ಕರಾವಳಿಯ ಜನಪ್ರಿಯ ಅಡುಗೆಯಲ್ಲಿ ಒಂದಾದ ನೀರ್ ದೋಸೆ ಮಾಡುವ ವಿಧಾನ…!

0
2730

ಮಸಾಲಾ, ಸೆಟ್ ದೋಸೆ ಸಾಮಾನ್ಯವಾಗಿ ಹೇಗೆ ಮಾಡುವುದು ಅಂತ ನಿಮಗೆ ಗೊತ್ತು…ಆದರೆ ಕರಾವಳಿಯ ಜನಪ್ರಿಯ ಅಡುಗೆ ನೀರ್ ದೋಸೆಯನ್ನು ಹೀಗೂ ಮಾಡಬಹುದು.…!!

ಉದ್ದಿನಬೇಳೆ ಉಪಯೋಗಿಸದೇ ದೋಸೆ ಮಾಡುವ ದೋಸೆಗಳಲ್ಲಿ ಮೊದಲಿಗೆ ಬರುವುದು ನೀರ್ ದೋಸೆ. ಇದು ನೋಡಲು ತೆಳ್ಳಗೆ ಪೇಪರ್ ನಂತೆ ಇದ್ದು, ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹಾಗೆ ಸುಲಭವಾಗಿ ಕೂಡ ಮಾಡಬಹುದು..

ಬೇಕಾಗುವ ಸಾಮಗ್ರಿಗಳು

  • ಅಕ್ಕಿ1 1/2 ಕಪ್
  • ತೆಂಗಿನ ತುರಿ1/2 ಕಪ್
  • ಸ್ವಲ್ಪ ಉಪ್ಪು
  • ಚಿಟಿಕೆ ಅಡುಗೆ ಸೋಡಾ
  • ಎಣ್ಣೆ ಸ್ವಲ್ಪ

ಮಾಡುವ ವಿಧಾನ

  • ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅಕ್ಕಿಯನ್ನು ರಾತ್ರಿ ನೆನೆಸಿಡಬೇಕು.
  • ಮರುದಿನ ಬೆಳೆಗ್ಗೆ ನೀರು ಬಸಿದು ಅಕ್ಕಿ ಮತ್ತು ತುರಿದ ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಚಿಟಿಕೆ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿಗೆ ನೀರು ಬೆರಿಸಿ ತೆಳುವಾಗಿ ಕಲೆಸಿಕೊಳ್ಳಿ.
  • ಕಾದ ಹೆಂಚಿನ ಮೇಲೆ ತೆಳುವಾಗಿ ದೋಶೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಬೇಯಿಸಿ. (ನೆನಪಿಡಿ ನೀರು ದೋಸೆಯನ್ನು ಎರಡು ಕಡೆ ಬೇಯಿಸಬಾರದು)