ಚಿತ್ರಾನ್ನ, ಪುಳಿಯೊಗರೆ ಈ ಅಡುಗೆಗಳನ್ನು ತಿಂದು ಬೇಜಾರಾಗಿದೆಯೇ ಹಾಗಾದರೆ ಟೊಮೆಟೊ ಎಗ್ ರೈಸ್ ಟ್ರೈ ಮಾಡಿ…!!

0
2211

ಬೇಕಾಗುವ ಸಾಮಗ್ರಿಗಳು

 • ಒಂದು ಕಪ್ ಬೇಯಿಸಿದ ಅನ್ನ
 • ಬೇಯಿಸಿದ ಮೊಟ್ಟೆ
 • ೪ ಹಸಿಮೆಣಸು
 • ಟೊಮೆಟೊ
 • ೧ ಈರುಳ್ಳಿ ಹೆಚ್ಚಿದ್ದು
 • ಚಕ್ಕೆ, ಲವಂಗ, ಏಲಕ್ಕಿ
 • ಬಿರಿಯಾನಿ ಎಲೆ
 • ಶುಂಠಿ ಬೆಳ್ಳುಳ್ಳಿ ಪೇಸ್ಟ್
 • ಅರಿಶಿನ ಪುಡಿ ಸ್ವಲ್ಪ

 • ಧನಿಯಾ ಪುಡಿ
 • ಖಾರದ ಪುಡಿ
 • ಎಣ್ಣೆ
 • ನಿಂಬೆರಸ
 • ಪುದೀನ ಸೊಪ್ಪು
 • ಕೊತ್ತಂಬರಿ ಸೊಪ್ಪು
 • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

 • ಮೊದಲು ಒಂದು ಕಪ್ ಅನ್ನ ಮತ್ತು ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಂಡಿರಿ.
 • ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಬಿಸಿಯಾದ ನಂತರ ಅದಕ್ಕೆ ಚಕ್ಕೆ ಲವಂಗ, ಏಲಕ್ಕಿ, ಹೆಚ್ಚಿದ ಈರುಳ್ಳಿ, ಬಿರಿಯಾನಿ ಎಲೆ, ಸೇರಿಸಿ ಬಾಡಿಸಿ.
 • ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉದ್ದಕ್ಕೆ ಸೀಳಿದ ಹಸಿಮೆಣಸಿನ ಕಾಯಿ, ಟೊಮೆಟೊ, ಅರಿಶಿನ, ಉಪ್ಪು, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಧನಿಯಾ ಪುಡಿ, ಖಾರದ ಪುಡಿ ಮಿಕ್ಸ್ ಮಾಡಿ 2 ನಿಮಿಷ ಬೇಯಿಸಿ.
 • ಚೆನ್ನಾಗಿ ಬೇಯಿಸಿದ ನಂತರ ಇದಕ್ಕೆ ಅನ್ನ ಹಾಕಿ ಬೆರೆಸಿ ನಿಂಬೆ ರಸ ಹಿಂಡಿ ನಂತರ ಬೇಯಿಸಿದ ಮೊಟ್ಟೆಯನ್ನು ಕತ್ತರಿಸಿ ಇದಕ್ಕೆ ಸೇರಿಸಿ.

ಈಗ ರುಚಿ ರುಚಿಯಾದ ಎಗ್ ರೈಸ್ ಸವಿಯಲು ಸಿದ್ದ.