲು

ಮಾಡುವ ವಿಧಾನ.

 • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಗೋಧಿ ಹಿಟ್ಟು, ಸಣ್ಣ ರವೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
 • ನಂತರ 2 ಟೇಬಲ್ ಚಮಚ ಬಿಸಿ ತುಪ್ಪ ಅಥವಾ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ. ಹಂತ ಹಂತವಾಗಿ ಸ್ವಲ್ಪ ನೀರನ್ನು ಸೇರಿಸುತ್ತ ಹಿಟ್ಟುನ್ನು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರುವ ಹದಕ್ಕೆ ಕಲಸಿಕೊಳ್ಳಿ.
 • ಈಗ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಸ್ವಲ್ಪ ಎಣ್ಣೆ ಹಾಕಿ ಲಟ್ಟಿಸಿಕೊಳ್ಳಬೇಕು.
 • ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಲಟ್ಟಿಸಿಕೊಂಡ ಪೂರಿಗಳನ್ನು ಅದಕ್ಕೆ ಹಾಕಿ ಕರಿಯಬೇಕು, ರುಚಿಕರವಾದ ಆಲೂ ಪೂರಿ ಸವಿಯಲು ಸಿದ್ಧ.

ಸೂಚನೆ:

 • ರವೆ ಹಾಕುವುದರಿಂದ ಪೂರಿ ಚೆನ್ನಾಗಿ ಉಬ್ಬಿ, ಗರಿ ಗರಿಯಾಗುತ್ತದೆ.
 • ಹಿಟ್ಟನ್ನು ಲಟ್ಟಿಸಿಕೊಳ್ಳುವಾಗ ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ.
 • ಪುರಿಯನ್ನು ಕರೆಯುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.