ನೆಗಡಿ ನಿವಾರಕ- ರಸಾಲಾ ಮಾಡುವ ವಿಧಾನ..!!!!

0
1086

ರಸಾಲಾ ಇದು ಮೊಸರಿನಿಂದ ಯುಕ್ತಿಪೂರ್ವಕವಾಗಿ ತಾಯಾರಿಸಿದ ಪೇಯ. ಇದನ್ನು ಮಾರ್ಜಿಕ, ಶೀಕಾರಿಣಿ ಎಂದು ಕರೆಯುತ್ತಾರೆ. ಭೀಮನಿಂದ ತಯಾರಿಸಲ್ಪಟ್ಟ ಈ ರಸಾಲವನ್ನು ಶ್ರೀಕೃಷ್ಣನು ಆಸ್ವಾದಿಸಿ ಹೊಗಳಿದನೆಂದು ಸೂಪಶಾಸ್ತ್ರದಲ್ಲಿದೆ ಉಲ್ಲೇಖ. ಬೇಸಿಗೆಯಲ್ಲಿ ಸೇವಿಸಬೇಕಾದ ಮುಖ್ಯ ಪಾನೀಯ ಎಂಬುದು ಆಯುರ್ವೇದದ ಮಾತು. ಇಷ್ಟಲ್ಲದೆ ದೀರ್ಘಕಾಲೀನ ನೆಗಡಿಗು, ಬಾಯಿ ರುಚಿ ಇಲ್ಲದ ಅರುಚಿ ರೋಗದಲ್ಲಿಯೂ, ಮೈಯೆಲ್ಲಾ ಒಡೆದಿರುವ ಸಂದರ್ಭದಲ್ಲೂ, ನಿಶ್ಯಕ್ತಿಯಲ್ಲೂ ರಸಾಲ ಅತ್ಯುತ್ತಮ ಔಷಧಿಯಾಗಿದೆ.

ಬೇಕಾಗುವ ಪದಾರ್ಥಗಳು:

 • ನೀರು ಹಾಕದೆ ತಯಾರಿಸಿದ ಎಮ್ಮೆ ಹಾಲಿನ ಮೊಸರು- 320 ಗ್ರಾಂ
 • ಬಿಳಿ ಕಲ್ಲು ಸಕ್ಕರೆ: 160  ಗ್ರಾಂ
 • ತುಪ್ಪ -೧೦ ಗ್ರಾಂ
 • ಜೇನು -೧೦ ಗ್ರಾಂ
 • ಮೆಣಸಿನ ಕಾಳು- ೧೦ ಕಾಳು
 • ಜೀರಿಗೆ- ೫ಗ್ರಾಮ್
 • ಒಣಶುಂಠಿ- ೫ ಗ್ರಾಂ
 • ಚಂದನ- ೧/೨ ಗ್ರಾಂ
 • ಅಗರು,ಕುಂಕುಮ,ಪಚ್ಚಕರ್ಪೂರ ಒಟ್ಟಾಗಿ- ೧/೨ ಗ್ರಾಂ
 • ಮಣ್ಣಿನ ಮಡಿಕೆ- ೧

ತಯಾರಿಸುವ ವಿಧಾನ:

 1. ಬಿಳಿ ಕಲ್ಲುಸಕ್ಕರೆಯನ್ನು ನುಣ್ಣಗೆ ಪುಡಿಮಾಡಿ, ಮೆಣಸಿನಕಾಳುಮತ್ತು ಜೀರಿಗೆಯನ್ನು ತುಪ್ಪದಲ್ಲಿ ಕೆಂಪಾಗುವ ವರೆಗೂ ಹುರಿದು ಪುಡಿ ಮಾಡಬೇಕು.
 2. ಶ್ರೀಗಂಧ,ಅಗರು, ಕಸ್ತೂರಿ,ಕುಂಕುಮ ಕೇಸರಿಗಳನ್ನು ಒಟ್ಟಿಗೆ ಸೇರಿಸಿ  ಪುಡಿ ಮಾಡುವುದು.ನಂತರ ಮೇಲೆ ಹೇಳಿದ ಎಲ್ಲ ಪುಡಿಗಳನ್ನು ಒಟ್ಟಿಗೆ ಸೇರಿಸಿ ಕಲಿಸುವುದು.
 3. ಹಿಂದಿನ ದಿನ ರಾತ್ರಿ ಚೆನ್ನಾಗಿ ಹೆಪ್ಪು ಹಾಕಿ ತಯಾರಿಸಿದ, ಹೆಚ್ಚು ಹುಳಿಯಿರದ ಮೊಸರಿಗೆ ಜೇನು  ಮತ್ತು ತುಪ್ಪಗಳನ್ನು ಸೇರಿಸಿ.
 4. ತೊಳೆದು  ಒಣಗಿಸಿದ ಮಡಕೆಯ ಒಳಭಾಗಕ್ಕೆ ಪಚ್ಚಕರ್ಪೂರದ ಪುಡಿಯನ್ನು ಸವರಿ ಮಡಿಕೆಯ ಮುಖವನ್ನು ಒಂದು ಶುದ್ಧವಾದ ಬಟ್ಟೆಯಿಂದ ಕಟ್ಟುವುದು.
 5. ಅದರ ಮೇಲೆ ಮೊಸರನ್ನೂ ತಯಾರಿಸಲ್ಪಟ್ಟ ಪುಡಿಯನ್ನೂ ಸ್ವಲ್ಪ ಸ್ವಲ್ಪವಾಗಿ ಹಾಕುತ್ತಾ ಮೆಲ್ಲನೆ ಉಜ್ಜುವುದರಿಂದ ಮೊಸರಿನಲ್ಲಿರುವ ದ್ರವಭಾಗ ಮಡಿಕೆಯಲ್ಲಿ ಹನಿಯುತ್ತದೆ.
 6. ಹೀಗೆ ಮಾಡುತ್ತಾ ಮೊಸರಿನ ಘನಭಾಗವನ್ನು, ದ್ರವಭಾಗವನ್ನು ಬೇರ್ಪಡಿಸುವುದು.
 7. ಹೀಗೆ ಭೇರ್ಪಟ್ಟ ದ್ರವಭಾಗವೇ ರಸಾಲ..