ಅನೇಕ ರೋಗಗಳಿಗೆ ಏಕೈಕ ರಾಮಬಾಣ ಈ ಅತ್ತಿ ತಂಬುಳಿ..!!

0
1057

Kannada News | Recipe tips in Kannada

ಪ್ರಕೃತಿಯಲ್ಲಿ ಅಧಿಕ ಆಹಾರ ಮತ್ತು ಅಧಿಕ ಔಷಧ ಇರುವ ಸಸ್ಯ ಸಂಪತ್ತಿದೆ. ಎರಡೂ ಸಮ ಪ್ರಮಾಣದಲ್ಲಿರುವುದೂ ಇದೆ. ಇಂಥ ಮರಗಳಿಗೆ ಹಾನಿಯಾಗದಂತೆ ರಕ್ಷಿಸುವದು ಭಾರತೀಯ ಪರಂಪರೆಯಲ್ಲಿದೆ. ಇಂತಹ ಮರಗಳ ಪೈಕಿ ಪೂಜನೀಯ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಅತ್ತಿ ಮರ ಆರೋಗ್ಯದ ದೃಷ್ಠಿಯಿಂದ ಸರ್ವ ರೀತಿಯಲ್ಲೂ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತದೆ. ಇದರ ಚಿಗುರು, ಕಾಯಿ, ಹಣ್ಣು, ತೊಗಟೆ, ಬೇರು ಹಾಗೂ ಬೇರಿನಿಂದ ಒಸರುವ ರಸಗಳು ಅಡುಗೆಯಲ್ಲಿ ಸ್ಥಾನಪಡೆದಿವೆ.

ಅದರಲ್ಲಿ ಅತ್ತಿ ಮರದ ತಂಬುಳಿ ಸೇವನೆಯಿಂದ ಮೂತ್ರ ಹೋಗುವಾಗ ಉರಿತ/ನೋವಿನಿಂದ ಮುಕ್ತಿ ಹೊಂದಬಹುದು. ಇದನ್ನು ಸುಮಾರು 15ದಿನಗಳ ಕಾಲ ನಿತ್ಯ ಸೇವಿಸಿದರೆ ಶೀಘ್ರ ವೀರ್ಯಸ್ಪಲನ ಕಡಿಮೆಯಾಗಿ ಮೂತ್ರ ವಿಸರ್ಜನೆ, ಶ್ವೇತಪದರ, ಮೂಗಿನಲ್ಲಿ ರಕ್ತಸ್ರಾವ ಇತ್ಯಾದಿ ವ್ಯಾದಿಗಳು ಗುಣಮುಖವಾಗುತ್ತವೆ. ಒಟ್ಟಾರೆ ಆಯುರ್ವೇದ ಔಷಧಿಯಲ್ಲಿ ತನ್ನದೇ ಪಾತ್ರವಹಿಸುತ್ತಾ ಔಷಧಿಯ ಗುಣ ಹೊತ್ತಿರುವ ಅತ್ತಿ ಮರದ ಉಪಯೋಗವನ್ನು ತಿಳಿದು ಅದರ ಸದುಪಯೋಗಿಸಿಕೊಳ್ಳುವುದು ಒಳ್ಳೆಯದು.

ಅತ್ತಿ ಮರದ ತಂಬುಳಿ ಮಾಡುವ ವಿಧಾನ

ಅತ್ತಿಯ ಮರದ ಎಂಟು ಕುಡಿಗಳನ್ನು ಬೆಣ್ಣೆ ಅಥವಾ ತುಪ್ಪದಲ್ಲಿ ಬಾಡಿಸಿಕೊಂಡು ಅರ್ಧ ಚಮಚೆ ಜೀರಿಗೆ, ಎಂಟು ಮೆಣಸಿನಕಾಳುಗಳ ಜೊತೆ ಅರೆದು ಒಂದು ಕಪ್ ದಪ್ಪ ಕಡೆದ ಮೊಸರನ್ನು ಸೇರಿಸಿ ಕುಡಿಯುವ ಮಜ್ಜಿಗೆಯ ಹದಕ್ಕೆ ಬರುವಂತೆ ನೀರು ಹಾಗೂ ಒಂದುವರೆ ಚಮಚ ಉಪ್ಪು ಸೇರಿಸಿದರೆ ತಂಬುಳಿ ಸಿದ್ಧ.

Also Read: ಮೆಂತ್ಯ ಸೊಪ್ಪಿನ ಪರೋಟ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ …!