ನಿಮ್ಮ ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿಸಿಕೊಳ್ಳಲು ಈ ಪತ್ರೊಡೆ ಮಾಡಿಕೊಂಡು ತಿನ್ನಿ, ಆರೋಗ್ಯಕ್ಕೂ ಒಳ್ಳೇದು ರುಚಿಗೂ ಒಳ್ಳೇದು!!

0
2873

ಮಲೆನಾಡಿನ ಸಾಂಪ್ರಾದಾಯಿಕ ಅಡುಗೆಯಲ್ಲಿ ಪತ್ರೊಡೆಯೂ ಒಂದು. ಮಳೆಗಾಲದಲ್ಲಿ ಹಳ್ಳಿ ಕಡೆ ಸಿಗುವ ಕೆಸುವಿನ ಎಲೆಯಿಂದ ಇದನ್ನು ಹೆಚ್ಚಾಗಿ ತಯಾರು ಮಾಡ್ತಾರೆ. ಆದರೆ ಬಸಳೆಸೊಪ್ಪಿನ ಪತ್ರೊಡೆ ಎಂದಾದರೂ ಮಾಡಿ ಸವಿದಿದ್ದೀರಾ..? ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಒದಗಿಸುವಲ್ಲಿ ಬಸಳೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹಕ್ಕೆ ತಂಪು ನೀಡುವ ಸೊಪ್ಪಾಗಿದ್ದು, ರಕ್ತ ಕೆಡುವುದರಿಂದ ಉಂಟಾಗುವ ಕುರದಂತಹ ಆರೋಗ್ಯ ಸಮಸ್ಯೆಯನ್ನು ನಿವಾರಿಸುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅಡುಗೆಯಲ್ಲಿ ಬಸಳೆ ಸೊಪ್ಪನ್ನು ನಾನಾ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಅದರಲ್ಲಿ ಒಂದಾದ ಬಸಳೆಸೊಪ್ಪಿನ ಪತ್ರೊಡೆ ಯನ್ನು ಹೇಗೆ ಮಾಡುವುದು ಅಂತ ನಾವು ಇಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಬೇಕಾಗುವ ಸಾಮಗ್ರಿಗಳು

 • ಹೆಚ್ಚಿದ ಬಸಳೆಸೊಪ್ಪು,
 • ಕುಸುಬಲಕ್ಕಿ,
 • ಹಸಿ ಕೊಬ್ಬರಿ,
 • ಹುಣಸೆಹಣ್ಣು,
 • ಬ್ಯಾಡಗಿ ಮೆಣಸು,
 • ಕೊತ್ತಂಬರಿ ಕಾಳು,
 • ಉದ್ದಿನಬೇಳೆ,
 • ಜೀರಿಗೆ,
 • ಸ್ವಲ್ಪ ಇಂಗು,
 • ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

 • ಮೊದಲಿಗೆ 2ಕಪ್‌ ಕುಸುಬಲಕ್ಕಿಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ನೀರನ್ನು ಬಸಿದಿಟ್ಟುಕೊಳ್ಳಿ.
 • ಬ್ಯಾಡಗಿ ಮೆಣಸು, ಕೊತ್ತಂಬರಿ ಕಾಳು, ಉದ್ದಿನಬೇಳೆ, ಮತ್ತು ಜೀರಿಗೆ, ಮಸಾಲೆ ವಸ್ತುಗಳನ್ನು ಹುರಿದಿಟ್ಟುಕೊಳ್ಳಿ.
 • ನೆನೆಸಿದ ಅಕ್ಕಿ, ಹುರಿದ ಮಸಾಲೆ, ತೆಂಗಿನಕಾಯಿತುರಿ, ಹುಣಸೆಹಣ್ಣು ಇಷ್ಟನ್ನು ಸೇರಿಸಿ ಮಿಕ್ಸಿಯಲ್ಲಿ ಇಡ್ಲಿಹಿಟ್ಟಿನ ಹದಕ್ಕೆ ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹೆಚ್ಚಿದ ಬಸಳೆಸೊಪ್ಪನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
 • ಈ ಹಿಟ್ಟನ್ನು ಬಾಳೆಯ ಎಲೆಯಲ್ಲಿ ಮಡಚಿ ಹಬೆಯಲ್ಲಿ ಬೇಯಿಸುವುದು ಸಾಂಪ್ರದಾಯಿಕ ವಿಧಾನ. ಒಂದು ಇಡ್ಲಿ ಕುಕ್ಕರ್‍ನಲ್ಲಿ 6-7 ಕಪ್ ನೀರು ಹಾಕಿ, ಸ್ವಲ್ಪ ಬಿಸಿಯಾದ ನಂತರ ಇಡ್ಲಿ ಪ್ಲೇಟ್ ಇಟ್ಟು ಅದರ ಮೇಲೆ ಈ ಬಾಳೆಯ ಎಲೆಯಲ್ಲಿ ಮಡಚಿ ಇತ್ತ ಹಿಟ್ಟನ್ನು ಇಟ್ಟು ಹಬೆಯಲ್ಲಿ ಬೇಯಿಸಿ. ಇದನ್ನ ಕುಕ್ಕರ್‍ನಲ್ಲೂ ಬೇಯಿಸುವಾಗ ವಿಶಲ್ ಹಾಕ್ಬೇಡಿ. ವಿಶಲ್ ಬದಲಾಗಿ ಕುಕ್ಕರ್ ಮೇಲೆ ಒಂದು ಲೋಟವನ್ನು ಉಲ್ಟಾ ಹಾಕಿ. ಬಾಳೆಯ ಎಲೆಯಲ್ಲಿ ಬೇಯಿಸಿದ ಪತ್ರೊಡೆಗೆ ವಿಶಿಷ್ಟ ಪರಿಮಳ ಬರುತ್ತದೆ.
 • ಬಿಸಿ-ಬಿಸಿ ಪತ್ರೊಡೆಗೆ ತೆಂಗಿನೆಣ್ಣೆ, ತುಪ್ಪ ಸೂಪರ್ ಕಾಂಬಿನೇಶನ್..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522